ಮುಂಬೈ: ಬಾಲಿವುಡ್ ನಟ-ನಟಿಯರು ಆಗೊಮ್ಮೆ ಈಗೊಮ್ಮೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ.
ಕೆಲವೊಮ್ಮೆ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವ ಸಿನಿಮಂದಿ ನಂತರ ಅದಕ್ಕೆ ತೇಪೆ ಹಚ್ಚಿ ಸರಿ ಮಾಡಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ.
ಸೆಲ್ಫಿ ಕ್ಲಿಕಿಸಲು ನಿರಾಕರಣೆ
ಇದೀಗ ಈ ವಿಚಾರವಾಗಿ ಸದ್ದು ಮಾಡುತ್ತಿರುವವರು ಬಾಲಿವುಡ್ ನಟ ಶಾರುಖ್ ಖಾನ್. ಮುಂಬೈನ ಏರ್ಪೋರ್ಟ್ನಲ್ಲಿ ಅಭಿಮಾನಿ ಒಬ್ಬ ನಟನ ಜೊತೆ ಸೆಲ್ಫಿ ಕ್ಲಿಕಿಸಲು ಮುಂದಾಗುತ್ತಾನೆ.
ಇದನ್ನೂ ಓದಿ: VIDEO| ಶಾಲೆಯ ಆವರಣದಲ್ಲಿ ಅವಿತು ಕುಳಿತಿತ್ತು ಕರಡಿ; ಮುಂದೇನಾಯ್ತು ಗೊತ್ತಾ?
ಇದಕ್ಕೆ ಕೋಪಗೊಂಡ ಶಾರುಖ್ ಆತನನ್ನು ತಳ್ಳಿ ಮುಂದೆ ಹೋಗುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಫೋಟೋ-ವಿಡಿಯೋ ವೈರಲ್
ಇನ್ನು ರಾಜ್ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಚಿತ್ರದ ಚಿತ್ರೀಕರಣದ ಸಲುವಾಗಿ ಜಮ್ಮು-ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದು ಈ ವೇಳೆ ಅಭಿಮಾನಿಗಳ ಜೊತೆ ತೆಗೆಸಿಕೊಂಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಈ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮುಂಬೈ ವಿಮಾನ ನಿಲ್ದಾಣದ ಘಟನೆಯನ್ನು ತಾಳೆ ಮಾಡಿ ಟೀಕಿಸುತ್ತಿದ್ದಾರೆ.