ಚುನಾವಣಾ ಕರ್ತವ್ಯಕ್ಕೆ ತೆರಳಿದ KSRTC ಬಸ್​ಗಳು; ಮೆಜೆಸ್ಟಿಕ್​ನಲ್ಲಿ ಪ್ರಯಾಣಿಕರ ಪರದಾಟ

Mejestic
Published on

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಕಲ ರೀತಿಯಲ್ಲೂ ಸಿದ್ಧತೆ ನಡೆಯುತ್ತಿವೆ. ಇದೀಗ ಕೆಎಸ್​​ಆರ್​ಟಿಸಿ ಬಸ್​ಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವುದರಿಂದ ಪ್ರಯಾಣಿಕರು ಪರದಾಡ ನಡೆಸುತ್ತಿರುವ ಪರಿಸ್ಥಿತಿ ಮೆಜೆಸ್ಟಿಕ್ ಬಸ್ ನಿಲ್ದಾಣ ಸೇರಿದಂತೆ ರಾಜ್ಯ ವಿವಿಧ ಬಸ್​ ನಿಲ್ದಾಣಗಳಲ್ಲಿ ಕಂಡು ಬಂದಿದೆ.

ಪ್ರಯಾಣಿಕರಿಗೆ ಸಮಸ್ಯೆ

ಚುನಾವಣಾ ಕರ್ತವ್ಯಕ್ಕೆ 3500 ಕೆಎಸ್​​ಆರ್​ಟಿಸಿ ಬಸ್​ಗಳು ತೆರಳಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಮಸ್ಯೆ ಎದುರಾಗಿದೆ. ಮೆಜೆಸ್ಟಿಕ್​ಗೆ ಬರುತ್ತಿರುವ ಸೀಮಿತ ಬಸ್​ಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ದೂರ ಊರಿಗೂ ನಿಂತುಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಟ್ಯಾಂಡಿಂಗ್​ನಲ್ಲೇ ಪ್ರಯಾಣ

ಚುನಾವಣೆಯ ಕಾರಣದಿಂದ ಕೆಲ ಪ್ರಯಾಣಿಕರು ತಮ್ಮ ಸೀಟುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡಿದ್ದಾರೆ. ಆದರೆ ಬಹುತೇಕ ಸಾಮಾನ್ಯ ಪ್ರಯಾಣಿಕರು ಬಸ್ಸಿಲ್ಲದೆ, ಅತ್ತ ಮತ ಚಲಾವಣೆಗೆ ತೆರಳಲು ಸಮಸ್ಯೆ ಅನುಭವಿಸುವಂತಾಗಿದೆ.

ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಭಾಗಗಳಿಗೆ ತೆರಳುವ ಬಸ್​ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುತ್ತಿದು, ಸೀಮಿತ ಬಸ್​ಗಳಲ್ಲಿ ಪ್ರಯಾಣಿಕರು ನಿಂತುಕೊಂಡು ಹೋಗಬೇಕಾಗದ ಪರಿಸ್ಥಿತಿ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net