More

  ನೀವೆಷ್ಟು ಕೇಳ್ತೀರೋ ಅಷ್ಟು ಹಾಡುತ್ತೇನೆ, ನೀವು ಹೇಳಿದಷ್ಟು ಡ್ಯಾನ್ಸ್ ಮಾಡುತ್ತೇನೆ: ನಟ ಶಿವರಾಜಕುಮಾರ್

  ಶಿವಮೊಗ್ಗ: ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಪಕ್ಷಾತೀತವಾಗಿ ತಾರಾ ಕಳೆ ಬಂದಿದೆ. ಪ್ರತಿ ಪಕ್ಷದಲ್ಲೂ ಒಬ್ಬರಲ್ಲ ಒಬ್ಬರು ಸಿನಿಮಾ ಸ್ಟಾರ್ ಪ್ರಚಾರ ಮಾಡುತ್ತಿದ್ದಾರೆ. ಅದೇ ರೀತಿ ಶಿವಮೊಗ್ಗ ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿಯೂ ಭಾರಿ ಪ್ರಚಾರ ನಡೆಯುತ್ತಿದ್ದು, ಅಲ್ಲಿ ನಟ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಕಾಣಿಸಿಕೊಂಡಿದ್ದಾರೆ.

  ಮಧು ಬಂಗಾರಪ್ಪ ಪರವಾಗಿ ಸೊರಬದ ಆನವಟ್ಟಿಯಲ್ಲಿ ಇಂದು ನಟ ಶಿವರಾಜಕುಮಾರ್ ಪ್ರಚಾರದಲ್ಲಿ ಪಾಲ್ಗೊಂಡು ಮತ ಯಾಚನೆ ಮಾಡಿದರು. ಮಧು ಬಂಗಾರಪ್ಪ ಬೇರೆಯವರಿಗೆ ಒಳ್ಳೆಯದು ಮಾಡಬೇಕು ಎಂಬ ಮನಸಿರುವ ವ್ಯಕ್ತಿ. ಚಿಕ್ಕವರಿರುವಾಗ ಎಲ್ಲರಿಗೂ ಸಹಾಯ ಮಾಡಬೇಕು ಎಂಬ ಮನಸಿರುತ್ತದೆ. ದೊಡ್ಡವರಾಗುತ್ತ ಕೆಲವರಲ್ಲಿ ಸಹಾಯ ಮಾಡುವ ಗುಣ ಕಡಿಮೆಯಾಗುತ್ತದೆ. ಆದರೆ ಮಧು ಬಂಗಾರಪ್ಪ ಅವರಿಗೆ ಯಾವಾಗಲೂ ಬೇರೆಯವರಿಗೆ ಸಹಾಯ ಮಾಡುವ ತುಡಿತ ಇರುತ್ತದೆ. ಅವರನ್ನು ನೀವು ಗೆಲ್ಲಿಸಬೇಕು ಎಂದು ಜನರನ್ನುದ್ದೇಶಿಸಿ ಮಾತನಾಡಿದರು.

  ಇದನ್ನೂ ಓದಿ: ಮತ್ತೆ ಬಂದ ‘ಹುಲಿಯಾ’; 50ಕ್ಕೂ ಹೆಚ್ಚು ಸೆಲೆಬ್ರಿಟಿಗಳ ಸಾಥ್

  ಮಧು ಬಂಗಾರಪ್ಪ ನನ್ನ ಭಾವ ಮಾತ್ರವಲ್ಲ, ಆತ್ಮೀಯ ಸ್ನೇಹಿತ ಕೂಡ. ಅವರನ್ನು ನೀವು ಗೆಲ್ಲಿಸಿದರೆ ಆನವಟ್ಟಿಯಲ್ಲೇ ದೊಡ್ಡ ಕಾರ್ಯಕ್ರಮ ಮಾಡೋಣ ಎಂದ ಶಿವರಾಜಕುಮಾರ್, ನೆರೆದಿದ್ದ ಅಭಿಮಾನಿಗಳ ಕೋರಿಕೆಗೆ ಸ್ಪಂದಿಸುತ್ತ, ‘ಎಷ್ಟು ಹಾಡು ಕೇಳುತ್ತೀರೋ ಅಷ್ಟು ಹಾಡುತ್ತೇನೆ. ನೀವು ಹೇಳಿದಷ್ಟು ಡ್ಯಾನ್ಸ್ ಮಾಡುತ್ತೇನೆ’ ಎಂದೂ ಹೇಳಿದರು.

  ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!

  ರಾಜ್ಯಕ್ಕೆ ಬಂಗಾರಪ್ಪ ಅವರು ಕೊಡುಗೆ ನೀಡಿದ್ದಾರೆ. ಬಂಗಾರಪ್ಪ ಕೊಟ್ಟ ಯೋಜನೆಯನ್ನ ಬಿಜೆಪಿ ಸರ್ಕಾರ ಮುಂದುವರಿಸಿಕೊಂಡು ನಾವು ಮಾಡಿದ್ದು ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಅಂತರದಿಂದ ಸೊರಬದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಆದರೆ ಅತಿ ಹೆಚ್ಚು ಅಂತರದಲ್ಲಿ ಗೆಲ್ಲಬೇಕು ಎಂದು ಮಧು ಬಂಗಾರಪ್ಪ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

  ವಿಮಾನದಿಂದ ಇಳಿದ ಈಕೆಯ ಬಳಿ ಇದ್ದವು 22 ಹಾವುಗಳು!

  ಹಾವುಗಳ ರಾಶಿ: ಇಬ್ಬರಿಗೆ ಕಡಿತ, ಕಂಗಾಲಾದ ಕಾರ್ಮಿಕರು!

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts