More

    ಅತಿವೇಗದಿಂದಾಗಿ ಯೂಟ್ಯೂಬರ್ ದುರಂತ ಸಾವು ಪ್ರಕರಣ: ಯುವಕನ ಕ್ಯಾಮೆರಾ ಬಿಚ್ಚಿಟ್ಟ ರಹಸ್ಯವಿದು…

    ನವದೆಹಲಿ: ಯೂಟ್ಯೂಬ್​ ವಿಡಿಯೋಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬೈಕ್​ ಓಡಿಸುವ ಪ್ರಯತ್ನದಲ್ಲಿ ನಿಯಂತ್ರಣ ತಪ್ಪಿ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ ಯುವ ಯೂಟ್ಯೂಬರ್ ಓರ್ವ​ ದುರಂತ ಸಾವಿಗೀಡಾಗಿದ ಘಟನೆ ಎಚ್ಚರಿಕೆ ಗಂಟೆ ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿದ್ದಾರೆ.

    ಮೇ 3ರಂದು ಬೆಳಗ್ಗೆ 10 ಗಂಟೆಗೆ ಯುಮುನಾ ಎಕ್ಸ್​ಪ್ರೆಸ್​ವೇನಲ್ಲಿ ಅಪಘಾತ ನಡೆದಿತ್ತು. ಮೃತ ಯೂಟ್ಯೂಬರ್​ನನ್ನು ಅಗಸ್ತ್ಯ ಚೌಹಾಣ್​ (22) ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡದ ಡೆಹ್ರಾಡೂನ್​ನ ಕನ್ನಾಟ್ ಪ್ಲೇಸ್ ನಿವಾಸಿ. ಬೈಕ್​ ರೈಡರ್​ ಹಾಗೂ ಯೂಟ್ಯೂಬರ್​​ ಆಗಿದ್ದ. ಈತ ವೃತ್ತಿಪರ ಬೈಕರ್​ ಆಗಿದ್ದ. ಆದರೆ, ದುರಾದೃಷ್ಟವಶಾತ್​ ಅದೇ ಬೈಕ್​ನಿಂದ ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

    ಇದನ್ನೂ ಓದಿ: ವಿದ್ಯಾರ್ಥಿಮಿತ್ರ ಮಕ್ಕಳ ಆಪ್ತಮಿತ್ರ ಉತ್ತಮ ಫಲಿತಾಂಶ ದಾಖಲಿಸಿದ ಬಹುತೇಕ ಶಾಲೆಗಳು

    ಕ್ಯಾಮೆರಾ ಬಿಚ್ಚಿಟ್ಟ ರಹಸ್ಯ

    ಉತ್ತರ ಪ್ರದೇಶದ ಆಲಿಗಢದ ತಪ್ಪಲ್ ಪೊಲೀಸ್ ಠಾಣಾ ವ್ಯಾಪ್ತಿಯ 47 ಮೈಲ್ ಪಾಯಿಂಟ್‌ನಲ್ಲಿ ಅಪಘಾತ ಸಂಭವಿಸಿದ್ದು, ಈ ಬಗ್ಗೆ ಮಾತನಾಡಿರುವ ಎಸ್​ಎಸ್​ಪಿ ಕಲಾನಿಧಿ ನೈಥಾನಿ, ವೇಗವನ್ನು ರೆಕಾರ್ಡ್​ ಮಾಡುತ್ತಿದ್ದ ಆ್ಯಕ್ಸನ್​ ಕ್ಯಾಮೆರಾವನ್ನ ಮೃತ ಅಗಸ್ತ್ಯ ಮೃತದೇಹದಿಂದ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

    ವೇಗದ ಗುರಿಯನ್ನು ಮುಟ್ಟಲು ಪ್ರಯತ್ನ

    ಮೇ 3ರಂದು ಯಮುನಾ ಎಕ್ಸ್​ಪ್ರೆಸ್​ ವೇನಲ್ಲಿ ಅಪಘಾತ ಸಂಭವಿಸಿರುವುದಾಗಿ ನಮಗೆ ಮಾಹಿತಿ ಬಂತು. ಡೆಹ್ರಾಡೂನ್​ ನಿವಾಸಿಯಾಗಿರುವ ಅಗಸ್ತ್ಯ ಚೌಹಾಣ್ ಎಂಬ ಯೂಟ್ಯೂಬರ್ ದುರಂತ ಸಾವಗೀಡಾಗಿದ್ದಾನೆ. ಆತನೊಬ್ಬ ವ್ಲಾಗರ್ ಆಗಿದ್ದರು ಮತ್ತು ಈ ಹಿಂದೆಯು 300 ಕಿಮೀ ವೇಗದ ಗುರಿಯನ್ನು ಮುಟ್ಟಲು ಪ್ರಯತ್ನಿಸಿದ್ದರು. ಇದಕ್ಕೆ ಸಂಬಂಧಿಸಿದ ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ ಎಂದು ನೈಥಾನಿ ಸುದ್ದಿಗಾರರಿಗೆ ತಿಳಿಸಿದರು.

    ಬೈಕ್ ಸವಾರಿಯ ಸಮಯದಲ್ಲಿ ಅಗಸ್ತ್ಯ ಧರಿಸಿದ್ದ ಕ್ಯಾಮೆರಾವನ್ನು ನಾವು ವಶಕ್ಕೆ ಪಡೆದೆವು. ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ಅವರ ಬೈಕ್ 294 ಕಿಲೋಮೀಟರ್ ವೇಗದಲ್ಲಿತ್ತು ಎಂಬುದು ತಿಳಿಯಿತು. ಸದ್ಯಕ್ಕೆ ತನಿಖೆ ಮುಂದುವರಿದಿದೆ ಎಂದು ನೈಥಾನಿ ಅವರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ಡೀಸೆಲ್ ವಾಹನ ನಿಷೇಧಕ್ಕೆ ಕೇಂದ್ರ ಇಂಧನ ಸಚಿವಾಲಯದ ಸಮಿತಿ ಶಿಫಾರಸು

    ಬೈಕ್​ ಸವಾರರಿಗೆ ಮನವಿ

    ಇದೇ ಸಮಯದಲ್ಲಿ ಬೈಕ್​ ಓಡಿಸುವ ಯುವ ಸಮುದಾಯದ ಬಳಿ ಮನವಿ ಮಾಡಿರುವ ನೈಥಾನಿ, ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು ಮತ್ತು ಬೇರೆ ಪ್ರಯಾಣಿಕರು ಕೂಡ ತಮ್ಮ ಕುಟುಂಬದೊಂದಿಗೆ ಪ್ರಯಾಣದಲ್ಲಿರುತ್ತಾರೆ ಎಂಬುದು ನೆನಪಿನಲ್ಲಿಡಬೇಕೆಂದು ಹೇಳಿದ್ದಾರೆ.

    ಘಟನೆ ಹಿನ್ನೆಲೆ ಏನು?

    ಮೃತ ಅಗಸ್ತ್ಯ ಅವರು ZX 10R ನಿಂಜಾ ಸೂಪರ್‌ಬೈಕ್​ನಲ್ಲಿ ಪ್ರಯಾಣಿಸುವಾಗ ತಮ್ಮ ಯೂಟ್ಯೂಬ್​ ಚಾನೆಲ್​ಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಓಡಿಸಲು ಪ್ರಯತ್ನಿಸಿದರು. ಆದರೆ, ಬೈಕ್​ ನಿಯಂತ್ರಣ ಕಳೆದುಕೊಂಡು ಉತ್ತರ ಪ್ರದೇಶದ ಯಮುನಾ ಎಕ್ಸ್​ಪ್ರೆಸ್​ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದು ದುರಂತ ಸಾವಿಗೀಡಾಗಿದ್ದಾರೆ. ಅಗಸ್ತ್ಯ ಧರಿಸಿದ್ದ ಹೆಲ್ಮೆಟ್​ ಕೂಡ ಛಿದ್ರವಾಗಿದೆ. ತಲೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಅಗಸ್ತ್ಯ ಸ್ಥಳದಲ್ಲೇ ಕೊನೆಯುಸಿರೆಳೆದನು. ಘಟನೆ ನಡೆದ ಜಾಗದಲ್ಲಿ ಅಗಸ್ತ್ಯ ದೇಹದ ಸುತ್ತ ರಕ್ತ ಮಡುಗಟ್ಟಿತ್ತು.

