More

  ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರಾ ನಟಿ ರಾಖಿ ಸಾವಂತ್?; ವೈದ್ಯರು ಹೇಳಿದ್ದಿಷ್ಟು

  ಮುಂಬೈ: ಸದಾ ಒಂದಿಲ್ಲೊಂದು ಗೊಂದಲದ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸೌಂಡ್​ ಮಾಡುವ ಬಾಲಿವುಡ್​ನ ಡ್ರಾಮಾ ಕ್ವೀನ್​ ರಾಖಿ ಸಾವಂತ್​ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತ ನಟಿ ರಾಖಿ ಸಾವಂತ್​ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ  ಅವರ ಬಗ್ಗೆ ಬೇರೆ-ಬೇರೆ ಸುದ್ದಿಗಳು ಹರಿದಾಡಲು ಆರಂಭವಾಗಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ವೈದ್ಯರು ಹಾಗೂ ನಟಿ ರಾಖಿ ಸಾವಂತ್ ಎದ್ದಿರುವ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

  ಈ ಕುರಿತು ವಿಡಿಯೋ ಒಂದನ್ನು ಹಂಚಿಕೊಂಡಿರುವ ನಟಿ ರಾಖಿ ಸಾವಂತ್, ತಮಗೆ ಗರ್ಭಕೋಶದಲ್ಲಿ ಟ್ಯೂಮರ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ನನರ್ನ ಗರ್ಭಕೋಶದಲ್ಲಿ 10 ಸೆಂಟಿಮೀಟರ್​ ದೊಡ್ಡ ಟ್ಯುಮರ್ ಪತ್ತೆಯಾಗಿದೆ. ವೈದ್ಯರು, ಅದು ಕ್ಯಾನ್ಸರ್ ಆಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳು ನಡೆಯುತ್ತಿವೆ. ನಾನು ಆದಷ್ಟು ಬೇಗ ಹುಷಾರಾಗಿ ಬರುತ್ತೇನೆ. ನನಗೆ ಹೆಚ್ಚಿಗೆ ಮಾತನಾಡಲು ಆಗುತ್ತಿಲ್ಲ ನನ್ನ ಪರವಾಗಿ ರಿತೇಶ್ ಮಾಧ್ಯಮಗಳೊಟ್ಟಿಗೆ ಮಾತನಾಡಿ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಚೆನ್ನೈ ವಿರುದ್ಧದ ಪಂದ್ಯಕ್ಕೂ ಮುನ್ನ ಆರ್​ಸಿಬಿ ಡ್ರೆಸ್ಸಿಂಗ್​ ರೂಮ್​ನಲ್ಲಿ ಕಾಣಿಸಿಕೊಂಡ ಎಂಎಸ್​ಡಿ; ವಿಡಿಯೋ ವೈರಲ್

  ರಾಖಿಗೆ ಚಿಕತ್ಸೆ ನೀಡುತ್ತಿರುವ ವೈದ್ಯರು ಈ ಬಗ್ಗೆ ಮಾತನಾಡಿದ್ದು, ರಾಖಿ ಅವರ ಗರ್ಭಕೋಶದಲ್ಲಿ 10 ಸೆಂ.ಮೀ ಉದ್ದದ ಟ್ಯೂಮರ್ ಇರುವುದನ್ನು ಖಚಿತಪಡಿಸಿದ್ದಾರೆ. ಮೇ 18ರಂದು ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ. ಈ ಮೂಲಕ ಎದ್ದಿರುವ ಉಹಾಪೋಹಗಳಿಗೆ ರಾಖಿ ಸಾವಂತ್​ ಹಾಗೂ ಆಕೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತೆರೆ ಎಳೆದಿದ್ದಾರೆ.

  ರಾಖಿ ಸಾವಂತ್, ಬಾಲಿವುಡ್​ನ ವಿವಾದಾತ್ಮಕ ನಟಿ. ಪ್ರಚಾರಕ್ಕಾಗಿ ಒಂದಲ್ಲ ಒಂದು ಸಾಹಸಗಳನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಮೈಸೂರಿನ ಆದಿಲ್ ಅನ್ನು ರಾಖಿ ಸಾವಂತ್ ವಿವಾಹವಾಗಿದ್ದರು. ಬಳಿಕ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ಅಂತೆಯೇ ಆದಿಲ್ ಬಂಧನವೂ ಆಗಿತ್ತು. ಬಳಿಕ ಆದಿಲ್, ರಾಖಿ ವಿರುದ್ಧ ಮರುದೂರು ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಖಿಗೆ ನೊಟೀಸ್ ಕಳಿಸಿತ್ತು. ಅಷ್ಟರಲ್ಲಾಗಲೆ ರಾಖಿ ಸಾವಂತ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts