More

    ರಾಜಸ್ಥಾನದ ಬಿಕಾನೇರ್​ನಲ್ಲಿ ಬೃಹತ್ ಲೀಥಿಯಂ ನಿಕ್ಷೇಪ ಪತ್ತೆ: ಈಡೇರಲಿದೆ ದೇಶದ ಶೇ.80ರಷ್ಟು ಬೇಡಿಕೆ

    ಜೈಪುರ: ಜಮ್ಮು ಮತ್ತು ಕಾಶ್ಮೀರದ ನಂತರ ಇದೀಗ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ದೇಗನಾದಲ್ಲಿ ಬೃಹತ್ ಪ್ರಮಾಣದ ಲೀಥಿಯಂ ಖನಿಜ ನಿಕ್ಷೇಪ ಪತ್ತೆಯಾಗಿದೆ. ಈ ನಿಕ್ಷೇಪ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ತೆಯಾಗಿದ್ದಕ್ಕಿಂತ ದೊಡ್ಡ ಪ್ರಮಾಣದಲ್ಲಿದೆ ಎಂದು ಎಂದು ರಾಜ್ಯ ಸರ್ಕಾರ ಮತ್ತು ಭೂಗರ್ಭಶಾಸ್ತ್ರ ಇಲಾಖೆ (ಜಿಎಸ್​ಐ) ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ರಾಜಸ್ಥಾನದ ನಿಕ್ಷೇಪದ ನಿಖರ ಪ್ರಮಾಣವನ್ನು ಇನ್ನೂ ಲೆಕ್ಕ ಹಾಕಿಲ್ಲವಾದರೂ ಇದು ಭಾರತದ ಸುಮಾರು ಶೇಕಡ 80ರಷ್ಟು ಲೀಥಿಯಂ ಬೇಡಿಕೆಯನ್ನು ಈಡೇರಿಸುವಷ್ಟಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ವರ್ಷ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಲೀಥಿಯಂ ನಿಕ್ಷೇಪ ಪತ್ತೆಯಾಗಿತ್ತು. ರಿಯಾಸಿಯಲ್ಲಿ ಪತ್ತೆಯಾದ ಖನಿಜದ ಪ್ರಮಾಣ 5.90 ದಶಲಕ್ಷ ಟನ್ ಎಂದು ಅಂದಾಜು ಮಾಡಲಾಗಿತ್ತು. ಅದನ್ನು ಹರಾಜು ಹಾಕಲು ಗಣಿ ಸಚಿವಾಲಯ ನಿರ್ಧರಿಸಿದೆ.

    ಮೂರು ಸಂಸ್ಥೆಗಳ ಕೂಟ: ಜಿಎಸ್​ಐ ಅಲ್ಲದೆ ಮೂರು ಸಾರ್ವಜನಿಕ ವಲಯದ ಉದ್ಯಮಗಳಾದ ರಾಷ್ಟ್ರೀಯ ಅಲ್ಯುಮಿನಿಯಂ ಕಂಪನಿ, ಹಿಂದುಸ್ತಾನ್ ಕಾಪರ್ ಮತ್ತು ಖನಿಜ ಶೋಧನಾ ನಿಗಮಗಳ ಒಕ್ಕೂಟವು ಲೀಥಿಯಂ-ಅಯಾನ್ ಬ್ಯಾಟರಿಗಳ ಮರುಬಳಕೆಯ ಸ್ವಾಧೀನಕ್ಕೆ ಹಾಗೂ ಜಂಟಿ ತಯಾರಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಒಂದು ವ್ಯವಸ್ಥೆ ರೂಪಿಸುತ್ತಿದೆ.

    ಕರ್ನಾಟಕದಲ್ಲೂ ಲೀಥಿಯಂ: ಕರ್ನಾಟಕದಲ್ಲಿ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಲೀಥಿಯಂ ನಿಕ್ಷೇಪ ಕಂಡು ಬಂದಿತ್ತು. ಇದು ಗಣಿಗಾರಿಕೆ ಇಲಾಖೆಯ ಅಪರೂಪದ ಖನಿಜದ ಪತ್ತೆ ಕಾರ್ಯಾಚರಣೆಯ ಫಲಿತಾಂಶವಾಗಿತ್ತು.

    ದಕ್ಷಿಣ ಅಮೆರಿಕದಲ್ಲೂ ನಿಕ್ಷೇಪ: ಚೀನಾ ಬಿಟ್ಟರೆ ದಕ್ಷಿಣ ಅಮೆರಿಕದಲ್ಲಿ ಲೀಥಿಯಂ ನಿಕ್ಷೇಪ ಹೇಳವಾಗಿದೆ. ಅರ್ಜೆಟೀನಾ, ಬೊಲಿವಿಯಾ ಮತ್ತು ಚಿಲಿಯ ಪಾಲೇ ಶೇಕಡ 50ರಷ್ಟಿದೆ.

