ಸಿನಿಮಾ

NEET​ ಪರೀಕ್ಷಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದ ಪ್ರಧಾನಿ ಮೋದಿ ರೋಡ್​ ಶೋ!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಾಗೂ ಭಾನುವಾರ ಬೆಂಗಳೂರು ನಗರದ್ಲಲಿ ರೋಡ್​ ಶೋ ಹಮ್ಮಿಕೊಳ್ಳಲಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ನಡೆಸಲು ಉದ್ದೇಶಿಸಿರುವ ರೋಡ್​ ಶೋ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ.

ಇದನ್ನೂ ಓದಿ: ಪ್ರಧಾನಿ ರೋಡ್ ಶೋ; ಭದ್ರತೆಯ ಕಾರಣಕ್ಕೆ ವಧುವನ್ನು ತಡೆದ ಪೊಲೀಸರು | ಮೋದಿಯಂತೆ ವೇಷ ತೊಟ್ಟ ಬಾಲಕ

NEET ಪರೀಕ್ಷೆ

ಇನ್ನು ಶನಿವಾರ ಹಾಗೂ ಭಾನುವಾರ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ ನಡೆಸುತ್ತಿದ್ದು ಇದರಿಂದಾಗಿ ನೀಟ್​ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ಪ್ರಧಾನಿ ರೋಡ್​ ಶೋ ನಡೆಸುವ ಕಾರಣ ಟ್ರಾಫಿಕ್​ ಜಾಮ್​ ಉಂಟಾಗಿ ರಸ್ತೆಗಳನ್ನು ಬಂದ್​ ಮಾಡಲಾಗುತ್ತದೆ. ಈಗಾಗಿ ನಗರದ ವಿವಿಧ ಭಾಗಗಳಿಂದ ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆ ಉಂಟಾಗುತ್ತದೆ.

ಹೀಗಾಗಿ ಇದಕ್ಕೆ ಸಂಬಂಧಪಟ್ಟಿರೋ ಅಧಿಕಾರಿಗಳು ಕೂಡಲೇ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

Latest Posts

ಲೈಫ್‌ಸ್ಟೈಲ್