More

    ಬಜರಂಗದಳವನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ: ವೀರಪ್ಪ ಮೊಯ್ಲಿ

    ದಕ್ಷಿಣ ಕನ್ನಡ: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಮಧ್ಯೆ ರಾಜಕೀಯ ಪಕ್ಷಗಳ ನಾಯಕರು ತಮ್ಮತ್ತ ಮತದಾರರನ್ನು ಸೆಳೆಯಲು ಭಿನ್ನ ವಿಭಿನ್ನ ಕಸರತ್ತಿನ ಮೊರೆ ಹೋಗಿದ್ದಾರೆ.

    ಇನ್ನು ಮಂಗಳವಾರ ಬಿಡುಗಡೆಯಾದ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧದ ಭರವಸೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಈ ಕುರಿತು ಹಿರಿಯ ನಾಯಕರೊಬ್ಬರು ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

    ನಿಷೇಧಿಸಲು ಸಾಧ್ಯವಿಲ್ಲ

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ನಾವು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹೇಳಿದ್ದೇವೆ.

    ಅದರಂತೆ ನಾವು ನಮ್ಮ ಪ್ರಣಾಳಿಕೆಯಲ್ಲಿ PFI ಹಾಗೂ ಭಜರಂಗದಳವನ್ನು ನಿಷೇಧಿಸುತ್ತೇವೆ ಎಂದಿದ್ದೇವೆ. ಒಂದು ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿ ಇರುವುದಿಲ್ಲ. ಬಜರಂಗದಳವನ್ನು ನಾವು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    Congress Bajarangadal

    ಇದನ್ನೂ ಓದಿ: ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಕ್ರಮ ಜರುಗಿಸುತ್ತೇವೆ, ಇದರಲ್ಲಿ ತಪ್ಪೇನಿದೆ: ಸಿದ್ದರಾಮಯ್ಯ

    ಯಾವುದೇ ಪ್ರಸ್ತಾಪವಿಲ್ಲ

    ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೆಚ್ಚಿನ ಮಾಹಿತಿಯನ್ನು ಕೊಡುತ್ತಾರೆ. ಸುಪ್ರೀಂ ಕೋರ್ಟ್​ ಸಹ ದ್ವೇಷ ಭಅಷಣವನ್ನು ನಿಲ್ಲಿಸುವಂತೆ ಹೇಳಿದೆ. ಬಜರಂಗದಳವ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ನಾನು ಒಬ್ಬ ಪಕ್ಷದ ನಾಯಕನಾಗಿ ಇದನ್ನು ನಿಮ್ಮಗೆ ಹೇಳಬಲ್ಲೇ ಎಂದಿದ್ದಾರೆ.

    ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತರ ನಡುವಿನ ಕೋಮು ಸೌಹಾರ್ದವನ್ನು ಕದಡುವ ಸಂಘಟನೆಗಳ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಅಂಶವನ್ನು ನಾವು ಪ್ರಣಾಳಿಕೆಯಲ್ಲಿ ತಿಳಿಸಿದ್ದೇವೆ.

    ನಾವು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿರುವ ಕಾರಣ PFI ಹಾಗೂ ನೈತಿಕ ಪೊಲೀಸ್​ಗಿರಯ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಬಜರಂಗದಳದ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts