ವಿಮಾನದಿಂದ ಇಳಿದ ಈಕೆಯ ಬಳಿ ಇದ್ದವು 22 ಹಾವುಗಳು!

Snakes (1)
Published on

ನವದೆಹಲಿ: ಜಿರಳೆ ಕಂಡರೆ ಬೆಚ್ಚಿ ಬೀಳುವ ಯುವತಿಯರು ಹಲವರಿದ್ದಾರೆ. ಆದರೆ ಇಲ್ಲೊಬ್ಬಳು ಗಟ್ಟಿಗಿತ್ತಿ ಹಾವುಗಳೊಂದಿಗೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾಳೆ. ಅದೂ ಒಂದೆರಡಲ್ಲ, ಬರೋಬ್ಬರಿ 22 ಹಾವುಗಳು!

ಹೀಗೆ 22 ಹಾವುಗಳೊಂದಿಗೆ ವಿಮಾನದಲ್ಲಿ ಬಂದಿಳಿದ ಮಹಿಳೆಯೊಬ್ಬಳು ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈಕೆ ಕೌಲಲಾಂಪುರದಿಂದ ನಿನ್ನೆ ವಿಮಾನದಲ್ಲಿ ಬಂದು ಚೆನ್ನೈ ಏರ್​ಪೋರ್ಟ್​ನಲ್ಲಿ ಇಳಿದಿದ್ದಳು. ಅನುಮಾನದ ಮೇರೆಗೆ ಭದ್ರತಾ ಸಿಬ್ಬಂದಿ ಈಕೆಯನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದರು.

ಕಸ್ಟಮ್ಸ್ ಅಧಿಕಾರಿಗಳು ಈಕೆಯನ್ನು ತಪಾಸಣೆ ಮಾಡಿದ ಬಳಿಕ ಈಕೆಯ ಚೆಕ್​​ಇನ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ವಿವಿಧ ಪ್ರಭೇದದ 22 ಹಾವುಗಳು, ಒಂದು ಗೋಸುಂಬೆ ಇರುವುದು ಕಂಡುಬಂದಿತ್ತು. ಕಸ್ಟಮ್ಸ್ ಆ್ಯಕ್ಟ್ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು, ಈಕೆಯನ್ನು ಇಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net