ಇವ್ರು ಗದ್ದೆ ಉಳುಮೆ ಮಾಡುವುದು ಟ್ರ್ಯಾಕ್ಟರ್​​ನಿಂದಲ್ಲ..ಬದಲಿಗೆ ಆಟೋದಿಂದ! Video Viral

Video Viral
Published on

Video Viral: ಇತ್ತೀಚಿನ ಆಧುನಿಕ ಯುಗದಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಆಗಿರುವುದನ್ನು ನಾವು ನೋಡಿದ್ದೇವೆ. ಇಂದಿನ ಬಹುತೇಕ ರೈತ ಜನರು ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬಿಟ್ಟು ತಂತ್ರಜ್ಞಾನವನ್ನೇ ಹೆಚ್ಚಾಗಿ ಅವಲಂಬಿಸಿ ಬದುಕುತ್ತಿದ್ದಾರೆ. ಗದ್ದೆ ಕೆಲಸಕ್ಕೆ ಜನರ ಬದಲಿಗೆ ಹೊಸ ತಂತ್ರಜ್ಞಾನ ಬಂತು, ಉಳುಮೆ ಮಾಡಲು ನೇಗಲಿನ ಬದಲು ಟ್ರ್ಯಾಕ್ಟರ್ ಬಂತು ಇವೆಲ್ಲಾ ಈಗಿನ ಕಾಲದಲ್ಲಿ ಸಾಮಾನ್ಯವಾಗಿದೆ. ಆದರೆ ಉಳುಮೆ ಮಾಡಲು ಟ್ರ್ಯಾಕ್ಟರ್ ಬದಲು ಆಟೋ ಬಳಸಿದ್ದನ್ನು ನೀವು ಎಂದಾದರೂ ಖಂಡಿದ್ದೀರಾ?

ಹೌದು, ಇಲ್ಲೊಬ್ಬ ಯುವಕ ತನ್ನ ಜಮೀನಿನಲ್ಲಿ ಉಳುಮೆ ಮಾಡಲು ಟ್ರ್ಯಾಕ್ಟರ್ ಬದಲಿಗೆ ಆಟೋ ಬಳಸಿದ್ದಾನೆ. ಈಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​​​ ವೈರಲ್​​ ಆಗುತ್ತಿದೆ.

ಇಲ್ಲಿದೆ ನೋಡಿ ವಿಡಿಯೋ

sajid hussain 786r ಹೆಸರಿನ  ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಗದ್ದೆಯನ್ನು ಉಳಿಮೆ ಮಾಡಲು ಯುವಕ ಆಟೋವನ್ನು ಬಳಸಿಕೊಂಡಿದ್ದಾನೆ. ಆಟೋದ ಹಿಂಭಾಗಕ್ಕೆ ಹಲಗೆಯನ್ನು ಕಟ್ಟಿದ್ದಾನೆ. ನಂತರ ಆ ವ್ಯಕ್ತಿ ಆಟೋವನ್ನು ಓಡಿಸುವಾಗ ಆಟೋ ಹಿಂದೆ ಕಟ್ಟಲಾಗಿರುವ ಹಲಿಗೆಯೆಂದಾಗಿ ಗದ್ದೆಯ ಮಣ್ಣು ಸಮತಟ್ಟಾಗುತ್ತಿರುವುದನ್ನು ಕಾಣಬಹುದು.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಶೇರ್​​ ಆಗಿತ್ತಿದ್ದಂತೆಯೇ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ ಜೊತೆಗೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ನೆಟ್ಟಿಗ ‘ಗದ್ದೆ ಉಳುಮೆ ಮಾಡಲು ಹೊಸ ಟೆಕ್ನಾಲಜಿ ಬಂತು’ಎಂದರೆ, ಮತ್ತೊಬ್ಬ ‘ಇದು ರೈತನ ಕೆಲಸವನ್ನು ಮತ್ತಷ್ಟು ವೇಗದಾಯಕವಾಗಿ ಮಾಡುತ್ತದೆ. ಈ ರೀತಿ ಐಡಿಯಾ ಬುದ್ಧಿವಂತರಿಗೆ ಮಾತ್ರ ಬರಲು ಸಾಧ್ಯ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಮನುಷ್ಯನು ಬುದ್ಧಿವಂತ ಎನ್ನುವುದೇನೋ ನಿಜ. ಆದರೆ ಇಷ್ಟು ಬುದ್ಧಿವಂತನೆಂದು ತಿಳಿದಿರಲಿಲ್ಲ’ ಎಂದು ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net