ಹಾವುಗಳ ರಾಶಿ: ಇಬ್ಬರಿಗೆ ಕಡಿತ, ಕಂಗಾಲಾದ ಕಾರ್ಮಿಕರು!

Snakes
Published on

ಬಳ್ಳಾರಿ: ನರೇಗಾ ಕೆಲಸದ ಸ್ಥಳದಲ್ಲಿ ಹಾವುಗಳ ರಾಶಿ ಕಂಡುಬಂದಿದ್ದು, ಇಬ್ಬರಿಗೆ ಹಾವು ಕಚ್ಚಿರುವುದರಿಂದ ಕಾರ್ಮಿಕರು ಕಂಗಾಲಾಗಿರುವ ಪ್ರಸಂಗವೂ ನಡೆದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಬಳ್ಳಾರಿ ತಾಲೂಕಿನ ಎತ್ತಿನ ಬೂದಿಹಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನರೇಗಾ ಕೆಲಸದ ಸ್ಥಳದಲ್ಲಿದ್ದ ಕೂಲಿ ಕಾರ್ಮಿಕರಾದ ಗೋಡೆಹಾಳ್ ಬಸಮ್ಮ, ಹರಿಜನ ದುರ್ಗಮ್ಮ ಎಂಬವರಿಗೆ ಹಾವು ಕಚ್ಚಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಒಂದೇ ಸ್ಥಳದಲ್ಲಿ 20ಕ್ಕೂ ಹೆಚ್ಚು ಹಾವುಗಳ ರಾಶಿಯೇ ಕಂಡುಬಂದಿದ್ದು, ಅದನ್ನು ನೋಡಿದ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ. ಮಾತ್ರವಲ್ಲ, ಇಬ್ಬರು ಅದರ ಕಡಿತಕ್ಕೆ ಒಳಗಾದ್ದರಿಂದ ಆತಂಕಗೊಂಡಿದ್ದಾರೆ. ನೋಡಿದ ಕಾರ್ಮಿಕರು. ಹಾವು ಕಡಿತಕ್ಕೆ ಒಳಗಾದವರಿಗೆ ವೈದ್ಯಕೀಯ ವೆಚ್ಚ ಮತ್ತು ಪರಿಹಾರ ಧನ ನೀಡಲು ಒತ್ತಾಯಿಸಿರುವ ಅವರು ಕೆಲಸದ ಸ್ಥಳ ಬದಲಿಸುವಂತೆಯೂ ತಾಲೂಕು ಪಂಚಾಯತ್ ಇಒಗಳಿಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net