ಸಿನಿಮಾ

ಉತ್ತಮ ಆರೋಗ್ಯಕ್ಕಾಗಿ ಸಲಹೆ; ಪ್ರತಿದಿನ ಬೆಳಗ್ಗೆ ಬಾದಾಮಿ ಸೇವಿಸುವುದು ಎಷ್ಟು ಮುಖ್ಯ ಗೊತ್ತಾ?

ಬೆಂಗಳೂರು: ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು. ಉತ್ತಮ ಆರೋಗ್ಯ ನಮ್ಮದಾಗ ಬೇಕು ಎಂದು ನಾವೆಲ್ಲರೂ ಆಸೆ ಪಡುತ್ತೇವೆ. ಆದರೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಇರುತ್ತದೆ. ನಾವು ಪ್ರತಿನಿತ್ಯ ಬೆಳಗ್ಗೆ ಒಂದು ಅಥವಾ ಎರಡು ಬಾದಾಮಿ ಸೇವಿಸುವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ.

ಬಾದಾಮಿಯಲ್ಲಿರುವ ಪೋಷಕಾಂಶ: ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯದಿಂದಾಗಿ ಬಾದಾಮಿಯನ್ನು ಆರೋಗ್ಯಕರ ಬೀಜಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅವು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳು, ಆರೋಗ್ಯಕರ ಕೊಬ್ಬುಗಳು, ಫೈಬರ್ ಮತ್ತು ಪ್ರೋಟೀನ್‌ಗಳಿಂದ ತುಂಬಿರುತ್ತವೆ.

ಬಾದಾಮಿಯನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ತೂಕ ನಿರ್ವಹಣೆ ಮತ್ತು ಕಡಿಮೆ ಆಕ್ಸಿಡೇಟಿವ್ ಒತ್ತಡ ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸಬಹುದು.

ಇದನ್ನೂ ಓದಿ: ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು ಗೊತ್ತಾ..?

ಪ್ರತಿದಿನ ಒಂದು ನಿಗದಿತ ಪ್ರಮಾಣದ ಬಾದಾಮಿ ತಿನ್ನುವುದರಿಂದ ಹೃದಯ ಆರೋಗ್ಯವಾಗಿರುತ್ತದೆ. ಹೃದಯ ರೋಗ ಹಾಗೂ ಮಧುಮೇಹದಿಂದ ದೂರವಿರಬಹುದು.

ಬಾದಾಮಿ ಸೇವನೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನಾರೋಗ್ಯದಿಂದ ಕಾಪಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Karnataka Assembly Election; ಮತದಾರರ ಯಾವ ಬೆರಳಿಗೆ ಶಾಯಿ? ಇಲ್ಲಿದೆ ವಿವರ..

ಪ್ರತಿದಿನ ಇಂತಿಷ್ಟು ಪ್ರಮಾಣದ ಬಾದಾಮಿ ತಿಂದರೆ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಬಾದಾಮಿ ತಿನ್ನುವುದರಿಂದ ಚರ್ಮದ ಸೌಂದರ್ಯ ವೃದ್ಧಿಯಾಗುತ್ತದೆ.

ಮಕ್ಕಳಿಗೆ ರಾತ್ರಿ ಬಾದಾಮಿಯನ್ನು ನೆನೆಸಿ ಬೆಳಗ್ಗೆ ತಿನ್ನಲು ಕೊಡಿ. ಇಲ್ಲದಿದ್ದರೆ ಬಾದಾಮಿಯನ್ನು ಪುಡಿ ಮಾಡಿ ಹಾಲಿನ ಜೊತೆಗೆ ಮಿಕ್ಸ್ ಮಾಡಿ ನೀಡುವುದರಿಂದ ಬೆಳೆಯುವ ಮಕ್ಕಳಿಗೆ ಅಗತ್ಯವಾದ ಪೋಷಕಾಂಶ ಬಾದಾಮಿಯಿಂದ ಸಿಗುತ್ತದೆ.

Karnataka Assembly Election; ಮತದಾರರ ಯಾವ ಬೆರಳಿಗೆ ಶಾಯಿ? ಇಲ್ಲಿದೆ ವಿವರ..

Latest Posts

ಲೈಫ್‌ಸ್ಟೈಲ್