'ದಿ ಕೇರಳ ಸ್ಟೋರಿ' ಚಿತ್ರದ ಕುರಿತು ಟೀಕೆ; ಟ್ವೀಟ್​ ಮೂಲಕ ತಿರುಗೇಟು ನೀಡಿದ ನಟಿ

The Kerala Story
Published on

ಮುಂಬೈ: ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್​ ಜಿಹಾದ್​ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಇನ್ನು ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಈ ಕುರಿತು ಚಿತ್ರದ ನಾಯಕ ನಟಿ ಆದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸುವ ಮೂಲಕ ಖಡಕ್​ ರಿಪ್ಲೈ ನೀಡಿದ್ದಾರೆ.

ಖಡಕ್​ ರಿಪ್ಲೈ

ಇನ್ನು ಈ ಚಿತ್ರವನ್ನು ದ್ವೇಷ ಹಾಗೂ ಪ್ರೊಪಗೆಂಡದ ಆಧಾರದ ಮೇಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಕುರಿತು ನಟಿ ಆದಾ ಶರ್ಮಾ ಕೆಂಡಕಾರಿದ್ದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ನಟಿ ದಿ ಕೇರಳ ಸ್ಟೋರಿ ಚಿತ್ರವನ್ನು ಪ್ರೊಪಗೆಂಡ ಎಂದು ಕರೆಯುತ್ತಿರುವವರು ಸಿನಿಮಾ ವೀಕ್ಷಿಸಿದ ನಂತರವೂ ಈ ರೀತಿಯ ಘಟನೆಗಳು ನಡೆದಿಲ್ಲ ಎಂದು ಆಪಾದಿಸುತ್ತಿದ್ದಾರೆ.

ನಾನು ಈ ಮೂಲಕ ವಿನಂತಿಸುವುದೇನೆಂದರೆ ನೀವು ಐಸಿಸ್​ ಹಾಗೂ ಬ್ರೈಡ್ಸ್​ ಎಂಬ ಎರಡು ಪದಗಳನ್ನು ಗೂಗಲ್​ ಮಾಡಿ ಆ ನಂತರ ನಿಮ್ಮಗೆ ನಮ್ಮ ಚಿತ್ರ ನಿಜ ಎನ್ನಿಸುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.

ಪ್ರಧಾನಿಗಳು ಉಲ್ಲೇಖಿಸಿದ್ದಾರೆ

ಇನ್ನು ಥಿಯೇಟರ್​ಗಳಲ್ಲಿ ನಮ್ಮ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬರು ಎದ್ದು ನಿಂತು ಚಪ್ಪಾಳೆ ಹೊಡೆಯುತ್ತಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಚಿತ್ರದ ಬಗ್ಗೆ ಉಲ್ಲೇಖಿಸಿ ಮಾತನಾಡಿದ್ದಾರೆ.

ಅನೇಕರು ಚಿತ್ರಮಂದಿರ ಹೌಸ್​ಫುಲ್​ ಹಾಗೂ ಬಂಪರ್​​​ ಒಪನಿಂಗ್​ ಎಂಬ ಸಂದೇಶಗಳನ್ನು ಸಹ ಕಳುಹಿಸುತ್ತಿದ್ದಾರೆ. ಇದರ ಹೊರತ್ತಾಗಿಯೂ ಈ ರೀತಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net