More

    ಶೂ ಧರಿಸಿ ನಿಮ್ಮ ಪಾದಗಳಿಂದ ದುರ್ವಾಸನೆ ಬರುತ್ತಿದ್ದರೆ ಈ ಟಿಪ್ಸ್​ ಫಾಲೋ ಮಾಡಿ..

    ಬೆಂಗಳೂರು: ಶೂ ಧರಿಸಿ ಪಾದಗಳಿಂದ ಉಂಟಾಗುವ ದುರ್ವಾಸನೆಯಿಂದ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ನಮ್ಮ ಗೆಳೆಯರು, ಸಂಬಂಧಿಕರು, ನಮ್ಮ ಪಕ್ಕ ಬಂದು ಕೂರಲು ಕೂಡ ಹಿಂಜರಿಯುತ್ತಾರೆ. ಪಾದಗಳ ಬೆವರುವಿಕೆಯಿಂದಾಗಿ ಮುಜುಗರ ಅನುಭವಿಸುವ ಸಂದರ್ಭ ಬಂದೊದಗುತ್ತದೆ.

    ಅನೇಕ ವಿದ್ಯಾರ್ಥಿಗಳು, ನೌಕರರು, ಮಹಿಳೆಯರು ಇದರಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪಾದಗಳ ದುರ್ವಾಸನೆ ಸಮಸ್ಯೆಗೆ ನಾವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸಲಹೆ; ಪ್ರತಿದಿನ ಬೆಳಗ್ಗೆ ಬಾದಾಮಿ ಸೇವಿಸುವುದು ಎಷ್ಟು ಮುಖ್ಯ ಗೊತ್ತಾ?

    ಒಂದು ಅಗಲ ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ, ಈ ನೀರಿಗೆ ಒಂದು ಚಿಕ್ಕ ಕಪ್​ನಷ್ಟು ಅಡುಗೆ ಸೋಡಾ(ಬೇಕಿಂಗ್ ಸೋಡಾ) ಸೇರಿಸಿದ ಬಳಿಕ ಪಾದಗಳನ್ನು ಈ ನೀರಿನಲ್ಲಿ ನೆನೆಸಬೇಕು. 10-15 ನಿಮಿಷಗಳ ಬಳಿಕ ಪಾದಗಳನ್ನು ಹೊರತೆಗೆದು ಒಂದು ಕಾಟನ್ ಬಟ್ಟೆಯಿಂದ ಎಲ್ಲಿಯೂ ತೇವ ಇರದಂತೆ ಒರೆಸಿಕೊಳ್ಳಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ದುರ್ವಾಸನೆಯನ್ನು ತಡೆಗಟ್ಟಬಹುದಾಗಿದೆ.

    ಒಂದೆರಡು ಚಮಚ ವಿನೆಗರ್‌ ಹಾಕಿದ ಉಗುರು ಬೆಚ್ಚಗಿನ ಅರ್ಧ ಬಕೆಟ್ ನೀರಿನಲ್ಲಿ 15 ನಿಮಿಷಗಳವರೆಗೆ ಪಾದಗಳನ್ನು ನೆನೆಸಿ ಇಡುವುದರಿಂದ ಪಾದಗಳಿಂದ ಬರುವ ದುರ್ವಾಸನೆ ತಡೆಯಬಹುದಾಗಿದೆ. ಈ ಕ್ರಮವನ್ನು ಹರಳುಪ್ಪು ಬೆರೆಸಿದ ಬೆಚ್ಚಗಿನ ನೀರಿನಲ್ಲಿಯೂ ಕೂಡ ಅನುಸರಿಸಬಹುದಾಗಿದೆ.

    ಪ್ರತಿದಿನ ಸಾಕ್ಸ್ ಬದಲಾಯಿಸುವುದು ಅತ್ಯಾವಶ್ಯಕವಾಗಿದ್ದು, ಒಮ್ಮೆ ಬಳಸಿದ ಸಾಕ್ಸ್​ ಅನ್ನು ತೊಳೆಯದೆ ಮತ್ತೆ ಬಳಸಬೇಡಿ. ಒದ್ದೆಯಾಗಿರುವ ಸಾಕ್ಸ್ ಯಾವುದೇ ಕಾರಣಕ್ಕೂ ಧರಿಸಬೇಡಿ. ಪಾದಗಳಿಗೆ ಗಾಳಿಯ ಸಂಪರ್ಕ ಇಲ್ಲದಿರುವುದೇ ದುರ್ವಾಸನೆಗೆ ಕಾರಣವಾಗಿದ್ದು, ದೀರ್ಘಕಾಲ ಶೂ ಹಾಕಬೇಡಿ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts