ಈ ಹಿಂದೆ ಕಿರೀಟಿ ರೆಡ್ಡಿ ಅವರಿಗೆ ನಾಯಕಿ ಆಗುವ ಆ ಬೆಡಗಿ ಯಾರು ಎನ್ನುವ ಕುತೂಹಲ ಹಲವರಲ್ಲಿ ಇತ್ತು. ಅದಕ್ಕೀಗ ತೆರೆಬಿದ್ದಿದೆ. ಕನ್ನಡದ ಬೆಡಗಿಯಾದ ನಟಿ ಶ್ರೀಲೀಲಾ ಅವರೇ ಕಿರೀಟಿಗೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಕಿರೀಟಿ ರೆಡ್ಡಿ ನಟಿಸಲಿರುವ ಈ ಮೊದಲ ಸಿನಿಮಾದ ಟೈಟಲ್ ಅನ್ನು ಇನ್ನೂ ಚಿತ್ರತಂಡ ರಿವೀಲ್ ಮಾಡಿಲ್ಲ. ಆದರೆ, ಈ ಬಿಗ್ ಬಜೆಟ್ ಸಿನಿಮಾಗೆ ಮಾರ್ಚ್ 04 ರಂದು, ಅಂದರೆ ನಾಳೆ ಬೆಳಗ್ಗೆ 11:30ಕ್ಕೆ ಚಾಲನೆ ನೀಡಲಾಗುತ್ತಿದೆ. ಹೌದು, ಅಧಿಕೃತವಾಗಿ ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ತಾಜ್ ವೆಸ್ಟ್ಎಂಡ್ನಲ್ಲಿ ನಡೆಯಲಿದೆ. ಇನ್ನು, ಈ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ, ನಟ ವಿ.ರವಿಚಂದ್ರನ್ ಮತ್ತು ಕನ್ನಡ ಚಿತ್ರರಂಗದ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರಂತೆ.