ಅವರು ಟ್ರೋಫಿ ಗೆದ್ರೆ ಆಶ್ಚರ್ಯ ಪಡಬೇಡಿ! ಐಪಿಎಲ್​ ಫೈನಲ್​ನಲ್ಲಿ ವಿನ್ನರ್​ ಯಾರೆಂದು ಭವಿಷ್ಯ ನುಡಿದ ಆಕಾಶ್​ ಚೋಪ್ರಾ

WhatsApp-Image-2024-05-26-at-4.50.53-PM
Published on

ಚೆನ್ನೈ: ಈ ಬಾರಿಯ ಐಪಿಎಲ್​ 17ನೇ ಆವೃತ್ತಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ, ಇದೀಗ ಫೈನಲ್ ಹಂತವನ್ನು ಪ್ರವೇಶಿಸಿರುವ ಶ್ರೇಯಸ್​ ಅಯ್ಯರ್​ ನೇತೃತ್ವದ ಕೊಲ್ಕತ್ತಾ ನೈಟ್ ರೈಡರ್ಸ್​ ಮತ್ತು ಪ್ಯಾಟ್​ ಕಮ್ಮಿನ್ಸ್​ ಕ್ಯಾಪ್ಟನ್ಸಿಯ ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಸದ್ಯ ಫೈನಲ್​ನಲ್ಲಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿದ್ದೇ ಆದರೂ ಮಳೆರಾಯನ ಅಡ್ಡಿ ಎದುರಾಗಲಿದ್ಯಾ? ಎಂಬ ಚಿಂತೆಯಲ್ಲಿದೆ.

ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪಿಎಲ್​ಗೆ ಇಂದಿನ (ಮೇ 26) ಫೈನಲ್​ ಪಂದ್ಯದ ಮೂಲಕ ತೆರೆ ಬೀಳಲಿದ್ದು, ಸನ್​ರೈಸರ್ಸ್​ ಹೈದರಾಬಾದ್​ ಹಾಗೂ ಕೋಲ್ಕತಾ ನೈಟ್​ರೈಡರ್ಸ್​ ಭಾರೀ ಹಣಾಹಣಿಯಲ್ಲಿ ತೊಡಗಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್​ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಖರೀದಿಸಿ ಕಾಯುತ್ತಿರುವ ಕ್ರಿಕೆಟ್ ಫ್ಯಾನ್ಸ್, ಸದ್ಯ ಮಳೆ ಬರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಒಂದೆಡೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಫೈನಲ್ ಹಣಾಹಣಿ ನಡೆಯುವುದೇ ಡೌಟ್ ಎನ್ನಲಾಗುತ್ತಿದೆ. ಮತ್ತೊಂದೆಡೆ ಈ ಎರಡು ಬಲಿಷ್ಠ ತಂಡಗಳ ಪೈಕಿ ನಾನು ಹೆಸರಿಸಿದ ತಂಡವು ಫೈನಲ್ ಗೆದ್ದು, ಐಪಿಎಲ್ 2024ರ ಟ್ರೋಫಿ ಎತ್ತಲಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ. ಸದ್ಯ ಈ ವಿಷಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

"ಎರಡು ಬಲಿಷ್ಠ ತಂಡಗಳ ಮಧ್ಯೆ ನಡೆಯಲಿರುವ ಫೈನಲ್ ಪಂದ್ಯ ನಿಜಕ್ಕೂ ರೋಚಕವಾಗಿ ಮೂಡಿಬರಲಿದೆ. ಈ ಮ್ಯಾಚ್​ ಖುಷಿ ನೀಡುವುದರಲ್ಲಿ ಅನುಮಾನವೇ ಬೇಡ. ಈ ಬಾರಿ ಸನ್​ರೈಸರ್ಸ್​ ಹೈದರಾಬಾದ್​ ಟ್ರೋಫಿ ಎತ್ತಿದರೆ, ಆಶ್ಚರ್ಯ ಪಡಬೇಡಿ. ಯಾಕಂದ್ರೆ, ಕೆಕೆಆರ್​ ಈಗಾಗಲೇ ಎರಡು ಬಾರಿ ಕಪ್ ಗೆದ್ದಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಎಸ್​ಆರ್​ಎಚ್​ ತಂಡವನ್ನು ಮಣಿಸಿ, ಕೆಕೆಆರ್ ಪಡೆ ಮತ್ತೊಮ್ಮೆ ಚಾಂಪಿಯನ್ಸ್​ ಪಟ್ಟ ಅಲಂಕರಿಸಲಿದ್ದಾರೆ" ಎಂದು ಭವಿಷ್ಯ ನುಡಿದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net