

ಸಿಡ್ನಿ: ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೆಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ವೇಗಿ ಜೋಶ್ ಹ್ಯಾಸಲ್ವುಡ್ ಗಾಯದಿಂದಾಗಿ ಟೂರ್ನಿಯಲ್ಲಿ ಆಡುವ ಬಗ್ಗೆ ಅನುಮಾನ ಮೂಡಿದೆ. ಈಗಾಗಲೆ ಆಲ್ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕಮ್ಮಿನ್ಸ್ ಗೈರಾದರೆ ನಾಯಕನ ಹುದ್ದೆ ಅಲಂಕರಿಸಲು ಸ್ಟೀವನ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ರೇಸ್ನಲ್ಲಿದ್ದಾರೆ.
ಕಮ್ಮಿನ್ಸ್ ಇದುವರೆಗೆ ಬೌಲಿಂಗ್ ಅಭ್ಯಾಸ ಆರಂಭಿಸಿಲ್ಲ. ಕಮ್ಮಿನ್ಸ್ ಚಾಂಪಿಯನ್ ಟ್ರೋಫಿಗೆ ಫಿಟ್ ಆಗುವುದು ಬಹುತೇಕ ಅನುಮಾನವೆಂದು ಆಸೀಸ್ ತಂಡದ ಮುಖ್ಯ ಕೋಚ್ ಆಂಡ್ರೋ ಮೆಕ್ಡೊನಾಲ್ಡ್ ಬುಧವಾರ ಬಹಿರಂಗಪಡಿಸಿದ್ದಾರೆ. 2ನೇ ಮಗುವಿನ ನಿರೀೆಯಲ್ಲಿ ಕಮ್ಮಿನ್ಸ್ ಹಾಲಿ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಭಾರತ ವಿರುದ್ಧದ ಬಾರ್ಡರ್&ಗಾವಸ್ಕರ್ ಟ್ರೋಫಿಯ ವೇಳೆ ಕಮ್ಮಿನ್ಸ್ಗೆ ಪಾದದ ನೋವು ಕಾಣಿಸಿಕೊಂಡಿತ್ತು.
ಚಾಂಪಿಯನ್ಸ್ ಟ್ರೋಫಿಗೆ ತಂಡಗಳ ಅಂತಿಮ ಪಟ್ಟಿಯನ್ನು ಸಲ್ಲಿಸಲು ೆಬ್ರವರಿ 12 ಕೊನೇ ದಿನಾಂಕವಾಗಿದ್ದು, ೆಬ್ರವರಿ 19ರಿಂದ ಟೂರ್ನಿ ನಡೆಯಲಿದೆ. ಆಸೀಸ್ ಈ ಮುನ್ನ ಪ್ರಕಟಿಸಿದ್ದ ತಂಡದಲ್ಲಿ ಕಮ್ಮಿನ್ಸ್, ಮಾರ್ಷ್, ಹ್ಯಾಸಲ್ವುಡ್ ಸ್ಥಾನ ಪಡೆದಿದ್ದರು. ಹೀಗಾಗಿ ಆಸೀಸ್ ಇದೀಗ ಮೂವರು ಬದಲಿ ಆಟಗಾರರನ್ನು ಹೆಸರಿಸಬೇಕಾಗಿದೆ. ಮಾರ್ಷ್ ಸ್ಥಾನದಲ್ಲಿ ಆಲ್ರೌಂಡರ್ ಮಿಚ್ ಓವನ್ ಮತ್ತು ಕಮ್ಮಿನ್ಸ್, ಹ್ಯಾಸಲ್ವುಡ್ ಸ್ಥಾನದಲ್ಲಿ ವೇಗಿಗಳಾದ ಸೀನ್ ಅಬೋಟ್ ಮತ್ತು ಸ್ಪೆನ್ಸರ್ ಜಾನ್ಸರ್ ಸ್ಥಾನ ಪಡೆಯುವ ನಿರೀಕ್ಷೆ ಇದೆ.
ಇನ್ನಿಬ್ಬರಿಗೂ ಗಾಯದ ಕಳವಳ!
ಚಾಂಪಿಯನ್ಸ್ ಟ್ರೋಫಿಗೆ ಆಸೀಸ್ ತಂಡದಲ್ಲಿ ಸ್ಥಾನ ಪಡೆದಿರುವ ಇನ್ನಿಬ್ಬರು ಆಟಗಾರರು ಹಾಗೂ ಆಲ್ರೌಂಡರ್ಗಳಾದ ಆರನ್ ಹಾರ್ಡಿ ಮತ್ತು ಮಾರ್ಕಸ್ ಸ್ಟೋಯಿನಿಸ್ ಕೂಡ ಗಾಯದ ಕಳವಳ ಹೊಂದಿದ್ದಾರೆ ಎನ್ನಲಾಗಿದೆ. ಸ್ಟೋಯಿನಿಸ್ ಇತ್ತೀಚೆಗೆ ದಣ ಆಫ್ರಿಕಾದ ಎಸ್ಎ20 ಲೀಗ್ನಲ್ಲಿ ಆಡುವಾಗ ಗಾಯಗೊಂಡಿದ್ದು, ಡರ್ಬನ್ ಸೂಪರ್ಜೈಂಟ್ಸ್ ತಂಡದ ಕೊನೇ ಪಂದ್ಯದಲ್ಲಿ ಬೌಲಿಂಗ್ ಮಾಡಿಲ್ಲ. ಹಾರ್ಡಿ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದು, ಅವರೂ ಬೌಲಿಂಗ್ನಲ್ಲಿ ಮಾಡುವಾಗ ಅಲ್ಪ ಸಮಸ್ಯೆ ಹೊಂದಿದ್ದಾರೆ.