    ಶೇ. 75 ಚೀನಾ ನಿಯಂತ್ರಣದಲ್ಲಿ: ಜಾಗತಿಕ ಲೀಥಿಯಂ ಸಂಸ್ಕರಣೆಯ ಶೇಕಡ 75ರಷ್ಟನ್ನು ಚೀನಾ ನಿಯಂತ್ರಿಸುತ್ತದೆ. ಇದೀಗ ಭಾರತದ ಎರಡು ಕಡೆ ದೊಡ್ಡ ಪ್ರಮಾಣದಲ್ಲಿ ಲೀಥಿಯಂ ಖನಿಜ ಸಂಗ್ರಹ ಸಿಕ್ಕಿರುವುದರಿಂದ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಜತೆಗೆ ಲೀಥಿಯಂನಲ್ಲಿ ಚೀನಾ ಹೊಂದಿರುವ ಜಾಗತಿಕ ಏಕಸ್ವಾಮ್ಯವನ್ನು ಮುರಿಯಲು ಸಾಧ್ಯವಾಗಲಿದೆ. 2020-21ರಲ್ಲಿ ಭಾರತ ಒಟ್ಟು 6,000 ಕೋಟಿ ರೂಪಾಯಿ ಮೌಲ್ಯದ ಲೀಥಿಯಂ ಆಮದು ಮಾಡಿಕೊಂಡಿದೆ. ಆ ಪೈಕಿ ಚೀನಾದಿಂದ ತರಿಸಿಕೊಂಡ ಈ ಖನಿಜದ ಮೌಲ್ಯವೇ -ಠಿ;3,500 ಕೋಟಿ.

    ಇವಿ ಬ್ಯಾಟರಿಗಳಿಗೆ ನಿರ್ಣಾಯಕ

    ಲೀಥಿಯಂ ಖನಿಜವು ವಿದ್ಯುತ್​ಚಾಲಿತ ವಾಹನಗಳ (ಎಲೆಕ್ಟ್ರಿಕ್ ವೆಹಿಕಲ್-ಇವಿ) ಬ್ಯಾಟರಿ ತಯಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಈ ಅಪರೂಪದ ಲೀಥಿಯಂ ಖನಿಜ ಪತ್ತೆಗೆ ಸರ್ಕಾರ ದೇಶದಲ್ಲೂ ಹುಡುಕಾಟ ನಡೆಸುತ್ತಿತ್ತು. 2030ರೊಳಗೆ ಭಾರತದಲ್ಲಿ 13.92 ಲಕ್ಷ ಇವಿಗಳು ಓಡಾಡುವಂತೆ ಮಾಡುವುದು ಸರ್ಕಾರದ ಗುರಿ. ಇದು ಬಹುತೇಕ ಲೀಥಿಯಂ ಲಭ್ಯತೆಯನ್ನು ಆಧರಿಸಿದೆ. ಸದ್ಯಕ್ಕೆ ದೇಶದಲ್ಲಿ ಮಾರಾಟವಾಗುವ ವಾಹನಗಳಲ್ಲಿ ವಿದ್ಯುತ್​ಚಾಲಿತ ವಾಹನಗಳ ಪ್ರಮಾಣ ಕೇವಲ ಶೇಕಡ 1ಕ್ಕಿಂತ ಸ್ವಲ್ಪ ಹೆಚ್ಚಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಲೀಥಿಯಂ ಬ್ಯಾಟರಿಯೊಂದೇ ಪರ್ಯಾಯವಾಗಿದೆ. ಹಗುರ ಹಾಗೂ ಇಂಧನ ಅನುಪಾತ ಜಾಸ್ತಿಯಿರುವುದು ಇದಕ್ಕೆ ಕಾರಣವಾಗಿದೆ. ಇದು ಹೆಚ್ಚು ಇಂಧನ ದಕ್ಷತೆ ಹೊಂದಿದ್ದು ವಿವಿಧ ತಾಪಮಾನಗಳಲ್ಲಿ ಬ್ಯಾಟರಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚು ಸುರಕ್ಷಿತವಾಗಿದ್ದು ಅವಲಂಬನೆಯು ಇತರ ವಸ್ತುಗಳ ಮೇಲಿನ ಅವಲಂಬನೆಗಿಂತ ಹೆಚ್ಚಾಗಿರುತ್ತದೆ.

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts