More

    ಡೀಸೆಲ್ ವಾಹನ ನಿಷೇಧಕ್ಕೆ ಕೇಂದ್ರ ಇಂಧನ ಸಚಿವಾಲಯದ ಸಮಿತಿ ಶಿಫಾರಸು

    ನವದೆಹಲಿ: ದೇಶದ ಪ್ರಮುಖ ನಗರಗಳಲ್ಲಿ 2027ರ ಒಳಗೆ ಡೀಸೆಲ್ ಚಾಲಿತ ನಾಲ್ಕು-ಚಕ್ರಗಳ ವಾಹನಗಳ ಬಳಕೆ ನಿಷೇಧಿಸಬೇಕು. ಅನಿಲ ಹೊರಸೂಸುವಿಕೆಯನ್ನು ನಿಲ್ಲಿಸುವ ಸಲುವಾಗಿ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾಲಿನ್ಯಪೀಡಿತ ಪಟ್ಟಣಗಳಲ್ಲಿ ವಿದ್ಯುತ್ ಮತ್ತು ಗ್ಯಾಸ್ ಚಾಲಿತ ವಾಹನಗಳನ್ನು ಬಳಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯದ ಸಮಿತಿಯೊಂದು ಶಿಫಾರಸು ಮಾಡಿದೆ.

    2030ರ ವೇಳೆಗೆ ಎಲೆಕ್ಟ್ರಿಕ್ ಅಲ್ಲದ ಯಾವುದೇ ಹೊಸ ಸಿಟಿ ಬಸ್​ಗಳನ್ನು ಸೇರಿಸಬಾರದು. 2024 ರಿಂದ ನಗರ ಸಾರಿಗೆಗೆ ಡೀಸೆಲ್ ಬಸ್​ಗಳನ್ನು ಸೇರಿಸಬಾರದು ಎಂದು ಸಮಿತಿಯು ಇಂಧನ ಸಚಿವಾಲಯದ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಲಾದದ ವರದಿಯಲ್ಲಿ ತಿಳಿಸಲಾಗಿದೆ. ಮಾಜಿ ಇಂಧನ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯ ಈ ಶಿಫಾರಸುಗಳನ್ನು ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯ ಕೇಂದ್ರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆಯುತ್ತದೆಯೇ ಎಂಬ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ.

    ಭಾರತದಲ್ಲಿ ಸುಮಾರು ಸಂಸ್ಕರಿಸಿದ ಇಂಧನ ಬಳಕೆಯಲ್ಲಿ ಡಿಸೇಲ್​ನ್ನು ಐದನೇ ಎರಡರಷ್ಟು ಬಳಸಲಾಗುತ್ತದೆ. ಅದರಲ್ಲಿ ಶೇ. 80 ಪ್ರಮಾಣ ಸಾರಿಗೆ ವಲಯದಲ್ಲಿ ಬಳಸಲ್ಪಡುತ್ತದೆ. 2024ರಿಂದ ನಗರಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಹೊಸ ನೋಂದಣಿಗಳನ್ನು ಅನುಮತಿಸಬೇಕು. ಸರಕು ಸಾಗಣೆಗೆ ರೈಲ್ವೆ ಮತ್ತು ಅನಿಲ ಚಾಲಿತ ಟ್ರಕ್​ಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಎರಡರಿಂದ ಮೂರು ವರ್ಷಗಳಲ್ಲಿ ರೈಲ್ವೆ ಜಾಲ ಸಂಪೂರ್ಣ ವಿದ್ಯುದೀಕರಣಗೊಳ್ಳುವ ನಿರೀಕ್ಷೆಯಿದೆ. ದೀರ್ಘ ಪ್ರಯಾಣಕ್ಕೂ ವಿದ್ಯುಚ್ಛಕ್ತಿಯಿಂದ ಚಲಿಸಲ್ಪಡುವ ಬಸ್​ಗಳನ್ನು ಬಳಸಲು ಮುಂದಾಗಬೇಕು ಎಂದು ಸಮಿತಿ ಹೇಳಿದೆ.

    2020 ಮತ್ತು 2050ರ ನಡುವೆ ಅನಿಲ (ಗ್ಯಾಸ್) ಬೇಡಿಕೆ ಶೇ. 9.78 ಬೆಳವಣಿಗೆಯಾಗುವ ನಿರೀಕ್ಷೆಯಿರುವುದರಿಂದ ಭೂಮಿಯಡಿಯಲ್ಲಿ ಅನಿಲ ಸಂಗ್ರಹಗಾರಗಳನ್ನು ನಿರ್ವಿುಸಲು ಭಾರತ ಪರಿಗಣಿಸಬೇಕು. ಇದಕ್ಕಾಗಿ ಖಾಲಿ ಬಿದ್ದಿರುವ ತೈಲ ಮತ್ತು ಗ್ಯಾಸ್ ಫೀಲ್ಡ್​ಗಳನ್ನು ಬಳಸಿಕೊಳ್ಳಬಹುದು. ವಿದೇಶಿ ಅನಿಲ ಉತ್ಪಾದಿಸುವ ಕಂಪನಿಗಳ ಭಾಗವಹಿಸುವಿಕೆಯೊಂದಿಗೆ ಅನಿಲ ಸಂಗ್ರಹಣೆಯನ್ನು ನಿರ್ವಿುಸಲು ಸರ್ಕಾರ ಯೋಚಿಸಬೇಕು ಎಂದು ಸಲಹೆ ನೀಡಲಾಗಿದೆ.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts