More

    ಲಾಕಪ್​ ಡೆತ್​: ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಜನರ ವಿಚಾರಣೆ!

    ಚನ್ನಗಿರಿ (ದಾವಣಗೆರೆ): ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ಶುಕ್ರವಾರ ನಡೆದ ಕಲ್ಲು ತೂರಾಟ, ವಾಹನಗಳ ಜಖಂ ಮಾಡಿದ ಘಟನೆ ಸಂಬಂಧ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಛತ್ತೀಸ್​ಗಢದ ಬಿಜಾಪುರದಲ್ಲಿ 33 ನಕ್ಸಲೀಯರು ಶರಣಾಗತಿ

    ಸಿಸಿ ಟಿವಿಯ ದೃಶ್ಯಗಳನ್ನು ಆಧರಿಸಿ ಸಂಶಯದ ಮೇಲೆ ಹಲವರನ್ನು ಠಾಣೆಗೆ ಕರೆತಂದು ಅವರ ಈ ಘಟನೆಯಲ್ಲಿ ಅವರ ಪಾತ್ರವಿದೆಯೆ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಆದರೆ ರಾತ್ರಿಯ ವರೆಗೆ ಯಾರನ್ನೂ ಬಂಧಿಸಿರಲಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

    ಠಾಣೆ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು ವಾಹನಗಳನ್ನು ಜಖಂಗೊಳಿಸಿದ್ದರು. ಮಟ್ಕಾ ಆರೋಪದಲ್ಲಿ ಆದಿಲ್​ನನ್ನ ಪೊಲೀಸರು ಠಾಣೆಗೆ ಕರೆತಂದಿದ್ದರು. ಪೊಲೀಸರ ವಶದಲ್ಲಿದ್ದಾಗ ಮೃತಪಟ್ಟಿದ್ದ. ಆದಿಲ್ ಸಾವಿನ ವಿಚಾರ ತಿಳಿದು ಉದ್ರಿಕ್ತರ ಗುಂಪಿನಿಂದ ಚನ್ನಗಿರಿ ಠಾಣೆ ಮೇಲೆ ದಾಳಿ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದರು.

    ಘಟನೆ ಏನು?

    ಪಟ್ಟಣದ ಆದಿಲ್‌ ಎಂಬುವವನನ್ನು ಪೊಲೀಸರು ಮಟ್ಕಾ ಪ್ರಕರಣದಲ್ಲಿ ಬಂಧಿಸಿ ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ಠಾಣೆ ಬಳಿ ಆ ವ್ಯಕ್ತಿ ಕುಸಿದು ಬಿದ್ದಾಗ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಪೊಲೀಸ್‌ ವಶದಲ್ಲಿದ್ದ ಆರೋಪಿ ಬದುಕುಳಿಯಲಿಲ್ಲ. ಲೋ ಬಿಪಿ ಆಗಿತ್ತು ಎಂದು ಪೊಲೀಸರು ಹೇಳುತ್ತಾರೆ.
    ಆದರೆ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಮೃತನ ಸಂಬಂಧಿಕರು, ಸ್ನೇಹಿತರು ಮೃತ ದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಪೊಲೀಸ್‌ ಠಾಣೆ ಮುಂದೆ ಇಟ್ಟು ನ್ಯಾಯ ಕೊಡಿ ಎಂದು ಪ್ರತಿಭಟನೆ ನಡೆಸಿದ್ದರು.

    ಈ ವೇಳೆ ಹೆಚ್ಚಿನ ಜನ ಒಮ್ಮೆಲೆ ಜಮಾಯಿಸಿ, ಲಾಕ್‌ಅಪ್‌ ಡೆತ್‌ ಎಂದು ಆರೋಪಿಸಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಪೀಠೋಪಕರಣ ಧ್ವಂಸ ಮಾಡಿದರು. ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿ, ಉದ್ರಿಕ್ತರು ಕಲ್ಲು ತೂರಾಟವನ್ನೂ ನಡೆಸಿದರು.

    ಟಿ20 ವಿಶ್ವಕಪ್‌: ಅಮೆರಿಕಕ್ಕೆ ಹಾರಿದ ಟೀಂ ಇಂಡಿಯಾದ ಮೊದಲ ಬ್ಯಾಚ್: ಐಪಿಎಲ್ ಬಳಿಕ 2ನೇ ಬ್ಯಾಚ್ ಪ್ರಯಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts