ಮಗಳ ವರಿಸಲು ಬಂದ ಅಳಿಯ ಅತ್ತೆಯೊಂದಿಗೆ ಪರಾರಿ!; ಯುಪಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ |Marriage

dk - 2025-04-29T173150.452
Published on

Marriage : ಯುವತಿಯನ್ನು ಮದುವೆಯಾಗಲು ಬಂದ 25ರ ಯುವಕ, ಭಾವಿ ಪತ್ನಿಯ ಅಮ್ಮನನ್ನು ಓಡಿಸಿಕೊಂಡ ಹೋದ ಘಟನೆ ಉತ್ತರಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಅಲ್ಲದೆ, ಇಲ್ಲಿನ ಅಲಿಗಢದಲ್ಲಿ ಇಂತದ್ದೆ ಘಟನೆ ಸಂಭವಿಸಿದ್ದು, ಇದು ಮಾಸುವ ಮುನ್ನವೇ ಈ ಅಘತಕಾರಿ ಪ್ರಕರಣ ಬೆಳಕಿಗೆ ಬಂದಿದೆ.

ದುಬೌಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ, ಭಾವಿ ಅಳಿಯ ತನ್ನ ಭಾವಿ ಅತ್ತೆಯೊಂದಿಗೆ ಓಡಿಹೋದ ಘಟನೆ ಆ ಪ್ರದೇಶದಲ್ಲಿ ಸಂಚಲನ ಮೂಡಿಸಿದ್ದು, ವಿಚಿತ್ರವೆನಿಸಿದೆ.

ಪ್ರಕರಣ ಏನು..?

ಇಲ್ಲಿನ ದುಬೌಲಿಯಾ ಪೊಲೀಸ್ ಠಾಣೆ ಪ್ರದೇಶದ ಹಳ್ಳಿಯ 25 ವರ್ಷದ ಯುವಕನ ವಿವಾಹವನ್ನು ಕೆಲವು ತಿಂಗಳ ಹಿಂದೆ ಗೊಂಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಿಶ್ಚಯಿಸಲಾಗಿತ್ತು. ಮದುವೆ ನಿಶ್ಚಯವಾದ ನಂತರ, ಹುಡುಗಿಯ ಮನೆಯವರು ಹುಡುಗನೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಆ ಹುಡುಗಿಯ ಕುಟುಂಬವು ತನ್ನ ಭಾವಿ ಪತ್ನಿಯೊಂದಿಗೆ ಮಾತನಾಡುವ ಬದಲು, ಆ ಯುವಕ ಅವಳ ತಾಯಿಯೊಂದಿಗೆ ಗಂಟೆಗಟ್ಟಲೆ ಮಾತನಾಡುತ್ತಿರುವುದು ವಿಚಿತ್ರವೆನಿಸಲು ಪ್ರಾರಂಭಿಸಿತು.

ಅಳಿಯ ಮತ್ತು ಅತ್ತೆಯ ನಡುವೆ ದೀರ್ಘ ಮೊಬೈಲ್ ಸಂಭಾಷಣೆಯ ಸಮಯದಲ್ಲಿ ಪ್ರೀತಿ ಅರಳಲು ಪ್ರಾರಂಭಿಸಿತು. ಇಬ್ಬರೂ ಪರಸ್ಪರ ಹತ್ತಿರ ಬರಲು ಪ್ರಾರಂಭಿಸಿದರು. ಹುಡುಗಿ ಮತ್ತು ಅವಳ ಕುಟುಂಬದವರು ತಮ್ಮ ಬೆಳೆಯುತ್ತಿರುವ ಆತ್ಮೀಯತೆಯನ್ನು ಅರಿತುಕೊಂಡಾಗ, ಅವರು ಆ ಯುವಕನೊಂದಿಗಿನ ತಮ್ಮ ಮಗಳ ಮದುವೆಯನ್ನು ತಕ್ಷಣವೇ ಬೇಡ ಎಂದು ರದ್ದು ಮಾಡಿದ್ದಾರೆ.ಅಲ್ಲದೆ, ಹುಡಿಗಿಗೆ ಬೇರೆ ಕಡೆ ಮದುವೆ ನಿಶ್ಚಯ ಮಾಡಿದ್ದಾರೆ.

ಆದರೆ, ಇಷ್ಟದರೂ ಅಳಿಯನಿಗೆ ಹುಡುಗಿಯ ತಾಯಿಯ ಮೇಲಿನ ಪ್ರೀತಿ ಕಡಿಮೆಯಾಗಲಿಲ್ಲ. ಮೂಲಗಳ ಪ್ರಕಾರ, ಇಬ್ಬರ ನಡುವೆ ಸಂಭಾಷಣೆ ಮುಂದುವರೆದಿದೆ. ಹುಡುಗಿಯ ಮದುವೆಗೆ ಕೆಲವೇ ದಿನಗಳು ಉಳಿದಿರುವಾಗ, ಇದ್ದಕ್ಕಿದ್ದಂತೆ ಭಾವಿ ಅಳಿಯ ತನ್ನ ಭಾವಿ ಅತ್ತೆಯೊಂದಿಗೆ ಓಡಿಹೋಗಿದ್ದಾನೆ.

ದೂರು ನೀಡಿದ ಯುವತಿ ಕುಟುಂಬ!

ಈ ಘಟನೆ ಎರಡೂ ಕುಟುಂಬಗಳನ್ನು ತೀವ್ರ ಆಘಾತಕ್ಕೆ ದೂಡಿದೆ. ಒಂದೆಡೆ, ಹುಡುಗಿಯ ಕುಟುಂಬವು ತಮ್ಮ ಮಗಳ ಮದುವೆಯ ಮುರಿದುಬಿದ್ದಿದ್ದು ಮತ್ತು ತಾಯಿಯ ಅನಿರೀಕ್ಷಿತ ನಡೆಯಿಂದ ಅಸಮಾಧಾನಗೊಂಡಿದ್ದರೆ, ಮತ್ತೊಂದೆಡೆ, ಹುಡುಗನ ಕುಟುಂಬವು ಸಹ ಈ ಘಟನೆಯಿಂದ ಆಘಾತಕ್ಕೊಳಗಾಗಿದೆ. ಇದರ ನಡುವೆ ಯುವತಿ ಕುಟುಂಬ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪರಾರಿಯಾದ ಇಬ್ಬರನ್ನು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net