ಮುಂಬೈ: ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಹಿಂದಿಯಲ್ಲಿ ಅನೇಕ ಸ್ಟಾರ್ ಮಕ್ಕಳನ್ನು ಸಿನಿಮಾರಂಗದಲ್ಲಿ ಲಾಂಚ್ ಮಾಡಿ ಅವರಿಗೆ ಗಾಡ್ ಫಾದರ್ ಆಗಿದ್ದಾರೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತೆ ಇದೆ. ಹೌದು, ಯಾವ ಸ್ಟಾರ್ ಕುಟುಂಬದ ಮಕ್ಕಳಾದರೂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂದರೆ ಅವರನ್ನು ಬಹುತೇಕ ಪರಿಚಯಿಸೋದು ಕರಣ್ ಎಂಬುದು ಸಹಜ. ಡಿಂಪಲ್ ಬೆಡಗಿ ನಟಿ ಆಲಿಯಾ ಭಟ್, ನಟಿ ಅನನ್ಯಾ ಪಾಂಡೆ, ನಟ ವರುಣ್ ಧವನ್, ನಟಿ ಜಾನ್ವಿ ಕಪೂರ್ ಅಂತ ಹಲವು ಸ್ಟಾರ್ ಕಿಡ್ಗಳನ್ನು ಕರಣ್ ಜೋಹರ್ ಚಿತ್ರರಂಗದಲ್ಲಿ ಲಾಂಚ್ ಮಾಡಿದ್ದಾರೆ. ಇದೀಗ, ನಿರ್ಮಾಪಕ ಕರಣ್ ಜೋಹರ್ ಮತ್ತೋರ್ವ ಸ್ಟಾರ್ ನಟನ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸೋಕೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಇನ್ನು, ಆ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ.