More

    ಬಜರಂಗದಳ ಬ್ಯಾನ್; PFIನ ಕೈಗೊಂಬೆ ಕಾಂಗ್ರೆಸ್​ ಎಂದ ಬಿಜೆಪಿ

    ಬೆಂಗಳೂರು: ರಾಜ್ಯ ವಿಧಅನಸಭೆ ಚುನಾವಣೆಯ ರಂಗು ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಈ ಮಧ್ಯೆ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿವೆ.

    ಇನ್ನು ಕಾಂಗ್ರೆಸ್​ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬಜರಂಗದಳವನ್ನು ನಿಷೇಧಿಸುವ ಅಂಶ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದ್ದು ರಾಜ್ಯದ್ಯಂತ ಹೊಸ ವಿವಾದದ ಅಲೆ ಎಬ್ಬಿಸಿದೆ.

    ಕಾಂಗ್ರೆಸ್​ ಮಾಡುತ್ತಿರುವ ಅವಮಾನ

    ಕಾಂಗ್ರೆಸ್ ಸದಾ ಶ್ರೀ ರಾಮನ ವಿಷಯದಲ್ಲಿ ರಾಜಕಾರಣ ಮಾಡುತ್ತಾ ಬಂದಿತ್ತು. ಈಗ ಜೈ ಭಜರಂಗಬಲಿ ಎನ್ನುವ ಹನುಮಾನ್ ಸೇವಕರನ್ನು ಬಂಧಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಈ ಪುಣ್ಯಭೂಮಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿ ಕಿಡಿಕಾರಿದೆ.

    ಇದನ್ನೂ ಓದಿ: VIDEO| ಶಾಲೆಯ ಆವರಣದಲ್ಲಿ ಅವಿತು ಕುಳಿತಿತ್ತು ಕರಡಿ; ಮುಂದೇನಾಯ್ತು ಗೊತ್ತಾ?

    PFIನ ಕೈಗೊಂಬೆ

    PFIನ ಕೈಗೊಂಬೆಯಾಗಿರುವ ಕರ್ನಾಟಕ ಕಾಂಗ್ರೆಸ್​ , ಬಜರಂಗಬಲಿ ಆಂಜನೇಯನ ಭಕ್ತರನ್ನು ನಿಷೇಧಿಸುತ್ತೇವೆ ಎನ್ನುವ ಮೂಲಕ, ತನ್ನ ಹಿಂದೂ ವಿರೋಧಿ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಚುನಾವಣೆಯಲ್ಲಿ ನಿಮಗೆ ಕನ್ನಡಿಗರು ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿ ಎಚ್ಚರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts