ಸಮಂತಾರ 'ಅರೇಬಿಕ್​ ಕುತು' ರೀಲ್ಸ್​ ಹಿಂದಿನ ರಹಸ್ಯ ಬಯಲು: ಸಿನಿ ಇಂಡಸ್ಟ್ರಿಯಲ್ಲಿ ಇಷ್ಟೆಲ್ಲ ನಡೆಯುತ್ತಾ!?

Samantha
Published on

ಹೈದರಾಬಾದ್​: ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ಅಭಿನಯದ ಬೀಸ್ಟ್​ ಚಿತ್ರದ 'ಅರೇಬಿಕ್​ ಕುತು' ಹಾಡು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈಗಾಗಲೇ ಯೂಟ್ಯೂಬ್​ನಲ್ಲಿ ಮಿಲಿಯನ್​ಗಟ್ಟಲೇ ವೀಕ್ಷಣೆ ಪಡೆದುಕೊಂಡು ಮುನ್ನಗುತ್ತಿದೆ. ಅದರಲ್ಲೂ ನಾಯಕಿಯರು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲ್ಯುಯೆನ್ಸರ್​ಗಳು ಕೂಡ ಅರೇಬಿಕ್​ ಕುತು ಸಿಗ್ನೇಚರ್​ ಸ್ಟೆಪ್ಸ್​ ಹಾಕುವ ಮೂಲಕ ರೀಲ್ಸ್​ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದ ಮೇಲ್ಸುತುವೆ ಮೇಲೆ ನಟಿ ಸಮಂತಾ ಕೂಡ ಅರೇಬಿಕ್​ ಕುತು ಹಾಡಿಗೆ ಹೆಜ್ಜೆ ಹಾಕಿದ್ದರು. ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಅಪ್​ಲೋಡ್​ ಮಾಡಿಕೊಂಡಿದ್ದರು. ಸಿಕ್ಕಾಪಟ್ಟೆ ವೈರಲ್​ ಸಹ ಆಗಿದೆ. ಆದರೆ, ಇದರ ಹಿಂದೆ ಪ್ರಾಯೋಜಕತ್ವವೂ ಇದೆ ಎನ್ನಲಾಗಿದೆ. ಜನರು ಸಾಮಾನ್ಯವಾಗಿ ಇನ್​ಸ್ಟಾಗ್ರಾಂ ಸ್ಟೋರಿಗಳನ್ನು ನೋಡುವಾಗಲೂ ಇದೇ ವೀಡಿಯೊವನ್ನು ವೀಕ್ಷಿಸಿದ್ದು, ಇದೊಂದು ಸ್ಪಾನ್ಸರ್​ ವಿಡಿಯೋ ಎಂದು ಹೇಳಲಾಗಿದೆ. ಹಣ ನೀಡಿಯೇ ಚಿತ್ರತಂಡ ವಿಡಿಯೋ ಮಾಡಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನು ಇದೇ ಅರೇಬಿಕ್​ ಕುತು ಹಾಡಿಗೆ ಚಿತ್ರದ ನಾಯಕಿಯು ಆಗಿರುವ ಪೂಜಾ ಹೆಗ್ಡೆ ಕೂಡ ಡಾನ್ಸ್​ ಮಾಡಿದ್ದಾರೆ. ಇದು ಕೂಡ ಸ್ಪಾನ್ಸರ್​ ವಿಡಿಯೋ ಎಂದು ಹೇಳಲಾಗಿದೆ. ಹಣ ಕೊಟ್ಟು ನಾಯಕಿಯರಿಂದ ರೀಲ್ಸ್​ ಮಾಡಿಸಿ ವಿಡಿಯೋವನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸಮಂತಾ ಮತ್ತು ಪೂಜಾ ಅವರಂತಹ ನಾಯಕಿಯರ ರೀಲ್‌ಗಳನ್ನು ಪ್ರಚಾರ ಮಾಡಲು ತಯಾರಕರು ಏಕೆ ಇಷ್ಟೊಂದು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಉಂಟಾಗಿದೆ ಮತ್ತು ಅರೇಬಿಕ್ ಕುತುವಿನ ಯೂಟ್ಯೂಬ್ ವೀಕ್ಷಣೆಗಳು ಖಚಿತವೇ ಅಥವಾ ಪಾವತಿಸಿದ ಪ್ರಚಾರದ ಫಲಿತಾಂಶವೇ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಸಮಂತಾ, ಪೂಜಾ, ವೇದಿಕಾ ಸೇರಿದಂತೆ ಅನೇಕ ನಾಯಕಿಯರು ಅರೇಬಿಕ್​ ಕುತು ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಸಾಕಷ್ಟು ಸೋಶಿಯಲ್​ ಮೀಡಿಯಾ ಪ್ರಭಾವಿಗಳು ಕೂಡ ರೀಲ್ಸ್​ಗಳನ್ನು ಮಾಡಿ ಹರಿಬಿಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net