    ಉತ್ತರಾಖಂಡದ ಡೆಹ್ರಾಡೂನ್ ಮೂಲದ ಅಗಸ್ತ್ಯ ದೆಹಲಿಯಲ್ಲಿ ಮೋಟಾರ್ ಬೈಕ್ ರೇಸಿಂಗ್ ಸ್ಪರ್ಧೆಗಾಗಿ ಆಗ್ರಾದಿಂದ ಬೈಕ್​ನಲ್ಲಿ ತೆರಳಿದ್ದರು. ಅಗಸ್ತ್ಯ ಅವರು ‘ಪ್ರೊ ರೈಡರ್ 1000’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಇದು 1.2 ಮಿಲಿಯನ್ ಚಂದಾದಾರರನ್ನು ಸಹ ಹೊಂದಿದೆ. ಅಪಘಾತ ಸಂಭವಿಸುವ 16 ಗಂಟೆಗಳ ಮೊದಲು ಅವರು ಯೂಟ್ಯೂಬ್‌ನಲ್ಲಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ತನ್ನ ಸ್ನೇಹಿತರನ್ನು ದೆಹಲಿಗೆ ಬರುವಂತೆ ಹೇಳಿದ್ದಾನೆ. ಅಗಸ್ತ್ಯ ಅವರು ತಮ್ಮ ಚಾನೆಲ್‌ನಲ್ಲಿ ಪ್ರತಿ ಬಾರಿ ವಿಡಿಯೋವನ್ನು ಅಪ್‌ಲೋಡ್ ಮಾಡಿದಾಗ ವೇಗವಾಗಿ ಬೈಕ್​ ಚಲಾಯಿಸಬೇಡಿ ಎಂದು ಎಚ್ಚರಿಕೆ ಸಂದೇಶ ಹಾಕುತ್ತಿದ್ದರು. ಆದರೆ, ಇಂದು ಅವರೇ ವೇಗದ ಚಾಲನೆಯಿಂದ ದುರ್ಮರಣಕ್ಕೀಡಾಗಿದ್ದಾರೆ.

    ಇದನ್ನೂ ಓದಿ: ರಾಜಸ್ಥಾನದ ಬಿಕಾನೇರ್​ನಲ್ಲಿ ಬೃಹತ್ ಲೀಥಿಯಂ ನಿಕ್ಷೇಪ ಪತ್ತೆ: ಈಡೇರಲಿದೆ ದೇಶದ ಶೇ.80ರಷ್ಟು ಬೇಡಿಕೆ

    ಬೈಕ್‌ನ ನಂಬರ್ ಮೂಲಕ ಉತ್ತರ ಪ್ರದೇಶ ಪೊಲೀಸರು ಉತ್ತರಾಖಂಡ ಪೊಲೀಸರನ್ನು ಸಂಪರ್ಕಿಸಿ ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಪಘಾತದ ವೇಳೆ ಅಗಸ್ತ್ಯ ಸ್ನೇಹಿತರು ಕೂಡ ಅವರೊಟ್ಟಿಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    YouTube​ ವಿಡಿಯೋಗಾಗಿ ಗಂಟೆಗೆ 300 ಕಿಮೀ ವೇಗದಲ್ಲಿ ಬೈಕ್​ ಚಾಲನೆ: ಯೂಟ್ಯೂಬರ್​ ದುರ್ಮರಣ

    ಕರ್ನಾಟಕ ಚುನಾವಣೆ 2023: ಹೆಚ್ಚಿನ ಮತದಾನಕ್ಕೆ ಗೋವಾ ಸರ್ಕಾರ ಸಾಥ್​, ಸರ್ಕಾರಿ ರಜೆ ಘೋಷಣೆ

    ರಾಜ್ಯಕ್ಕೆ ಎದುರಾಗಲಿದೆ ನಾಯಕತ್ವ ಕೊರತೆ: ಹಲವು ಹಿರಿಯ ನಾಯಕರಿಗೆ ಇದು ಕೊನೆಯ ಚುನಾವಣೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts