ಜತೆಗೆ, ವಿದ್ಯಾರ್ಥಿಗಳನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್ಗಳ ವ್ಯವಸ್ಥೆ ಕೂಡಾ ಸೋನು ಅವರ ತಂಡಗಳಿಂದ ನಡೆಯುತ್ತಿದೆ. ಟಿಕೆಟ್ ದರವನ್ನು ಭರಿಸಲಾಗದ ವಿದ್ಯಾರ್ಥಿಗಳಿಗೆ ವಿಮಾನದ ಟಿಕೆಟ್ ದರವನ್ನು ಪಾವತಿಸಿ, ಸುರಕ್ಷಿತವಾಗಿ ಭಾರತವನ್ನು ತಲುಪಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈಗ, ಯೂಕ್ರೇನ್ನಲ್ಲಿ ಸಿಲುಕಿ ಸೋನು ಸಹಾಯ ಪಡೆದಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳ ಮೂಲಕ ಧನ್ಯವಾದ ತಿಳಿಸುತ್ತಿದ್ದು, ಆ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.