

Shah Rukh Khan : ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಒಬ್ಬ ಗ್ಲೋಬಲ್ ಸ್ಟಾರ್. ಇವರಿಗೆ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ತನ್ನ ನೆಚ್ಚಿನ ನಟನ್ನು ನೋಡಲು ಅಭಿಮಾನಿಗಳು ಯಾವಾಗಲೂ ತುದಿಬೆರಳಲ್ಲಿ ಕಾಯುತ್ತಿರುತ್ತಾರೆ. ಅಲ್ಲದೆ, ಅವರ ಜತೆ ಫೋಟೋ ತೆಗೆಸಿಕೊಳ್ಳಲು ಫ್ಯಾನ್ಸ್ ಮುಗಿ ಬೀಳ್ತಾರೆ. ಇಂತಹ ಸಮಯದಲ್ಲಿ ಅಭಿಮಾನಿಯೊಬ್ಬರಿಗೆ ಎದುರಿಗೆ ತಮ್ಮ ಫೆವರೇಟ್ ಹೀರೋ ಕಂಡ್ರೆ ಅವರ ಸಂತೋಷಕ್ಕೆ ಪಾರವೇ ಇಲ್ಲ.
ಹೌದು, ವಿದೇಶದಲ್ಲಿದನ ಹೊಟೇಲ್ವೊಂದರಲ್ಲಿ ಕಾಣಿಸಿಕೊಂಡ ಕಿಂಗ್ಖಾನ್ ಅವರನ್ನು ಭೇಟಿ ಮಾಡಿದ ಮಹಿಳಾ ಅಭಿಮಾನಿಯೊಬ್ಬರು ಗಳಗಳನೇ ಅಳುವ ಮೂಲಕ ಶಾರುಖ್ ಭೇಟಿ ಬಗ್ಗೆ ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇತ್ತೀಚಿಗೆ ಜರ್ಮನಿಗೆ ಶಾರುಕ್ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಹೊಟೇಲ್ನಿಂದ ಹೊರ ಬಂದ ಶಾರುಖ್ ಕಾರು ಹತ್ತಲು ಹೋಗುತ್ತಾರೆ. ಈ ಸಂದರ್ಭದಲ್ಲಿ ಅಳುತ್ತಾ ವಿಡಿಯೋ ಮಾಡಿದ ಮಹಿಳಾ ಅಭಿಮಾನಿ, "ಗೈಸ್, ಈಗಷ್ಟೇ ಏನಾಯಿತು ಎಂದು ನೀವು ನಂಬುವುದಿಲ್ಲ. ನಾನು ಇಲ್ಲಿಗೆ ಬಂದಿದ್ದೇನೆ ಮತ್ತು ಅವರ ಅಂಗರಕ್ಷಕ ಹೊರಗೆ ಬರುವುದನ್ನು ನಾವು ನೋಡಿದ್ದೇವೆ. ಇದೀಗ ಇವರು ಕಾರು ಹತ್ತಿ ಹೋಗುತ್ತಿದ್ದಾರೆ ಎಂದಿದ್ದಾಳೆ.
ನಾನು ಹೋಟೆಲ್ನಲ್ಲಿ ವಿನಮ್ರವಾಗಿ ನಟನನ್ನು ಒಂದು ಅಪ್ಪುಗೆಯನ್ನು ಪಡೆಯಬಹುದೇ ಎಂದು ಕೇಳಿದೆ. ಬಳಿಕ ಶಾರುಖ್ ನನ್ನ ಮತ್ತು ನನ್ನ ಎಲ್ಲಾ ಸ್ನೇಹಿತರನ್ನು ತಬ್ಬಿಕೊಂಡರು. "ನಾನು ಅಳುತ್ತಿರುವುದನ್ನು ಅವರು ನೋಡಿದರು. ನಂತರ ಅವರು ನನ್ನ ತಲೆಯ ಮೇಲೆ ಕೈಯಿಟ್ಟು, 'ದೇವರು ನಿಮ್ಮನ್ನು ಆಶೀರ್ವದಿಸಲಿ' ಎಂದು ಹೇಳಿದನು ಎಂದು ಅವಳು ಸಂತೋಷದಿಂದ ಹೇಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. (ಏಜೆನ್ಸೀಸ್)