More

    ಲಿಂಗಾಯತ ಸಮುದಾಯದವರಿಗೆ ಅನ್ಯಾಯ ಹೇಗೆ? ಶೆಟ್ಟರ್​ಗೆ ಡಾ.ವಿಜಯ ಸಂಕೇಶ್ವರ ಪ್ರಶ್ನೆ

    ಲಿಂಗಾಯತರಿಗೆ ಯಾರಿಂದ ಯಾರಿಗೆ ಅನ್ಯಾಯವಾಗಿದೆ ಎಂಬುದು ಯೋಚಿಸಬೇಕು ಎಂದು ಉದ್ಯಮಿ, ಮಾಜಿ ಸಂಸದ ಡಾ. ವಿಜಯ ಸಂಕೇಶ್ವರ ಕರೆಕೊಟ್ಟರು. ಯಾರೋ ಒಬ್ಬರಿಗೆ ಟಿಕೆಟ್ ಸಿಕ್ಕಿಲ್ಲ ಅಂದ ಕೂಡಲೇ ಲಿಂಗಾಯತರಿಗೆ ಅನ್ಯಾಯ ಆಗಿದೆ ಅನ್ನುತ್ತಾರೆ. ಅವರ ಲೆಕ್ಕದಲ್ಲಿ ಲಿಂಗಾಯತರೆಂದರೆ ಅಣ್ಣ ಮತ್ತು ತಮ್ಮ ಮಾತ್ರವೇ ಎಂದು ಪ್ರಶ್ನಿಸಿದರು.

    ಪಕ್ಷ ಅವರನ್ನು ಕ್ಷಮಿಸಿತ್ತು!

    ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಹೆಲಿಕಾಪ್ಟರ್ ಓಡಾಡಿದವು. ರೂಲಿಂಗ್ ಪಾರ್ಟಿ ಮನುಷ್ಯನೇ ಬಿಎಸ್​ವೈ ಇಳಿಸಲು ಗಣಿಧಣಿಗಳೊಂದಿಗೆ ಕೈಜೋಡಿಸಿ ಶಾಸಕರನ್ನು ಹೈದರಾಬಾದ್​ಗೆ ಕರೆದೊಯ್ದರು. ಆದರೂ ಪಕ್ಷ ಅವರನ್ನು ಕ್ಷಮಿಸಿತ್ತು. ಇದು ಮನುಷ್ಯತ್ವ ಅಲ್ಲವೇ ಎಂದು ಪ್ರಶ್ನಿಸಿದರು. ಇಂತವರನ್ನು ಕ್ಷಮಿಸಿದ್ದೇ ಬಿಜೆಪಿಯ ತಪ್ಪು ನಿರ್ಧಾರ ಎಂದು ನನ್ನ ಅಭಿಪ್ರಾಯವನ್ನು ಪಕ್ಷದ ನಾಯಕರಲ್ಲಿ ಹೇಳಿದ್ದೆ ಎಂದು ನೆನಪಿಸಿಕೊಂಡರು.

    ನನ್ನಿಂದಲೇ ಎನ್ನುವುದು ಮೂರ್ಖತನ

    ಹಾಗೆಯೇ, ಡಾ.ಪ್ರಭಾಕರ ಕೋರೆ, ಶಂಕರಣ್ಣ ಮುನವಳ್ಳಿ, ಡಾ. ಮಹೇಶ್ ನಾಲವಾಡ ಅವರನ್ನು ಪಕ್ಷಕ್ಕೆ ಕರೆತರಲು ಪ್ರಯತ್ನಿಸಿದಾಗ ಇದೇ ಶೆಟ್ಟರ್ ಅಡ್ಡಗಾಲು ಹಾಕಿ ಅಸಮಾಧಾನ ವ್ಯಕ್ತಮಾಡಿದ್ದರು. ಇದು ಲಿಂಗಾಯತರಿಗೆ ಆದ ಅನ್ಯಾಯವಲ್ಲವೇ ಎಂದು ಚಿವುಟಿದರು. ಬಿಜೆಪಿ ಎಂದರೆ ಹಿಂದಿ ರಾಜ್ಯಗಳಿಗೆ ಸೀಮಿತ, ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಇದ್ದಾಗ ರಾಮಜನ್ಮಭೂಮಿ ಹೋರಾಟ ನಡೆದು ಸಾಕಷ್ಟು ಜಾಗೃತಿಯಾಯಿತು.

    ಬಿಜೆಪಿ ಬೆಳೆಯಲು ಬಿ.ಬಿ.ಶಿವಪ್ಪ, ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ್, ಶಂಕರಮೂರ್ತಿ, ಈಶ್ಚರಪ್ಪ ಕೊಡುಗೆ ಸಾಕಷ್ಟಿದೆ. ನಾವು ಅವರೊಟ್ಟಿಗೆ ಓಡಾಡಿದ್ದೇವೆ. ಅವರೆಲ್ಲ ಸಾಧಾರಣ ರೈಲಲ್ಲಿ ಬಂದು ಕೆಂಪು ಬಸ್​ನಲ್ಲಿ ಹೋಗುತ್ತಿದ್ದರು. ಅಂದು ಜನತೆ ಬಿಜೆಪಿ ಎಂದೂ ಹೇಳುತ್ತಿರಲಿಲ್ಲ. ಬಿಜಿಪಿ ಅನ್ನುತ್ತಿದ್ದರು. ಅಷ್ಟು ಕೆಳಮಟ್ಟದಲ್ಲಿ ಇದ್ದೆವು. ಆದರೆ, ಕೆಲವರು ‘ಇಟ್ಟಂಗಿ ಇಟ್ಟಿದ್ದೇವೆ’ ಎಂದು ಹೇಳುತ್ತಾರೆ. ನನ್ನಿಂದಲೇ ಎನ್ನುವುದು ಮೂರ್ಖತನ ಎಂದು ಶೆಟ್ಟರ್ ವಿರುದ್ಧ ಪರೋಕ್ಷವಾಗಿ ಕುಟುಕಿದರು.

    ಬಿಜೆಪಿ ಬೆಳೆಯಲು ಈದ್ಗಾ ಮೈದಾನದ ಹೋರಾಟ ಕಾರಣ

    ಉತ್ತರ ಕರ್ನಾಟಕದಲ್ಲಿ ಬಿಜೆಪಿ ಬೆಳೆಯಲು ಈದ್ಗಾ ಮೈದಾನದ ಹೋರಾಟ ಕಾರಣ ಎಂದ ಅವರು, 1994ರ ಚುನಾವಣೆಯಲ್ಲಿ ಬಿಜೆಪಿ ಮೂರು ಸೀಟು ಗೆಲ್ಲ್ಲು ಪ್ರಲ್ಹಾದ ಜೋಶಿ ಕಾರಣ. ಮುಂದೆ ಎಷ್ಟೋ ಜನ ಶಾಸಕರಾಗುತ್ತಾರೆ, ಹೋಗುತ್ತಾರೆ. ಆದರೆ ಮೂಲ ಹೋರಾಟ ಮುಖ್ಯ ಎಂದರು.

    ಮೋದಿ ಅವರಿಗೆ 72 ವರ್ಷ, ಕರ್ನಾಟಕಕ್ಕೆ ಕಳಕಳಿಯಿಂದ ಬರುತ್ತಿದ್ದಾರೆ. ಸಾಕಷ್ಟು ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ. ಈಗ ಮೋದಿ ಅವರ ಋಣ ತೀರಿಸಲು ನಾವೆಲ್ಲ ಪ್ರಮಾಣ ಮಾಡಬೇಕು. 224 ಕ್ಷೇತ್ರದಲ್ಲಿ ನಿಮ್ಮ ಬೀಗರು, ನೆಂಟರು ಇರುತ್ತಾರೆ. ಅವರಿಗೆಲ್ಲ ಹೇಳಿ ಎಂದು ಸಭೆಯಲ್ಲಿದ್ದವರಿಗೆ ಡಾ.ವಿಜಯ ಸಂಕೇಶ್ವರ ಕರೆನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts