More

    ವಿದ್ಯಾರ್ಥಿಮಿತ್ರ ಮಕ್ಕಳ ಆಪ್ತಮಿತ್ರ ಉತ್ತಮ ಫಲಿತಾಂಶ ದಾಖಲಿಸಿದ ಬಹುತೇಕ ಶಾಲೆಗಳು

    ಚನ್ನಪಟ್ಟಣ
    ತಾಲೂಕಿನಲ್ಲಿ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಮಿತ್ರ ಸಂಚಿಕೆ ಪೂರೈಕೆಯಾಗುತ್ತಿದ್ದ ಬಹುತೇಕ ಶಾಲೆಗಳಲ್ಲಿ ಉತ್ತಮ ಫಲಿತಾಂಶ ದಾಖಲಾಗಿದೆ.

    ತಾಲೂಕಿನ ಹಲವು ಶಾಲೆಗಳಿಗೆ ಸಂಚಿಕೆ ಪೂರೈಕೆಯಾಗುತ್ತಿತ್ತು. ಅದರಲ್ಲೂ ತಾಲೂಕಿನ ಪ್ರಸಿದ್ದ ಗೌಡಗೆರೆ ಕ್ಷೇತ್ರದ ವತಿಯಿಂದ ಬೇವೂರು ಜಿಪಂ ವ್ಯಾಪ್ತಿಯ ಹಲವು ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುತ್ತಿತ್ತು.

    ದಿವ್ಯ ಚೇತನದಲ್ಲಿ ಉತ್ತಮ ಫಲಿತಾಂಶ: ನಗರದ ದಿವ್ಯಚೇತನ ಆಂಗ್ಲ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಪರೀೆ ಎದುರಿಸಿದ್ದ 34 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 14 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 20 ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ತಾಲೂಕಿನ ಸುಣ್ಣಘಟ್ಟ ಗ್ರಾಮದ ವಿ.ಜಿ. ರಚಿತಾ 613 ಅಂಕ ಪಡೆದು ಶಾಲೆಗೆ ಮೊದಲಿಗಳಾಗಿದ್ದಾರೆ.

    ಬಾಲು ಪಬ್ಲಿಕ್​ ಶಾಲೆ!
    ನಗರದ ಬಾಲು ಪಬ್ಲಿಕ್​ ಶಾಲೆ ಉತ್ತಮ ಫಲಿತಾಂಶ ದಾಖಲಿಸಿದೆ. 62 ವಿದ್ಯಾರ್ಥಿಗಳ ಪೈಕಿ 61 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿದ್ಯಾರ್ಥಿನಿ ನಂದನಾ 613 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಉತ್ತಮ ಫಲಿತಾಂಶ ದಾಖಲಿಸಿರುವ ವಿದ್ಯಾರ್ಥಿಗಳಿಗೆ ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಅಭಿನಂದನೆ ಸಲ್ಲಿಸಿದ್ದಾರೆ. ದಿವ್ಯಚೇತನ ಹಾಗೂ ಬಾಲು ಶಾಲೆಗಳಿಗೆ ವಿದ್ಯಾರ್ಥಿಮಿತ್ರ ಸಂಚಿಕೆ ಪೂರೈಕೆಯಾಗುತಿತ್ತು.

    ಸಾರ್ವಜನಿಕ ಸಾಧನೆ
    ತಾಲೂಕಿನ ನಾಗವಾರ ಸಾರ್ವಜನಿಕ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ. ಶಾಲೆಯ 5 ಮಂದಿ ಅತ್ಯುನ್ನತ ಶ್ರೇಣಿ, 34 ಮಂದಿ ಪ್ರಥಮ , 4 ಮಕ್ಕಳು ದ್ವೀತಿಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ 560 ಅಂಕ ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ಶಾಲೆಯ ಜತೆಗೆ, ಬೇವೂರು ಸಿದ್ದರಾಮೇಶ್ವರ ಪ್ರೌಢಶಾಲೆ, ಮಂಡ್ಯ ಬೊಮ್ಮನಾಯಕಹಳ್ಳಿ ಪ್ರೌಢಶಾಲೆ, ಮಂಕುಂದ ಪ್ರೌಢಶಾಲೆ ಹಾಗೂ ಹೊನ್ನಾಯಕನಹಳ್ಳಿಯ ಪ್ರೌಢಶಾಲೆಯೂ ಉತ್ತಮ ಫಲಿತಾಂಶ ತನ್ನದಾಗಿಸಿಕೊಂಡಿವೆ. ಈ ಎಲ್ಲ ಶಾಲೆಗಳಿಗೆ ತಾಲೂಕಿನ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ವತಿಯಿಂದ ಉಚಿತವಾಗಿ ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಂಚಿಕೆ ಪೂರೈಕೆಯಾಗುತ್ತಿತ್ತು.

    ತಾಲೂಕಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೇವೂರು ಜಿಪಂ ವ್ಯಾಪ್ತಿಯ ಹಲವು ಶಾಲೆಗಳಿಗೆ ವಿದ್ಯಾರ್ಥಿ ಮಿತ್ರ ಸಂಚಿಕೆಗಳನ್ನು ಕ್ಷೇತ್ರದ ವತಿಯಿಂದ ನೀಡಲಾಗಿತ್ತು. ವಿದ್ಯಾರ್ಥಿ ಮಿತ್ರ ನಿಜಕ್ಕೂ ವಿದ್ಯಾರ್ಥಿಗಳಿಗೆ ಆಪ್ತಮಿತ್ರ ಎಂಬುದು ಫಲಿತಾಂಶದಿಂದ ನಿರೂಪಿತವಾಗಿದೆ.

     ಡಾ.ಮಲ್ಲೆಶ್​ ಗುರೂಜಿ, ಧರ್ಮದರ್ಶಿ, ಗೌಡಗೆರೆ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts