Tamannaah Bhatia : ಭಾರತೀಯ ಸಿನಿಮಾ ರಂಗದ ಪ್ರಖ್ಯಾತ ನಟಿಯರಲ್ಲಿ ತಮನ್ನಾ ಭಾಟಿಯಾ ಕೂಡ ಒಬ್ಬರು. ಸರಿ ಸುಮಾರು ಎರಡು ದಶಕಗಳ ವೃತ್ತಿ ಜೀವನದಲ್ಲಿ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾಗಳಲ್ಲಿ ತಮ್ಮ ಅಭಿನಯ, ಡಾನ್ಸ್ ಮತ್ತು ಸೌಂದರ್ಯದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ.
18 ವರ್ಷಗಳ ಸಿನಿ ಪಯಣದಲ್ಲಿ ಯಾವುದೇ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ತಮನ್ನಾ, ಇದೀಗ ಆ ಚೌಕಟ್ಟಿನಿಂದ ಹೊರಬಂದು ತೀರಾ ಅಶ್ಲೀಲ ಎನಿಸುವ ದೃಶ್ಯಗಳಲ್ಲಿ ಮೈಚಳಿ ಬಿಟ್ಟು ನಟಿಸಿದ್ದು, ಹಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಆದರೂ ತಮ್ಮ ನಟನೆಯನ್ನು ಮುಂದುವರಿಸಿದ್ದಾರೆ.
ತಾಜಾ ಸಂಗತಿ ಏನೆಂದರೆ, ತಮನ್ನಾ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನಕ್ಕಾಗಿ ಭಾರಿ ಸುದ್ದಿಯಲ್ಲಿದ್ದಾರೆ. ತಮನ್ನಾ ಅವರು ಬಾಡಿ ಪಾಸಿಟಿವಿಟಿ ಬಗ್ಗೆ ಯೂಟ್ಯೂಬರ್ ಮಾಸೂಮ್ ಮಿನಾವಾಲಾ ಅವರೊಂದಿಗೆ ಮಾತನಾಡಿದ್ದು, ಎಲ್ಲರ ಗಮನ ಸೆಳೆದಿದೆ.
ನನಗೆ ನನ್ನ ದೇಹ ತುಂಬಾ ಇಷ್ಟ. ದಿನವಿಡೀ ಕೆಲಸ ಮಾಡಿ ಸ್ನಾನ ಮಾಡುವಾಗ, ನನ್ನ ದೇಹದ ಪ್ರತಿಯೊಂದು ಭಾಗಕ್ಕೂ ನಾನು ಧನ್ಯವಾದ ಹೇಳುತ್ತೇನೆ. ಕೇಳಲು ಇದು ಸ್ವಲ್ಪ ಹುಚ್ಚುತನದಂತೆ ಕಾಣಿಸಬಹುದು. ಆದರೆ ಏಕೆ ಮಾಡಬಾರದು? ನನ್ನ ದೇಹವು ಪ್ರತಿದಿನ ಏನೆಲ್ಲ ಅನುಭವಿಸುತ್ತದೆ ಎಂದು ನನಗೆ ತಿಳಿದಿದೆ. ನಾನು ನನ್ನ ದೇಹದ ಪ್ರತಿಯೊಂದು ಭಾಗವನ್ನು ಮುಟ್ಟುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ. ನನ್ನೊಂದಿಗಿದ್ದು ದಿನವನ್ನು ಉತ್ತಮಗೊಳಿಸಿದ್ದಕ್ಕಾಗಿ ನಾನು ಅದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ತಮನ್ನಾ ಹೇಳಿದರು.
ಅಂದಹಾಗೆ ತಮನ್ನಾ ಅವರು ನಟ ವಿಜಯ್ ವರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿರುವುದು ಗೊತ್ತೇ ಇದೆ. ಈ ವರ್ಷ ಇಬ್ಬರೂ ಮದುವೆಯಾಗುತ್ತಾರೆ ಎಂಬ ಸುದ್ದಿ ಇದೆ. ಆದಾಗ್ಯೂ, ತಮನ್ನಾ ಆಗಲಿ ಅಥವಾ ವಿಜಯ್ ವರ್ಮಾ ಆಗಲಿ ಮದುವೆಯ ಬಗ್ಗೆ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಿನಿಮಾ ವಿಚಾರಕ್ಕೆ ಬರುವುದಾದರೆ, ತಮನ್ನಾ ಅವರು ಕೊನೆಯದಾಗಿ ಕಾಣಿಸಿಕೊಂಡು ಸಿನಿಮಾ ಸಿಕಂದರ್ ಕಾ ಮುಖದ್ದರ್. (ಏಜೆನ್ಸೀಸ್)
ಏಕಾಂಗಿಯಾಗಿ ಅಟ್ಲಾಂಟಿಕ್ ಸಾಗರ ದಾಟಿದ ಜಿಎಸ್ಸೆಸ್ ಮೊಮ್ಮಗಳು! ಇದರ ಹಿಂದಿದೆ ಒಂದೊಳ್ಳೆ ಉದ್ದೇಶ | Ananya Prasad
ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಎಸ್ ಧೋನಿ! ಯಾವ ಪಕ್ಷದಿಂದ? MS Dhoni