More

    ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ಮತ್ತೊಂದು ಚೀತಾ ಸಾವು

    ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿದ್ದ ದಕ್ಷಿಣ ಆಫ್ರಿಕಾದ ‘ದಕ್ಷ’ ಹೆಸರಿನ ಹೆಣ್ಣು ಚೀತಾ ಸಾವನ್ನಪ್ಪಿದೆ ಎಂದು ವರದಿಯಾಗಿದೆ. 40 ದಿನಗಳ ಅಂತರದಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾನನ್ನಪ್ಪಿದ ಮೂರನೇ ಚೀತಾ ಇದಾಗಿದೆ.

    ಮೃತ ಚೀತಾ ಮೈಮೇಲೆ ಗಾಯ

    ಮೃತಪಟ್ಟಿರುವ ಚೀತಾದ ಮೈಮೇಲೆ ಗಾಯಗಳಾಗಿವೆ. ವಾಯು ಮತ್ತು ಅಗ್ನಿ ಎಂಬ ಪುರುಷ ಚೀತಾಗಳೊಂದಿಗಿನ ಹೊಡೆದಾಟದಿಂದ ಗಾಯಗೊಂಡು ‘ದಕ್ಷ’ ಸಾವನ್ನಪ್ಪಿದೆ ಎಂದು ಮಧ್ಯಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ಹೇಳಿದ್ದಾರೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಕೇವಲ ಸ್ಟೋರಿ ಅಲ್ಲ – ಕಣ್ತೆರೆಸುವ ಅದೆಷ್ಟೋ ಹೆತ್ತವರ ಕಣ್ಣೀರ ಸ್ಟೋರಿ: ಪ್ರಲ್ಹಾದ ಜೋಶಿ

    ಪ್ರಾಜೆಕ್ಟ್ ಚೀತಾ

    ‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ಕಳೆದ ವರ್ಷದಿಂದ ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿದ್ದು, ಕುನೋ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬಿಡಲಾಗಿದೆ. ಅದರಲ್ಲಿ ಎರಡು ಚೀತಾಗಳು ಕಳೆದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸಾವನ್ನಪ್ಪಿವೆ.

    ಇದನ್ನೂ ಓದಿ: ಅವಳಿ ದತ್ತು ಪುತ್ರಿಯರಿಗೆ ಕಿರುಕುಳ; ಸಿಗರೇಟ್​ನಿಂದ ಸುಟ್ಟು ವಿಕೃತಿ ಮೆರೆದ ವೈದ್ಯ ದಂಪತಿ

    ಜೂನ್‌ನಲ್ಲಿ ಮಾನ್ಸೂನ್ ತಿಂಗಳು ಪ್ರಾರಂಭವಾಗುವ ಮೊದಲು ಐದು ಚೀತಾಗಳನ್ನು (ಮೂರು ಹೆಣ್ಣು ಮತ್ತು ಎರಡು ಗಂಡು) ಕ್ವಾರಂಟೈನ್​ ಶಿಬಿರಗಳಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಲಾಗುವುದು ಕೇಂದ್ರ ಪರಿಸರ ಸಚಿವಾಲಯವು ತಿಳಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts