More

    ಗೊ.ರು.ಚ ದತ್ತಿನಿಧಿ ಪ್ರಶಸ್ತಿಗೆ ನಾಲ್ವರು ಆಯ್ಕೆ: ಮೇ.18ರಂದು ನಗರದಲ್ಲಿ ಪ್ರದಾನ ಸಮಾರಂಭ

    ಮಂಡ್ಯ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನಿಂದ ಕೊಡಮಾಡುವ 2023ನೇ ಸಾಲಿನ ಗೊ.ರು.ಚನ್ನಬಸಪ್ಪ(ಗೊ.ರು.ಚ) ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಮೇ.18ರಂದು ನಗರದಲ್ಲಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್.ಶಿವಪ್ರಕಾಶ್, ಬೆಳಗಾವಿಯ ಡಾ.ಬಸವರಾಜ ಕಲ್ಗುಡಿ ಅವರನ್ನು ‘ಶರಣ ಪ್ರಶಸ್ತಿ’, ಚಿತ್ರದುರ್ಗದ ಡಾ.ಸಂಧ್ಯಾರೆಡ್ಡಿ ಅವರನ್ನು ‘ಜಾನಪದ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರಿಗೆ ತಲಾ 25 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದಿದ್ದಾರೆ.

    ಗೊ.ರು.ಚ ದತ್ತಿನಿಧಿ ಪ್ರಶಸ್ತಿಗೆ ನಾಲ್ವರು ಆಯ್ಕೆ: ಮೇ.18ರಂದು ನಗರದಲ್ಲಿ ಪ್ರದಾನ ಸಮಾರಂಭ

    ಅಂತೆಯೇ ಶರಣ ಸಾಹಿತ್ಯ-ಸಂಸ್ಕೃತಿ ಮತ್ತು ಜಾನಪದಕ್ಕೆ ಸಂಬಂಧಿಸಿದಂತೆ ಆಯಾ ವರ್ಷದಲ್ಲಿ ಪ್ರಕಟವಾದ ಉತ್ತಮ ಗ್ರಂಥಕ್ಕೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಇರಕಸಂದ್ರದ ಡಾ.ಸಿ.ನಾಗಭೂಷಣ ಅವರನ್ನು ‘ಶರಣ ಸಾಹಿತ್ಯ ಗ್ರಂಥ ಪ್ರಶಸ್ತಿ’ ಹಾಗೂ ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕು ಹಾರೋಗೇರಿ ಗ್ರಾಮದ ಬಾಲಕೃಷ್ಣ ಜಂಬಗಿ ಅವರನ್ನು ‘ಜನಪದ ಸಾಹಿತ್ಯ ಗ್ರಂಥ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಇಬ್ಬರಿಗೆ ತಲಾ 10 ಸಾವಿರ ರೂ ನಗದನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಗೊ.ರು.ಚ ದತ್ತಿನಿಧಿ ಪ್ರಶಸ್ತಿಗೆ ನಾಲ್ವರು ಆಯ್ಕೆ: ಮೇ.18ರಂದು ನಗರದಲ್ಲಿ ಪ್ರದಾನ ಸಮಾರಂಭ

    ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ 18ರಂದು ಬೆಳಗ್ಗೆ 11ಗಂಟೆಗೆ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿರುವ ಸಮಾರಂಭದ ಸಾನಿಧ್ಯ ವಹಿಸಲಿರುವ ಬೇಬಿ ಗ್ರಾಮ ಮತ್ತು ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ವಹಿಸಲಿದ್ದಾರೆ.

    ಗೊ.ರು.ಚ ದತ್ತಿನಿಧಿ ಪ್ರಶಸ್ತಿಗೆ ನಾಲ್ವರು ಆಯ್ಕೆ: ಮೇ.18ರಂದು ನಗರದಲ್ಲಿ ಪ್ರದಾನ ಸಮಾರಂಭ

    ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್ ಭಾಗವಹಿಸುವರು. ಸಾಹಿತಿ ಡಾ.ಪ್ರದೀಪ್ ಕುಮಾರ ಹೆಬ್ರಿ ಅಭಿನಂದನಾ ನುಡಿಗಳನ್ನಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಉಪಸ್ಥಿತರಿರುವರು ಎಂದು ವಿವರಿಸಿದ್ದಾರೆ.

    ಗೊ.ರು.ಚ ದತ್ತಿನಿಧಿ ಪ್ರಶಸ್ತಿಗೆ ನಾಲ್ವರು ಆಯ್ಕೆ: ಮೇ.18ರಂದು ನಗರದಲ್ಲಿ ಪ್ರದಾನ ಸಮಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts