More

    ಗೌತಮ್ ಗಂಭೀರ್ ಕ್ಯಾಂಟೀನ್‌ನಲ್ಲಿ 1 ರೂಪಾಯಿಗೆ ಊಟ!

    ನವದೆಹಲಿ: ಅಮ್ಮ-ಇಂದಿರಾ ಕ್ಯಾಂಟೀನ್‌ಗಳ ಮಾದರಿಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಪೂರ್ವ ದೆಹಲಿಯ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಬಡವರಿಗೆ 1 ರೂಪಾಯಿಗೆ ಊಟವನ್ನು ಪೂರೈಸುವ ‘ಜನ್ ರಸೋಯಿ’ ಕ್ಯಾಂಟೀನ್‌ಗಳನ್ನು ಆರಂಭಿಸಿದ್ದಾರೆ.

    ಗಾಂಧಿನಗರದಲ್ಲಿ ಗುರುವಾರ ಮೊದಲ ಕ್ಯಾಂಟೀನ್‌ಅನ್ನು ಗಂಭೀರ್ ಉದ್ಘಾಟಿಸಿದರು. ಅಶೋಕ್ ನಗರದಲ್ಲಿ ಗಣರಾಜ್ಯೋತ್ಸವದ ದಿನ ಇನ್ನೊಂದು ಕ್ಯಾಂಟೀನ್ ಆರಂಭಗೊಳ್ಳಲಿದೆ. ಪೂರ್ವ ದೆಹಲಿಯ 10 ಅಸೆಂಬ್ಲಿ ಕ್ಷೇತ್ರದಲ್ಲೂ ಕನಿಷ್ಠ 1 ‘ಜನ್ ರಸೋಯಿ’ ಆರಂಭಿಸುವುದು ಗಂಭೀರ್ ಅವರ ಯೋಜನೆಯಾಗಿದೆ.

    ಇದನ್ನೂ ಓದಿ: ಹೇರ್‌ಕಟ್ ಮಾಡಿಸಿಕೊಳ್ಳದಂತೆ ಕ್ರಿಕೆಟಿಗರಿಗೆ ದಿಢೀರ್ ನಿರ್ಬಂಧ ಹೇರಿದ ಆಸ್ಟ್ರೇಲಿಯಾ!

    ‘ಜಾತಿ-ಧರ್ಮ ಮತ್ತು ಆರ್ಥಿಕ ಸ್ಥಿತಿಗಳನ್ನು ಮೀರಿ ಆರೋಗ್ಯ ಮತ್ತು ಶುದ್ಧ ಆಹಾರವನ್ನು ಸೇವಿಸುವ ಹಕ್ಕು ಎಲ್ಲರಿಗೂ ಇದೆ ಎಂದು ನಂಬಿದವನು ನಾನು. ನಿರಾಶ್ರಿತರು ಮತ್ತು ಕಡು ಬಡವರು ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುವುದನ್ನು ನೋಡಿ ನಾನು ಬೇಸರಗೊಂಡಿದ್ದೆ. ಇದಕ್ಕಾಗಿ ಗಾಂಧಿ ನಗರದಲ್ಲಿ ಸುಸಜ್ಜಿತವಾದ ‘ಜನ್ ರಸೋಯಿ’ ಆಧುನಿಕ ಕ್ಯಾಂಟೀನ್ ಆರಂಭಿಸಲಾಗಿದೆ. ಅಗತ್ಯವಿರುವವರು ಇಲ್ಲಿಗೆ ಬಂದು ಕೇವಲ 1 ರೂಪಾಯಿ ನೀಡಿ ಊಟ ಮಾಡಬಹುದು’ ಎಂದು 2011ರ ಏಕದಿನ ಮತ್ತು 2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯ ಗಂಭೀರ್ ಹೇಳಿದ್ದಾರೆ.

    ಗೌತಮ್ ಗಂಭೀರ್ ೌಂಡೇಷನ್ ಮತ್ತು ಗಂಭೀರ್ ವೈಯಕ್ತಿಕ ಹಣದಿಂದ ಕ್ಯಾಂಟೀನ್ ನಡೆಸಲ್ಪಡಲಿದ್ದು, ಸರ್ಕಾರದಿಂದ ಯಾವುದೇ ನೆರವು ಪಡೆದುಕೊಳ್ಳಲಾಗುವುದಿಲ್ಲ. ಕ್ಯಾಂಟೀನ್‌ನಲ್ಲಿ 100 ಮಂದಿಗೆ ಊಟ ಮಾಡುವ ವ್ಯವಸ್ಥೆ ಇದೆ. ಆದರೆ ಕೋವಿಡ್-19 ಮಾರ್ಗಸೂಚಿಯಿಂದಾಗಿ ಸದ್ಯ ಏಕಕಾಲದಲ್ಲಿ 50 ಮಂದಿ ಮಾತ್ರ ಊಟ ಮಾಡಬಹುದಾಗಿದೆ.

    ಇದನ್ನೂ ಓದಿ: ಸೌಹಾರ್ದ ಪಂದ್ಯದಲ್ಲಿ ಗಂಗೂಲಿ ತಂಡವನ್ನು ಮಣಿಸಿದ ಜಯ್ ಷಾ ಇಲೆವೆನ್

    ಊಟದಲ್ಲಿ ಅನ್ನ, ಕಾಳು ಮತ್ತು ತರಕಾರಿ ಪದಾರ್ಥಗಳನ್ನು ನೀಡಲಾಗುವುದು. ಈಗಾಗಲೆ ಕಡಿಮೆ ಬೆಲೆಗೆ ಆಹಾರ ಪೂರೈಸುವ ಕ್ಯಾಂಟೀನ್‌ಗಳನ್ನು ಕೆಲ ರಾಜ್ಯ ಸರ್ಕಾರಗಳು ಆರಂಭಿಸಿದ್ದರೂ, ದೆಹಲಿಯಲ್ಲಿ ಇಂಥ ವ್ಯವಸ್ಥೆ ಇರಲಿಲ್ಲ. ಲಾಕ್‌ಡೌನ್ ಸಮಯದಲ್ಲಿ ಆಹಾರ ಮತ್ತು ಇತರ ಮೂಲಭೂತ ಸೌಕರ್ಯಗಳ ಪೂರೈಕೆಯ ಕೊರತೆಯಿಂದಾಗಿ ಸಾವಿರಾರು ವಲಸೆ ಕಾರ್ಮಿಕರನ್ನು ದೆಹಲಿಯಿಂದ ಹೊರಗೆ ಕಳುಹಿಸಲಾಗಿತ್ತು ಎಂದು ಗಂಭೀರ್ ಹೇಳಿದ್ದಾರೆ.

    ಬೆಂಗಳೂರು ವಿಶ್ವ 10ಕೆ ಓಡಿದ 5 ತಿಂಗಳ ಗರ್ಭಿಣಿ ಅಂಕಿತಾ ಗೌರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts