ಚನ್ನಗಿರಿ ಲಾಕಪ್​ ಡೆತ್​, ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ತನಿಖೆ ಸಿಐಡಿಗೆ ಹಸ್ತಾಂತರ!

dvg
Published on

ಚನ್ನಗಿರಿ (ದಾವಣಗೆರೆ): ಚನ್ನಗಿರಿ ಠಾಣೆಯಲ್ಲಿ ಲಾಕಪ್​ ಡೆತ್​, ಠಾಣೆ ಬಳಿ ದಾಂಧಲೆ ಪ್ರಕರಣ ಅಪರಾಧ ತನಿಖಾ ಇಲಾಖೆ ಸಿಐಡಿಗೆ ಹಸ್ತಾಂತರಿಸಲಾಗಿದೆ ಎಂದು ದಾವಣಗೆರೆ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​ ತಿಳಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ 25 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಎಸ್ಪಿ ಉಮಾ ‌ಪ್ರಶಾಂತ್​ ಮಾತನಾಡಿ, ಪ್ರಕರಣದ ತನಿಖೆ ಸಿಐಡಿಗೆ ವಹಿಸಲಾಗಿದೆ. ಶೀಘ್ರವಾಗಿ ಸಿಐಡಿ ಅಧಿಕಾರಿಗಳು ಪ್ರಕರಣವನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ ಎಂದರು.

ಈ ಘಟನೆಗೆ ಸಂಬಂಧಿಸಿದಂತೆ 25 ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದೇವೆ. ಬಂಧಿತರು ಚನ್ನಗಿರಿ, ಹೊನ್ನೆಬಾಗಿ, ನಲ್ಲೂರು ಗ್ರಾಮಗಳ ನಿವಾಸಿಗಳು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 353, 307ರಡಿ ಪ್ರಕರಣ ದಾಖಲಾಗಿದೆ.

ಕಾನೂನು ಪ್ರಕಾರ ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಮೂರು ದಿನದಲ್ಲಿ ಪೋಸ್ಟ್‌ ಮಾರ್ಟಂ ವರದಿ ಬರಲಿದ್ದು ಸತ್ಯ ಹೊರಬೀಳಲಿದೆ. ಪ್ರಕರಣದ ಬಗ್ಗೆ ಮಾಹಿತಿ ಚನ್ನಗಿರಿ ಡಿವೈಎಸ್​ಪಿ ಪ್ರಶಾಂತ ಮುನ್ನೊಳ್ಳಿ ಮಾಹಿತಿ ಪಡೆದುಕೊಂಡಿದ್ದಾರೆ. ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ​

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಐದು ತಂಡಗಳನ್ನು ರಚನೆ ಮಾಡಿದ್ದ ಪೊಲೀಸ್​​ ಸಿಸಿ ಸಿಸಿ ಕ್ಯಾಮರಾ, ಮೊಬೈಲ್ ಚಿತ್ರೀಕರಣದ ವಿಡಿಯೋ, ಸಾರ್ವಜನಿಕರು ಚಿತ್ರಿಕರಿಸಿದ ವಿಡಿಯೋಗಳನ್ನು ಪರಿಶೀಲಿಸುವ ಮೂಲಕ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದರು. ಆ ಮೂಲಕ 40 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಪತ್ತೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net