More

  ಕಾಂಪೌಂಡ್‌ಗೆ ಕಾರು ಗುದ್ದಿ ಬಾಲಕ ಸಾವು

  ಹಾಸನ : ನಿಂತಿದ್ದ ಕಾರಿನಲ್ಲಿ ಇಬ್ಬರು ಬಾಲಕರು ಆಟವಾಡುವಾಗ ಕಾರ್ ಸ್ಟಾರ್ಟ್ ಆಗಿ ಮುಂದೆ ಇದ್ದ ದೇವಸ್ಥಾನದ ಗೋಡೆಗೆ ಗುದ್ದಿ ಬಾಲಕ ಮೃತಪಟ್ಟು ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

  ಚನ್ನರಾಯಪಟ್ಟಣ ತಾಲೂಕಿನ ನಾಗಸಮುದ್ರ ಗ್ರಾಮದ ಉಮೇಶ್ (17) ಮೃತ ಬಾಲಕ. ಆಕಾಶ್ ಎಂಬ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  ನಾಗಸಮುದ್ರ ಗ್ರಾಮದ ದೇವಸ್ಥಾನದ ಸಮೀಪ ಕಾರನ್ನು ನಿಲ್ಲಿಸಲಾಗಿತ್ತು. ಈ ಕಾರಿನಲ್ಲಿ ಉಮೇಶ್ ಹಾಗೂ ಆಕಾಶ್ ಎಂಬ ಬಾಲಕರು ಕುಳಿತು ಆಟವಾಡುತ್ತಿದ್ದರು. ಈ ವೇಳೆ ಕಾರು ದಿಢೀರ್ ಸ್ಟಾರ್ಟ್ ಆಗಿದೆ. ಗಾಬರಿಯಾದ ಮಕ್ಕಳು ಬ್ರೇಕ್ ತುಣಿಯುವ ಬದಲು ಎಕ್ಸಲೇಟರ್ ತುಳಿದಿದ್ದಾರೆ. ಆಗ ಕಾರು ವೇಗವಾಗಿ ಹೋಗಿ ದೇವಸ್ಥಾನದ ಕಾಂಪೌಡ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಉಮೇಶ್ ಮೃತಪಟ್ಟಿದ್ದಾನೆ.

  ಘಟನೆ ಬಳಿಕ ಕಾರು ಮಾಲೀಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts