ಹೂವುಗಳೆಂದರೆ ಇಷ್ಟ ಎಂದ ಅಥಿಯಾ ಶೆಟ್ಟಿ, ಗುಲಾಬಿ ಕಳುಹಿಸಿದ್ರು ಕೆಎಲ್ ರಾಹುಲ್!

ipl rahul athiya
Published on

ಬೆಂಗಳೂರು: ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ನಡುವಿನ ಪ್ರೀತಿಯ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಅಲ್ಲದೆ ಇವರಿಬ್ಬರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಪುಷ್ಠಿ ನೀಡುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ಹೂವಿನ ವಿಚಾರದಲ್ಲಿ ರಾಹುಲ್-ಅಥಿಯಾ ತಮ್ಮ ನಡುವಿನ ಪ್ರೀತಿಯನ್ನು ಬಿಚ್ಚಿಟ್ಟಿದ್ದಾರೆ.

ಅಥಿಯಾ ಶೆಟ್ಟಿ ಬುಧವಾರ ಸೂರ್ಯಕಾಂತಿ ಜತೆಗಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು. ಜತೆಗೆ ‘ಹೂವುಗಳು ನನಗೆ ಖುಷಿ ನೀಡುತ್ತವೆ’ ಎಂದು ಬರೆದುಕೊಂಡಿದ್ದರು. ಇದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿರುವ ಕೆಎಲ್ ರಾಹುಲ್, ಗುಲಾಬಿ ಹೂವಿನ ಇಮೋಜಿಯನ್ನು ಪ್ರಕಟಿಸಿದ್ದಾರೆ. ಇವರಿಬ್ಬರ ಈ ತುಂಟಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೆಎಲ್ ರಾಹುಲ್ ಅವರು ಸದ್ಯ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ಜತೆಗಿದ್ದು, ಶನಿವಾರದಿಂದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಅಥಿಯಾ ಶೆಟ್ಟಿ ಅವರ ಜನ್ಮದಿನದಂದು ರಾಹುಲ್, ಇಬ್ಬರ ಮುದ್ದಾದ ಚಿತ್ರವನ್ನು ಪ್ರಕಟಿಸುವ ಮೂಲಕ ಗಮನಸೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net