Earth rotation : ಭೂಮಿಯು ಗುಂಡಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವೆಲ್ಲರೂ ಬಾಲ್ಯದಲ್ಲಿಯೇ ಇದನ್ನು ಅಧ್ಯಯನ ಮಾಡಿದ್ದೇವೆ. ದುಂಡಗಿರುವ ಭೂಮಿ, ಸೂರ್ಯನ ಸುತ್ತ ಸುತ್ತುತ್ತದೆ. ಇದರಿಂದ ನಮಗೆ ಹಗಲು ರಾತ್ರಿ ಸಂಭವಿಸುತ್ತದೆ ಎಂದು ನಮಗೆ ತಿಳಿದಿದೆ. ಆದರೆ, ಭೂಮಿ ಹೇಗೆ ಸುತ್ತುತ್ತದೆ? ಇದಕ್ಕೆ ಸಂಬಂಧಿಸಿದ ಬಾಹ್ಯಾಕಾಶ ವಿಡಿಯೋಗಳನ್ನು ನಾವೆಲ್ಲ ನೋಡಿದ್ದೇವೆ. ಆದರೆ, ಭೂಮಿಯ ಮೇಲೆ ನಿಂತು ನೋಡಿದಾಗ ಭೂಮಿ ಹೇಗೆ ಸುತ್ತುತ್ತದೆ ಎಂಬುದನ್ನು ಬಹುಶಃ ಯಾರೂ ನೋಡಿಲ್ಲ. ಆದರೆ, ಸದ್ಯ ವೈರಲ್ ಆಗಿರುವ ವಿಡಿಯೋ ಆ ಅನುಭವನ್ನೂ ನೀಡಿದೆ.
ಅಂದಹಾಗೆ ಭೂಮಿಯ ಅತ್ಯಂತ ದೂರದ ಅಂಚನ್ನು ನಾವು ನೋಡಲು ಸಾಧ್ಯವಿಲ್ಲ. ಭೂಮಿಯ ಒಂದು ಭಾಗ ಮಾತ್ರ ಭೂಭಾಗವಾಗಿದ್ದರೆ, ಮುಕ್ಕಾಲು ಭಾಗ ನೀರಿನಿಂದ ಕೂಡಿದೆ. ಭೂಮಿಯು ದುಂಡಾಗಿದ್ದರೆ, ನಾವು ಹೇಗೆ ನೇರವಾಗಿ ನಿಲ್ಲಬಹುದು? ನಾವು ಕೆಳಗೆ ಬೀಳಬೇಕಲ್ಲವೇ? ಎಂಬ ಪ್ರಶ್ನೆಯು ಮೂಡುತ್ತದೆ. ಆದರೆ, ಅದಕ್ಕೆ ಉತ್ತರ ಗುರುತ್ವಾಕರ್ಷಣೆ ಎಂಬುದನ್ನು ನಾವು ಶಾಲೆಯಲ್ಲಿ ಇದ್ದಾಗಲೇ ಕಲಿತಿದ್ದೇವೆ. ಭೂಮಿಯ ಗುರುತ್ವಾಕರ್ಷಣೆಯು ನಮ್ಮನ್ನು ಬೀಳದಂತೆ ತಡೆಯುತ್ತದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಆಸೀಸ್ಗೆ ಶಾಕ್! ಮೂವರು ಪ್ರಮುಖ ಆಟಗಾರರು ಮಿಸ್?
ಭೂಮಿಯು ತಿರುಗುತ್ತಿರುವ ದೃಶ್ಯಗಳು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಭಾರತೀಯ ಖಗೋಳ ವಿಜ್ಞಾನಿ ಡೋರ್ಜೆ ಆಂಗ್ಚುಕ್ ಅವರು ಲಡಾಖ್‌ನ ಪ್ರಶಾಂತ ಭೂದೃಶ್ಯದ ವಿರುದ್ಧ ಭೂಮಿಯ ತಿರುಗುವಿಕೆಯ ಟೈಮ್-ಲ್ಯಾಪ್ಸ್ ವಿಡಿಯೋವನ್ನು ಸೆರೆಹಿಡಿದು, ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹ್ಯಾನ್ಲೆಯಲ್ಲಿರುವ ಭಾರತೀಯ ಖಗೋಳ ವೀಕ್ಷಣಾಲಯದಿಂದ ಚಿತ್ರೀಕರಿಸಲಾದ ಈ ವಿಡಿಯೋ ನಮ್ಮ ಗ್ರಹದ ಚಲನೆಯ ವಿಶಿಷ್ಟ ದೃಶ್ಯವನ್ನು ಕಣ್ಮುಂದೆ ಇಟ್ಟಿದೆ. ಹಗಲು ರಾತ್ರಿಯ ಪರಿವರ್ತನೆಯನ್ನು ವಿಡಿಯೋದಲ್ಲಿ ನೋಡಬಹುದು.
A Day in Motion – Capturing Earth’s Rotation
The stars remain still, but Earth never stops spinning. My goal was to capture a full 24-hour time-lapse, revealing the transition from day to night and back again. @IIABengaluru @asipoec (1/n) pic.twitter.com/LnCQNXJC9R
— Dorje Angchuk (@dorje1974) January 31, 2025
ಚಲನೆಯಲ್ಲಿ ಒಂದು ದಿನ – ಭೂಮಿಯ ತಿರುಗುವಿಕೆಯನ್ನು ಸೆರೆಹಿಡಿಯುವುದು. ನಕ್ಷತ್ರಗಳು ಸ್ಥಿರವಾಗಿರುತ್ತವೆ. ಆದರೆ, ಭೂಮಿಯು ಎಂದಿಗೂ ತಿರುಗುವುದನ್ನು ನಿಲ್ಲಿಸುವುದಿಲ್ಲ. ಪೂರ್ಣ 24-ಗಂಟೆಗಳ ಟೈಮ್ ಲ್ಯಾಪ್ಸ್ ಸೆರೆಹಿಡಿಯುವುದು ಹಾಗೂ ಹಗಲಿನಿಂದ ರಾತ್ರಿಗೆ ಮತ್ತು ರಾತ್ರಿಯಿಂದ ಹಗಲಿನ ಪರಿವರ್ತನೆಯನ್ನು ಬಹಿರಂಗಪಡಿಸುವುದು ನನ್ನ ಗುರಿಯಾಗಿತ್ತು ಎಂದು ವಿಡಿಯೋಗೆ ಡೋರ್ಜೆ ಆಂಗ್ಚುಕ್ ಶೀರ್ಷಿಕೆ ನೀಡಿದ್ದಾರೆ. (ಏಜೆನ್ಸೀಸ್)