More

    2022ರಲ್ಲಿ 10 ತಂಡಗಳ ಐಪಿಎಲ್, ಬಿಸಿಸಿಐ ಎಜಿಎಂನಲ್ಲಿ ಒಪ್ಪಿಗೆ

    ಅಹಮದಾಬಾದ್: ನಿರೀಕ್ಷೆಯಂತೆಯೇ 2022ರಲ್ಲಿ 10 ತಂಡಗಳ ಐಪಿಎಲ್ ಟೂರ್ನಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) 89ನೇ ವಾರ್ಷಿಕ ಮಹಾಸಭೆಯಲ್ಲಿ (ಎಜಿಎಂ) ಒಪ್ಪಿಗೆ ನೀಡಲಾಗಿದೆ. ಇದರಿಂದ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ ಖಚಿತವೆನಿಸಿದೆ. ಇದರೊಂದಿಗೆ 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆಗೆ ಷರತ್ತುಬದ್ಧ ಬೆಂಬಲವನ್ನು ನೀಡಲು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ. ಕರೊನಾ ಹಾವಳಿಯಿಂದಾಗಿ ಪಂದ್ಯ ಆಡದೆ ಆದಾಯ ನಷ್ಟ ಅನುಭವಿಸಿರುವ ದೇಶೀಯ ಕ್ರಿಕೆಟಿಗರಿಗೆ ಪರಿಹಾರ ನೀಡುವುದರ ಸಹಿತ ಇತರ ಹಲವು ಮಹತ್ವದ ನಿರ್ಧಾರಗಳನ್ನೂ ಗುರುವಾರ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ.

    ಈ ವರ್ಷ ಯುಎಇಯಲ್ಲಿ ನಡೆದ ಟೂರ್ನಿಯ ಬಳಿಕ ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲೇ ಹೊಸ ತಂಡಗಳನ್ನು ಕಣಕ್ಕಿಳಿಸಲು ಬಿಸಿಸಿಐ ವಲಯದಲ್ಲಿ ಆಸಕ್ತಿ ಮೂಡಿತ್ತು. ಆದರೆ ಸಮಯಾವಕಾಶದ ಅಭಾವದಿಂದಾಗಿ ಹೊಸ ತಂಡಗಳ ಸೇರ್ಪಡೆಯನ್ನು 2022ರ ಆವೃತ್ತಿಗೆ ಮುಂದೂಡಲಾಗಿದೆ. 2021ರಲ್ಲಿ ಈಗಿರುವ 8 ತಂಡಗಳ ಟೂರ್ನಿಯೇ ನಡೆಯಲಿದೆ. 2 ಹೊಸ ತಂಡಗಳ ಸೇರ್ಪಡೆಗೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆ ಇದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಹೊಂದಿರುವ ಅಹಮದಾಬಾದ್‌ನಿಂದ ಒಂದು ಹೊಸ ತಂಡ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದೆ.

    ಇದನ್ನೂ ಓದಿ: ಹೇರ್‌ಕಟ್ ಮಾಡಿಸಿಕೊಳ್ಳದಂತೆ ಕ್ರಿಕೆಟಿಗರಿಗೆ ದಿಢೀರ್ ನಿರ್ಬಂಧ ಹೇರಿದ ಆಸ್ಟ್ರೇಲಿಯಾ!

    ರಾಜೀವ್ ಶುಕ್ಲಾ ಉಪಾಧ್ಯಕ್ಷ: ಹಿರಿಯ ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಅವರು ನಿರೀಕ್ಷೆಯಂತೆಯೇ ಮಂಡಳಿಯ ಹೊಸ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಉತ್ತರಾಖಂಡದ ಮಹಿಮ್ ವರ್ಮ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನವನ್ನು ಶುಕ್ಲಾ ತುಂಬಲಿದ್ದಾರೆ.

    ಗಂಗೂಲಿ ಐಸಿಸಿ ನಿರ್ದೇಶಕ: ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಐಸಿಸಿ ಮಂಡಳಿಗೆ ನಿರ್ದೇಶಕರಾಗಿ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಜತೆಗೆ ಕಾರ್ಯದರ್ಶಿ ಜಯ್ ಷಾ ಅವರು ಬದಲಿ ನಿರ್ದೇಶಕರಾಗಿ ಮತ್ತು ಐಸಿಸಿಯ ಮುಖ್ಯ ಕಾರ್ಯಕಾರಿ ಸಮಿತಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

    ಬೆಂಗಳೂರು ವಿಶ್ವ 10ಕೆ ಓಡಿದ 5 ತಿಂಗಳ ಗರ್ಭಿಣಿ ಅಂಕಿತಾ ಗೌರ್!

    ಪಿತೃತ್ವ ರಜೆ ವಿಚಾರದಲ್ಲಿ ಕೊಹ್ಲಿ-ನಟರಾಜನ್ ನಡುವೆ ಬಿಸಿಸಿಐ ತಾರತಮ್ಯ, ಗಾವಸ್ಕರ್ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts