ವೀರೇಂದ್ರ ಹೆಗ್ಗಡೆ ಅವರಿಂದ ಕಷ್ಟಗಳಿಗೆ ಸ್ಪಂದನೆ : ಇಂದುಶೇಖರ ಶೆಟ್ಟಿ

neravu
ಅಪಘಾತ ಗಾಯಾಳಿಗೆ ಸಹಾಯಧನ ಮಂಜೂರಾತಿ ಪತ್ರ ವಿತರಿಸಲಾಯಿತು. ಇಂದುಶೇಖರ ಶೆಟ್ಟಿ, ಉಮೇಶ್ ಶೆಟ್ಟಿ, ಬಾಲಕೃಷ್ಣ ಗೌಡ ಪಾಲೇಚ್ಚಾರ್ ಮೊದಲಾದವರಿದ್ದರು.
Published on

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ತಾಲೂಕು ಆಲಂಕಾರು ವಲಯದ ಕುಂತೂರು ಕಾರ್ಯಕ್ಷೇತ್ರದ ವಿಘ್ನೇಶ್ವರ ಪ್ರಗತಿಬಂಧು ಸಂಘದ ಸದಸ್ಯ ಹರಿಪ್ರಸಾದ್ ಅವರು, ಬೈಕ್ ಅಪಘಾತದಲ್ಲಿ ಕೈ-ಕಾಲುಗಳಿಗೆ ತೀವ್ರತರದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ವಿಶೇಷ ನೆಲೆಯಲ್ಲಿ ಮಂಜೂರು ಮಾಡಿರುವ 20,000 ರೂ. ಮೊತ್ತದ ಸಹಾಯಧನ ಮಂಜೂರಾತಿ ಪತ್ರ ಅವರ ಸ್ವಗೃಹದಲ್ಲಿ ವಿತರಿಸಲಾಯಿತು.

ಆಲಂಕಾರು ವಲಯ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಇಂದುಶೇಖರ ಶೆಟ್ಟಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು, ಜನರ ಕಷ್ಟಗಳಿಗೆ ವಿವಿಧ ಕಾರ್ಯಕ್ರಮ ಮೂಲಕ ಸಹಾಯ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಯಾವುದೇ ಬ್ಯಾಂಕ್ ಸಹಾಯ ಮಾಡಲು ಹಿಂಜರಿಯುವಾಗ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮೂಲಕ ಪ್ರಗತಿನಿಧಿ ಸಾಲಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 13.5 ಶೇ. ಕಡಿಮೆ ಬಡ್ಡಿಯಲ್ಲಿ ದೊರಕಿಸಿಕೊಟ್ಟು ಕುಟುಂಬದ ಮೂಲಸೌಕರ್ಯ ಹಾಗೂ ಕೃಷಿ ಅಭಿವೃದ್ಧಿಗೆ ಶಕ್ತಿ ನೀಡಿದ್ದಾರೆ ಎಂದರು.

ಮಂಜೂರಾತಿ ಪತ್ರ ವಿತರಣೆ ಸಂದರ್ಭ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷ ಉಮೇಶ್ ಶೆಟ್ಟಿ, ಮಾಜಿ ವಲಯಾಧ್ಯಕ್ಷ ಬಾಲಕೃಷ್ಣ ಗೌಡ ಪಾಲೇಚ್ಚಾರ್, ವಲಯ ನವಜೀವನಸಮಿತಿ ಅಧ್ಯಕ್ಷ ನಾಗಪ್ಪಗೌಡ ಪಾಲೇಚ್ಚಾರ್, ಮೇಲ್ವೀಚಾರಕಿ ಯಶೋದಾ, ಸೇವಾಪ್ರತಿನಿಧಿ ಸವಿತಾ, ಮೋನಪ್ಪಗೌಡ ಕುಂಟ್ಯಾಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net