More

    YouTube​ ವಿಡಿಯೋಗಾಗಿ ಗಂಟೆಗೆ 300 ಕಿಮೀ ವೇಗದಲ್ಲಿ ಬೈಕ್​ ಚಾಲನೆ: ಯೂಟ್ಯೂಬರ್​ ದುರ್ಮರಣ

    ನವದೆಹಲಿ: ಯೂಟ್ಯೂಬ್​ ವಿಡಿಯೋಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಬೈಕ್​ ಓಡಿಸುವಾಗ ನಿಯಂತ್ರಣ ತಪ್ಪಿ ಡಿವೈಡರ್​ಗೆ ಬೈಕ್​ ಡಿಕ್ಕಿಯಾಗಿ ಯೂಟ್ಯೂಬರ್​ ದುರಂತ ಸಾವಿಗೀಡಾಗಿರುವ ಘಟನೆ ಬುಧವಾರ (ಮೇ.4) ಬೆಳಗ್ಗೆ 10 ಗಂಟೆಗೆ ಯುಮುನಾ ಎಕ್ಸ್​ಪ್ರೆಸ್​ವೇನಲ್ಲಿ ನಡೆದಿದೆ.

    ವೃತ್ತಿಪರ ಬೈಕರ್​

    ಮೃತ ಯೂಟ್ಯೂಬರ್​ನನ್ನು ಅಗಸ್ತ್ಯ ಚೌಹಾಣ್​ (22) ಎಂದು ಗುರುತಿಸಲಾಗಿದೆ. ಈತ ಉತ್ತರಾಖಂಡದ ಡೆಹ್ರಾಡೂನ್​ನ ಕನ್ನಾಟ್ ಪ್ಲೇಸ್ ನಿವಾಸಿ. ಬೈಕ್​ ರೈಡರ್​ ಹಾಗೂ ಯೂಟ್ಯೂಬರ್​​ ಆಗಿದ್ದ. ಈತ ವೃತ್ತಿಪರ ಬೈಕರ್​ ಆಗಿದ್ದ. ಆದರೆ, ದುರಾದೃಷ್ಟವಶಾತ್​ ಅದೇ ಬೈಕ್​ನಿಂದ ಇಂದು ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ.

    ಇದನ್ನೂ ಓದಿ: ವರುಣದಲ್ಲಿ ಮಾಜಿ ಸಿಎಂಗೆ ಶುರುವಾಗಿದೆಯಾ ಈ ಒಂದು ಭಯ? ಹೋದಲೆಲ್ಲ ಕ್ಷಮೆ ಕೋರುತ್ತಿರುವ ಸಿದ್ದು

    ಹೆಲ್ಮೆಟ್​ ಛಿದ್ರ

    ಅಗಸ್ತ್ಯ ಅವರು ZX 10R ನಿಂಜಾ ಸೂಪರ್‌ಬೈಕ್​ನಲ್ಲಿ ಪ್ರಯಾಣಿಸುವಾಗ ತಮ್ಮ ಯೂಟ್ಯೂಬ್​ ಚಾನೆಲ್​ಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಓಡಿಸಲು ಪ್ರಯತ್ನಿಸಿದರು. ಆದರೆ, ಬೈಕ್​ ನಿಯಂತ್ರಣ ಕಳೆದುಕೊಂಡು ಉತ್ತರ ಪ್ರದೇಶದ ಯಮುನಾ ಎಕ್ಸ್​ಪ್ರೆಸ್​ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದು ದುರಂತ ಸಾವಿಗೀಡಾಗಿದ್ದಾರೆ. ಅಗಸ್ತ್ಯ ಧರಿಸಿದ್ದ ಹೆಲ್ಮೆಟ್​ ಕೂಡ ಛಿದ್ರವಾಗಿದೆ. ತಲೆಗೆ ಜೋರಾದ ಪೆಟ್ಟು ಬಿದ್ದಿದ್ದರಿಂದ ಅಗಸ್ತ್ಯ ಸ್ಥಳದಲ್ಲೇ ಕೊನೆಯುಸಿರೆಳೆದನು. ಘಟನೆ ನಡೆದ ಜಾಗದಲ್ಲಿ ಅಗಸ್ತ್ಯ ದೇಹದ ಸುತ್ತ ರಕ್ತ ಮಡುಗಟ್ಟಿತ್ತು.

    ಯೂಟ್ಯೂಬ್ ಚಾನೆಲ್

    ಉತ್ತರಾಖಂಡದ ಡೆಹ್ರಾಡೂನ್ ಮೂಲದ ಅಗಸ್ತ್ಯ ದೆಹಲಿಯಲ್ಲಿ ಮೋಟಾರ್ ಬೈಕ್ ರೇಸಿಂಗ್ ಸ್ಪರ್ಧೆಗಾಗಿ ಆಗ್ರಾದಿಂದ ಬೈಕ್​ನಲ್ಲಿ ತೆರಳಿದ್ದರು. ಅಗಸ್ತ್ಯ ಅವರು ‘ಪ್ರೊ ರೈಡರ್ 1000’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಇದು 1.2 ಮಿಲಿಯನ್ ಚಂದಾದಾರರನ್ನು ಸಹ ಹೊಂದಿದೆ.

    ಎಚ್ಚರಿಕೆ ಸಂದೇಶ

    ಅಪಘಾತ ಸಂಭವಿಸುವ 16 ಗಂಟೆಗಳ ಮೊದಲು ಅವರು ಯೂಟ್ಯೂಬ್‌ನಲ್ಲಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಅದರಲ್ಲಿ ತನ್ನ ಸ್ನೇಹಿತರನ್ನು ದೆಹಲಿಗೆ ಬರುವಂತೆ ಹೇಳಿದ್ದಾನೆ. ಅಗಸ್ತ್ಯ ಅವರು ತಮ್ಮ ಚಾನೆಲ್‌ನಲ್ಲಿ ಪ್ರತಿ ಬಾರಿ ವಿಡಿಯೋವನ್ನು ಅಪ್‌ಲೋಡ್ ಮಾಡಿದಾಗ ವೇಗವಾಗಿ ಬೈಕ್​ ಚಲಾಯಿಸಬೇಡಿ ಎಂದು ಎಚ್ಚರಿಕೆ ಸಂದೇಶ ಹಾಕುತ್ತಿದ್ದರು. ಆದರೆ, ಇಂದು ಅವರೇ ವೇಗದ ಚಾಲನೆಯಿಂದ ದುರ್ಮರಣಕ್ಕೀಡಾಗಿದ್ದಾರೆ.

    ಇದನ್ನೂ ಓದಿ: ಲಿಂಗಾಯತ ಸಮುದಾಯದವರಿಗೆ ಅನ್ಯಾಯ ಹೇಗೆ? ಶೆಟ್ಟರ್​ಗೆ ಡಾ.ವಿಜಯ ಸಂಕೇಶ್ವರ ಪ್ರಶ್ನೆ

    ಬೈಕ್‌ನ ನಂಬರ್ ಮೂಲಕ ಉತ್ತರ ಪ್ರದೇಶ ಪೊಲೀಸರು ಉತ್ತರಾಖಂಡ ಪೊಲೀಸರನ್ನು ಸಂಪರ್ಕಿಸಿ ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಅಪಘಾತದ ವೇಳೆ ಅಗಸ್ತ್ಯ ಸ್ನೇಹಿತರು ಕೂಡ ಅವರೊಟ್ಟಿಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಂಬಂಧಿಕರ ಮನೆಯಲ್ಲೇ 2.5 ಕೋಟಿ ನಗದು, 100 ಸವರನ್​ ಚಿನ್ನಾಭರಣ ದೋಚಿದ ಕಿಲಾಡಿ ಲೇಡಿ ಅಂದರ್​!

    ಇಂದು ಕಲ್ಪತರು ನಾಡಲ್ಲಿ ನಮೋ ಮೇನಿಯಾ: ತುಮಕೂರು ಸಂಚಾರ ಮಾರ್ಗದಲ್ಲಿ ಬದಲಾವಣೆ

    ಅಕ್ರಮ ಆಸ್ತಿ ಐಟಿಯಿಂದ ಜಪ್ತಿ! 1 ವರ್ಷದಲ್ಲಿ 1,533 ಕೋಟಿ ರೂ. ಮೌಲ್ಯದ ಬೇನಾಮಿ ಸ್ವತ್ತು ಸರ್ಕಾರದ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts