More

    ವರುಣದಲ್ಲಿ ಮಾಜಿ ಸಿಎಂಗೆ ಶುರುವಾಗಿದೆಯಾ ಈ ಒಂದು ಭಯ? ಹೋದಲೆಲ್ಲ ಕ್ಷಮೆ ಕೋರುತ್ತಿರುವ ಸಿದ್ದು

    ಮೈಸೂರು: ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎನ್ನುವಂತಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸದ್ಯದ ಪರಿಸ್ಥಿತಿ. ಆಲೋಚಿಸಿದೆ ಆಡಿದ ಮಾತಿಗೆ ಇದೀಗ ಸಿದ್ದರಾಮಯ್ಯ ಅವರು ಪಶ್ಚಾತಾಪ ಪಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

    ಲಿಂಗಾಯತರ ಜಪ

    ಲಿಂಗಾಯತ ಸಿಎಂ ಎಲ್ಲರು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದರು. ಇದು ರಾಜ್ಯದಲ್ಲಿ ಭಾರೀ ವಿವಾದ ಎಬ್ಬಿಸಿದೆ. ಇದೀಗ ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದ್ದು, ವರುಣ ಕ್ಷೇತ್ರದಲ್ಲಿ ಲಿಂಗಾಯತರು ತಿರುಗಿಬಿದ್ದರೆ ಏನು ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ. ಹೀಗಾಗಿ ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಸಿದ್ದರಾಮಯ್ಯ ಲಿಂಗಾಯತರ ಜಪ ಮಾಡುತ್ತಿದ್ದಾರೆ.

    ಇದನ್ನೂ ಓದಿ: NEET​ ಪರೀಕ್ಷಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ ಪ್ರಧಾನಿ ಮೋದಿ ರೋಡ್​ ಶೋ!

    ಬಸವಣ್ಣನ‌ ಅಭಿಮಾನಿ

    ವರುಣ ಕ್ಷೇತ್ರದ ಪ್ರಚಾರದ ತುಂಬೆಲ್ಲ ಸಿದ್ದರಾಮಯ್ಯ ಅವರು ಲಿಂಗಾಯತರ ಕ್ಷಮೆ ಕೇಳುತ್ತಿದ್ದಾರೆ. ನನ್ನನ್ನು ಲಿಂಗಾಯತ ವಿರೋಧಿ ಅಂತ ಬಿಂಬಿಸುತ್ತಿದ್ದಾರೆ. ಆದರೆ ನಾನು ಬಸವಣ್ಣನ‌ ಅಭಿಮಾನಿ. ನನ್ನನ್ನು ಆಶೀರ್ವದಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಡ್ಯಾಮೇಜ್ ಕಂಟ್ರೋಲ್‌

    ಮತದಾನ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ವರುಣದಲ್ಲಿ ಲಿಂಗಾಯತರು ಮುನಿದರೆ ಸಿದ್ದರಾಮಯ್ಯಗೆ ಗೆಲುವು ಕಷ್ಟ. ಇದನ್ನರಿತೇ ಡ್ಯಾಮೇಜ್ ಕಂಟ್ರೋಲ್‌ಗೆ ಸಿದ್ದು ಮುಂದಾಗಿದ್ದಾರೆ. ಈಗ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಯಶಸ್ವಿ ಆಗುತ್ತಾ ಎಂಬ ಪ್ರಶ್ನೆಗೆ ಚುನಾವಣೆಯಲ್ಲೇ ಉತ್ತರ ಸಿಗಲಿದೆ. (ದಿಗ್ವಿಜಯ ನ್ಯೂಸ್​)

    ಇಂದು ಕಲ್ಪತರು ನಾಡಲ್ಲಿ ನಮೋ ಮೇನಿಯಾ: ತುಮಕೂರು ಸಂಚಾರ ಮಾರ್ಗದಲ್ಲಿ ಬದಲಾವಣೆ

    ಸಂಪಾದಕೀಯ | ಪರಿಶೀಲಿಸಿ ವ್ಯವಹರಿಸಿ; ಪೊಲೀಸ್ ಇಲಾಖೆ ಹೆಸರಲ್ಲೇ ನಕಲಿ ನೇಮಕಾತಿ ವೆಬ್​ಸೈಟ್

    ಅಕ್ರಮ ಆಸ್ತಿ ಐಟಿಯಿಂದ ಜಪ್ತಿ! 1 ವರ್ಷದಲ್ಲಿ 1,533 ಕೋಟಿ ರೂ. ಮೌಲ್ಯದ ಬೇನಾಮಿ ಸ್ವತ್ತು ಸರ್ಕಾರದ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts