ಹೊಸಬರ ಸಿನಿಮಾಗೆ ಸಾಥ್ ಕೊಟ್ಟ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ!

Published on
'ಸ್ಟಾರ್ ಕನ್ನಡಿಗ' ಅನ್ನೋ ಸಿನಿಮಾ ತಂಡ ಸೇರಿಕೊಂಡು ಈಗ 'ಮೈಕಲ್ ಅಂಡ್ ಮಾರ್ಕೊನಿ‌' ಎಂಬ ಸಿನಿಮಾ ಮಾಡುತ್ತಿದ್ದಾರೆ. 'ಸ್ಟಾರ್ ಕನ್ನಡಿಗ' ಸಿನಿಮಾದಲ್ಲಿ ಬಣ್ಣ ಹಚ್ಚಿ ಜತೆಗೆ ನಿರ್ದೇಶಕನಾಗಿ ಕೂಡಾ ಕೆಲಸ ಮಾಡಿದ ಮಂಜುನಾಥ್ ವಿ ಆರ್ ಅವರು ಇದೀಗ 'ಮೈಕಲ್ ಅಂಡ್ ಮಾರ್ಕೊನಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಶ್ರೀ ಮಂಜುನಾಥ್ ಪಿಕ್ಚರ್ಸ್ ಮತ್ತು ಹರೀಶ್ ಅವರು ಈ ಸಿನಿಮಾವನ್ನು ಒಟ್ಟಿಗೆ ನಿರ್ಮಿಸುತ್ತಿದ್ದಾರೆ.
ಹೌದು, ಒಂದು ಗ್ಯಾಂಗ್ ಸ್ಟಾರ್ ಬಗೆಗಿನ ಕಥೆ ಈ ಸಿನಿಮಾಗಿದ್ದು, ಚಿತ್ರದ ಟೈಟಲ್ ಅನ್ನು ನಟರಾಕ್ಷಸ ಡಾಲಿ ಧನಂಜಯ್ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಡುಗಡೆ ಮಾಡಿ ಈ ಚಿತ್ರತಂಡಕ್ಕೆ ಶುಭ ಹಾರೈಸಿ,‌ ಬೆನ್ನೆಲುಬಾಗಿ ನಿಂತಿದ್ದಾರೆ. ಇನ್ನು, ನಟ ಲೂಸ್ ಮಾದ ಯೋಗಿ ಕೂಡಾ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲೂಸ್ ಮಾದ ಯೋಗಿ ಅವರು 'ಮೈಕಲ್ ಅಂಡ್ ಮಾಕೋನಿ' ಸಿನಿಮಾದ ಟೈಟಲ್ ಹಾಗೂ ಬ್ಲಾಕ್ ಬಿಲ್ಲಿ ಎಂಬ ಕ್ಯಾರೆಕ್ಟರ್ ಇಂಟ್ರುಡಕ್ಷನ್​ಗೆ ಥ್ರಿಲ್ ಆಗಿ, ಇಡೀ ಟೀಂಗೆ ಶುಭ ಹಾರೈಸಿ, ಸಾಥ್ ಕೊಟ್ಟಿದ್ದಾರೆ. ಹೊಸಬರ ಈ ಹೊಸ ಪ್ರಯತ್ನಕ್ಕೆ ಸಾಥ್ ನೀಡಿ, ಜತೆಗೆ 'ಮೈಕಲ್ ಅಂಡ್ ಮಾಕೋನಿ' ಸಿನಿಮಾವನ್ನು ಪ್ರೋತ್ಸಾಹಿಸ ಬೇಕು ಎಂದು ಸಿನಿಪ್ರೇಕ್ಷಕರಲ್ಲಿ ಧನಂಜಯ್ ಮತ್ತು ಯೋಗಿ ಅವರು ವಿನಂತಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net