

ಮುಂಬೈ: ನಿನ್ನೆ (ಮೇ.17) ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಭಾರೀ ಹಣಾಹಣಿಯಲ್ಲಿ ಕೆ.ಎಲ್. ರಾಹುಲ್ ಪಡೆ ಗೆದ್ದು ಬೀಗಿದ್ದೇ ಆದರೂ ಪ್ಲೇಆಫ್ ಪ್ರವೇಶ ಪಡೆಯಲು ವಿಫಲವಾಗಿದೆ. ಸದ್ಯ ಇದು ಪ್ಲೇಆಫ್ ರೇಸ್ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿಗೆ ಮತ್ತಷ್ಟು ಬಲ ತುಂಬಿದ್ದು, ಇಂದು ನಡೆಯಲಿರುವ ಮಾಡುವೇ ಇಲ್ಲವೇ ಮಡಿ ಪಂದ್ಯದಲ್ಲಿ ಹೇಗೆ ಆಡಲಿದೆ ಎಂಬುದನ್ನು ಮಾತ್ರ ಸದ್ಯ ಕಾದು ನೋಡಬೇಕಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹಾರ್ದಿಕ್ ಪಾಂಡ್ಯ ಪಡೆ, ಲಕ್ನೋ ನೀಡಿದ 215 ರನ್ಗಳ ಗುರಿಯನ್ನು ಚೇಸ್ ಮಾಡುವಲ್ಲಿ ವಿಫಲವಾಯಿತು. ಇದು ಮತ್ತೊಮ್ಮೆ ತಂಡದ ಸೋಲಿಗೆ ಕಾರಣವಾಗಿ, ಕಡೆಯ ಪಂದ್ಯವನ್ನು ಸಹ ವಶಪಡಿಸಿಕೊಳ್ಳದಂತೆ ಮಾಡಿತು. ಈ ವಿಷಯ ಮುಂಬೈ ಅಭಿಮಾನಿಗಳಿಗೆ ಭಾರೀ ಬೇಸರ ತಂಡೊಡ್ಡಿತು. ಇನ್ನು ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ನ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆಕೆಆರ್ ತಂಡದ ಸದಸ್ಯರೊಂದಿಗೆ ಮೈದಾನದಲ್ಲಿ ಮಾತನಾಡುವಾಗ ಹಿಂದಿನಿಂದ ಬಂದ ಕ್ಯಾಮರಾಮನ್ ವಿರುದ್ಧ ಸಿಡಿಮಿಡಿಗೊಂಡು, ಆತನಿಗೆ ಕೈಮುಗಿದು ಮೈಕ್ ಆಫ್ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮರ್ಯಾದೆ ಉಳಿಸಿಕೊಳ್ಳಲು ಕೈನಿಂದ ಮಿಷನ್ 50
ಈ ಹಿಂದೆಯೂ ಕೆಕೆಆರ್ ತಂಡದೊಂದಿಗೆ ರೋಹಿತ್ ಮಾತನಾಡಿದ್ದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದ ಬೇಸತ್ತಿದ್ದ ರೋಹಿತ್ ಶರ್ಮಾ, ಆದಷ್ಟು ಕ್ಯಾಮರಾ ಕಣ್ಣಿನಿಂದ ದೂರ ಉಳಿಯಲು ಬಯಸುತ್ತಿದ್ದರು.
ಹೀಗಿರುವಾಗಲೇ ನಿನ್ನೆಯೂ ಸಹ ರೋಹಿತ್ ಕೆಕೆಆರ್ ತಂಡದ ಸದಸ್ಯರೊಂದಿಗೆ ಸಂವಾದ ನಡೆಸುವಾಗ ಹಿಂದೆ ಬಂದ ಕ್ಯಾಮರಾಮನ್ ತನ್ನನ್ನು ಸೆರೆಹಿಡಿಯುತ್ತಿರುವುದನ್ನು ಕಂಡು ದೂರದಿಂದಲೇ ಕೈಮುಗಿದ ಹಿಟ್ ಮ್ಯಾನ್, ದಯವಿಟ್ಟು ಮೈಕ್ ಆಫ್ ಮಾಡಪ್ಪ ಎಂದು ಮನವಿ ಮಾಡಿದರು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).