More

    ಸೇಬು ಆಮದು ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು ಗೊತ್ತಾ..?

    ನವದೆಹಲಿ: ಪ್ರತಿ ಕೆಜಿಗೆ 50 ರೂ.ಗಿಂತಲೂ ಕಡಿಮೆಯಿರುವ ಸೇಬುಹಣ್ಣನ್ನು ಆಮದು ಮಾಡಿಕೊಳ್ಳದಂತೆ ಕೇಂದ್ರ ಸರ್ಕಾರ ನಿಷೇಧಿಸಿದೆ.

    ಸಿಐಎಫ್ (ವೆಚ್ಚ, ವಿಮೆ, ಸರಕು ಸಾಗಣೆ) ಆಮದು ಬೆಲೆ ಪ್ರತಿ ಕೆಜಿಗೆ 50ಕ್ಕಿಂತಲೂ ಕಡಿಮೆ ಇದ್ದರೆ ಸೇಬುಗಳ ಆಮದನ್ನು ನಿಷೇಧಿಸಲಾಗಿದೆ ಎಂದು ಡಿಜಿಎಫ್‍ಟಿ ಅಧಿಸೂಚನೆಯಲ್ಲಿ ತಿಳಿಸಿದೆ.

    ಸೇಬು ರಫ್ತು ಮಾಡುತ್ತೀರುವ ದೇಶ:
    ದೇಶಕ್ಕೆ ಅಧಿಕ ಪ್ರಮಾಣದಲ್ಲಿ ಈ ಹಣ್ಣು ರಫ್ತು ಮಾಡುತ್ತಿರುವ ಇರಾನ್, ಯುಎಇ ಹಾಗೂ ಅಫ್ಘಾನಿಸ್ತಾನಕ್ಕೆ ಹೊಡೆತ ಬೀಳಲಿದೆ. ಈ ನಿಷೇಧ ಚೀನಾದ ಮೇಲೂ ಪರಿಣಾಮ ಬೀರಲಿದೆ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ ಚೀನಾದಿಂದ ತೀರಾ ಕಡಿಮೆ ಪ್ರಮಾಣದ ಸೇಬು ಆಮದು ಆಗುತ್ತಿದೆ.

    ವಿದೇಶಿ ವ್ಯಾಪಾರಗಳ ಮಹಾನಿರ್ದೇಶಕರು ಮಾತನಾಡಿ, ಪ್ರತಿ ಕೆಜಿಗೆ 50 ರೂಪಾಯಿ ವರೆಗಿನ ಸೇಬುಹಣ್ಣು (ವೆಚ್ಚ, ವಿಮೆ ಹಾಗೂ ಸಾಗಾಣಿಕೆ ದರ ಸೇರಿ) ಆಮದನ್ನು ಮುಕ್ತ ವರ್ಗದಿಂದ ನಿಷೇಧಿತ ವರ್ಗಕ್ಕೆ ಸೇರಿಸಲಾಗಿದೆ. ಭೂತಾನ್‌ನಿಂದ ಆಮದಾಗುವ ಸೇಬಿಗೆ ಮಾತ್ರ ವಿನಾಯ್ತಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಅತಿವೇಗದಿಂದಾಗಿ ಯೂಟ್ಯೂಬರ್ ದುರಂತ ಸಾವು ಪ್ರಕರಣ: ಯುವಕನ ಕ್ಯಾಮೆರಾ ಬಿಚ್ಚಿಟ್ಟ ರಹಸ್ಯವಿದು…

    ಭೂತಾನ್​ನಿಂದ ಆಮದು ಆಗುವ ಸೇಬಿಗೆ ವಿನಾಯ್ತಿ:
    ಭೂತಾನ್‍ನಿಂದ ಆಮದು ಮಾಡುಕೊಳ್ಳುತ್ತಿರುವ ಸೇಬುಹಣ್ಣುಗಳಿಗೆ ಕನಿಷ್ಠ ಆಮದು ಬೆಲೆಯ ಷರತ್ತು ಅನ್ವಯಿಸುವುದಿಲ್ಲ ಎಂದು ಹೇಳಿದೆ. ಯುಎಸ್, ಇರಾನ್, ಬ್ರೆಜಿಲ್, ಯುಎಇ, ಅಫ್ಘಾನಿಸ್ತಾನ, ಫ್ರಾನ್ಸ್, ಬೆಲ್ಜಿಯಂ, ಚಿಲಿ, ಇಟಲಿ, ಟರ್ಕಿ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪೋಲೆಂಡ್ ದಕ್ಷಿಣ ಆಫ್ರಿಕಾ ದೇಶವು ಭಾರತಕ್ಕೆ ಸೇಬು ರಫ್ತು ಮಾಡುತ್ತವೆ.

    ಕೃಷಿ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಸೇಬುಹಣ್ಣಿನ ಸೀಸನ್ ಕ್ಷೀಣವಾಗಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ವಾಷಿಂಗ್ಟನ್ ಹಾಗೂ ಟರ್ಕಿ ಸೇಬುಹಣ್ಣು ವ್ಯಾಪಕವಾಗಿ ಆಮದಾಗುತ್ತಿತ್ತು. ಕಳೆದ ಹಣಕಾಸು ವರ್ಷದಲ್ಲಿ ಸುಮಾರು 300 ದಶಲಕ್ಷ ಡಾಲರ್ ಮೌಲ್ಯದ ಸೇಬು ಆಮದಾಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡ 24ರಷ್ಟು ಕಡಿಮೆ.

    ದೇಶಕ್ಕೆ ಟರ್ಕಿಯಿಂದ ಗರಿಷ್ಠ ಅಂದರೆ 72 ದಶಲಕ್ಷ ಡಾಲರ್ ಮೌಲ್ಯದ ಸೇಬುಹಣ್ಣು ಆಮದಾಗುತ್ತಿದೆ. ಚಿಲಿ (38.6 ದಶಲಕ್ಷ ಡಾಲರ್), ಇಟೆಲಿ (34), ಇರಾನ್ (26) ನಂತರದ ಸ್ಥಾನಗಳಲ್ಲಿವೆ. ಅಮೆರಿಕದಿಂದ ಆಮದಾಗುವ ಸೇಬಿನ ಪ್ರಮಾಣ ಶೇಕಡ 76ರಷ್ಟು ಇಳಿದು 50 ಲಕ್ಷ ಡಾಲರ್‌ಗೆ ಕುಸಿದಿದೆ.

    ಪ್ರತಿಷ್ಠಿತ ಲಾರೆಸ್ ವರ್ಷದ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts