More

    ‘ದಿ ಕೇರಳ ಸ್ಟೋರಿ’ ಕೇವಲ ಸ್ಟೋರಿ ಅಲ್ಲ – ಕಣ್ತೆರೆಸುವ ಅದೆಷ್ಟೋ ಹೆತ್ತವರ ಕಣ್ಣೀರ ಸ್ಟೋರಿ: ಪ್ರಲ್ಹಾದ ಜೋಶಿ

    ಬೆಂಗಳೂರು: ದೇಶದಾದ್ಯಂತ ಸಾಕಷ್ಟು ಚರ್ಚೆ ಹುಟ್ಟುಹಾಕಿರುವ “ದಿ ಕೇರಳ ಸ್ಟೋರಿ” ಸಿನಿಮಾವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವೀಕ್ಷಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ, ಅಮಾಯಕ ಹಿಂದೂ ಹೆಣ್ಣು ಮಕ್ಕಳನ್ನು ನಾನಾ ರೀತಿಯ ಆಮಿಷ ಒಡ್ಡಿ, ಪ್ರೀತಿಯ ಹೆಸರಿನಲ್ಲಿ ಮೋಸದ ಜಾಲ ಸೃಷ್ಟಿಸಿ ಹೆಣ್ಣು ಮಕ್ಕಳ ಬಾಳನ್ನು ಕತ್ತಲಾಗಿಸಿದ ನೈಜ ಕಥೆಯಾಧಾರಿತ ಸಿನಿಮಾವನ್ನು ಕುಟುಂಬ ಸಮೇತವಾಗಿ ವೀಕ್ಷಿಸಿದೆ ಎಂದು ಹೇಳಿಕೊಂಡಿದ್ದಾರೆ.

    ದೇಶದ ಹಿತದೃಷ್ಟಿಯಿಂದ ಮನಸ್ಥಿತಿ ಬದಲಾಗಬೇಕಿದೆ

    ಕಮ್ಯುನಿಸ್ಟ್ ಆಳ್ವಿಕೆಯ ಕೇರಳದಲ್ಲಿ ಯಾವ ರೀತಿಯ ಉಗ್ರ ತಾಣ ಸೃಷ್ಟಿಸಲಾಗಿದೆ ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ಹಿಂದು ಮತ್ತು ಇತರೆ ಧರ್ಮದ ಹೆಣ್ಣು ಮಕ್ಕಳನ್ನು ಯಾವ ರೀತಿ ರವಾನೆ ಮಾಡಲಾಗುತ್ತಿದೆ ಎಂಬ ಸಂಪೂರ್ಣ ಚಿತ್ರಣವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ದೇಶದ ಹಿತದೃಷ್ಟಿಯಿಂದ ಇಂತಹ ಮನಸ್ಥಿತಿ ಬದಲಾಗಬೇಕಿದೆ. ಕಾನೂನಿನ ಮೂಲಕ ಈ ಮನಸ್ಥಿತಿಯನ್ನು ಸಂಪೂರ್ಣವಾಗಿ ನಾಶ ಮಾಡಬೇಕಿದೆ ಎಂದು ಸಿನಿಮಾ ವೀಕ್ಷಿಸಿದ ಬಳಿಕ ಪ್ರಲ್ಹಾದ ಜೋಶಿ ಹೇಳಿದ್ದಾರೆ.

    ಇದನ್ನೂ ಓದಿ: ವಿವಾದದ ಬಿರುಗಾಳಿ; ‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಗೆ ತಡೆ!

    ಪರ-ವಿರೋಧ ಚರ್ಚೆ ಹುಟ್ಟ ಹಾಕಿದ ಸಿನಿಮಾ

    ಕೇರಳದ 32 ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರಿಸಿ, ಐಸಿಸ್ ಪರ ಹೋರಾಡಲು, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ದೇಶಗಳಿಗೆ ಸಾಗಿಸಲಾಗಿದೆ ಎಂಬ ಸಂಭಾಷಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ.

    ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ

    ದಿ ಕೇರಳ ಸ್ಟೋರಿ ಸಿನಿಮಾ ಸಮಾಜದಲ್ಲಿ ಅಶಾಂತಿ ಉಂಟುಮಾಡಬಹುದು ಎಂದು ಹೇಳಿ ಪಶ್ಚಿಮ ಬಂಗಾಳ ಸರ್ಕಾರ ಬ್ಯಾನ್​ ಮಾಡಿದೆ. ಆದರೆ, ಉತ್ತರ ಪ್ರದೇಶ ಸರ್ಕಾರ ಈ ಸಿನಿಮಾಗೆ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದೆ.

    ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರದ ಕುರಿತು ಟೀಕೆ; ಟ್ವೀಟ್​ ಮೂಲಕ ತಿರುಗೇಟು ನೀಡಿದ ನಟಿ

    ಕೇರಳ ಸಿಎಂ ಪಿಣರಾಯಿ ವಿಜಯನ್, ‘ಇದು ಆರ್​ಎಸ್​ಎಸ್ ಪ್ರೇರಿತ, ಪ್ರಚಾರಕ್ಕಾಗಿ ಮಾಡಿರುವ ಸಿನಿಮಾ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಕೇರಳದ ಕಾಂಗ್ರೆಸ್ ಮುಖಂಡರು ಕೆಲವೆಡೆ ಪ್ರತಿಭಟನೆ ನಡೆಸಿದ್ದರು. ಮತ್ತೊಂದೆಡೆ ತಮಿಳು ನಾಡಿನಲ್ಲಿ ಮಲ್ಟಿಪ್ಲೆಕ್ಸ್, ಥಿಯೇಟರ್ ಮಾಲೀಕರು ಸ್ವಯಂಪ್ರೇರಿತರಾಗಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ ಸ್ಥಗಿತಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts