ತವರಿನಲ್ಲಿದ್ದ ಪತ್ನಿಯನ್ನು ಕರೆತರಲು ಹೋಗಿ ಅತ್ತೆಯ ಹೊಟ್ಟೆಗೆ ಚಾಕು ಇರಿದು ಪರಾರಿಯಾಗಿದ್ದ ಅಳಿಯ ಅಂದರ್​

Bng Son in Law
Published on

ಬೆಂಗಳೂರು: ಹೆಣ್ಣು ಕೊಟ್ಟ ಅತ್ತೆಗೆ ಅಳಿಯನೊಬ್ಬ ಚಾಕು ಇರಿದಿರುವ ಅಮಾನುಷ ಘಟನೆ ಬೆಳ್ಳಂದೂರು ಬಳಿಯ ಇಬ್ಬಲೂರಿನಲ್ಲಿ ನಡೆದಿದೆ.

ಗೀತಾ ಚಾಕು ಇರಿತಕ್ಕೊಳಾಗದ ಅತ್ತೆ. ಮನೋಜ್ ಚಾಕು ಇರಿದ ಅಳಿಯ. ಆರೋಪಿ ಮನೋಜ್ ತನ್ನ ಪತ್ನಿ ವರ್ಷಿತಾಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಗಂಡನ ದೌರ್ಜನ್ಯ ಸಹಿಸದೇ ಮನನೊಂದು ವರ್ಷಿತಾ ತವರು ಮನೆ ಸೇರಿದ್ದಳು.

ತವರಿನಲ್ಲಿದ್ದ ಪತ್ನಿಯನ್ನು ಕರೆತರಲು ಹೋಗಿದ್ದ ಮನೋಜ್, ಅತ್ತೆ ಮನೆಗೆ ಹೋಗಿದ್ದ. ಈ ವೇಳೆ ಅತ್ತೆ ಮತ್ತು ಅಳಿಯ ನಡುವೆ ಗಲಾಟೆ ನಡೆದಿತ್ತು. ಜಗಳ ತಾರಕ್ಕೇರಿದಾಗ ತಾಳ್ಮೆ ಕಳೆದುಕೊಂಡ ಮನೋಜ್​, ಅತ್ತೆ ಗೀತಾ ಹೊಟ್ಟೆಗೆ ಚಾಕು ಇರಿದು ಪರಿಯಾಗಿದ್ದ.

ಘಟನೆ ಬಳಿಕ ಅತ್ತೆ ಗೀತಾ ಅಳಿಯನ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಆರೋಪಿ ಅಳಿಯ ಮನೋಜ್​ನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net