VIDEO| ಶಾಲೆಯ ಆವರಣದಲ್ಲಿ ಅವಿತು ಕುಳಿತಿತ್ತು ಕರಡಿ; ಮುಂದೇನಾಯ್ತು ಗೊತ್ತಾ?

deer attack
Published on

ವರ್ಜಿನಿಯಾ: ನಾವು ಪ್ರತಿನಿತ್ಯ ಒಂದಿಲ್ಲೊಂದು ಅನಿರೀಕ್ಷಿತ ಘಟನೆಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ ಮತ್ತು ಕೆಲವೊಮ್ಮೆ ನಮಗೂ ಅನುಭವ ಆಗಿರುತ್ತದೆ.

ಇದೀಗ ಯುನೈಟೆಡ್​ ಸ್ಟೇಟ್ಸ್​ನ ವರ್ಜಿನಯಾದ ಜೆಲಾ ಎಂಬ ಪ್ರದೇಶದಲ್ಲಿರುವ ಎಲಿಮೆಂಟರಿ ಶಾಲೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ಎಲ್ಲರೂ ನಿಬ್ಬೆರಗಾಗಿದ್ದಾರೆ.

ಅನಿರೀಕ್ಷಿತ ಅತಿಥಿ

ಎಂದಿನಂತೆ ಶಾಲೆಯ ಪ್ರಾಂಶುಪಾಲ ಜೇಮ್ಸ್​ ಮಾರ್ಷ್​ ಆವರಣದಲ್ಲಿರುವ ಕಸದ ಬುಟ್ಟಿಯ ಬೀಗವನ್ನು ತೆಗೆಯುವ ವೇಳೆ ಅನಿರೀಕ್ಷಿತ ಅತಿಥಿ ಒಬ್ಬರು ಎದುರಾಗಿದ್ದಾರೆ.

ಕಸದ ಬುಟ್ಟಿಯ ಬಾಗಿಲು ತೆಗೆಯುತ್ತಿದ್ದಂಗೆ ಕರಡಿ ಹೊರಬಂದಿದ್ದು ಈ ಇಬ್ಬರು ಒಬ್ಬರನ್ನೊಬ್ಬರು ನೋಡಿದ ಕ್ಷಣ ವಿರುದ್ಧ ದಿಕ್ಕಿನಲ್ಲಿ ಒಡಲು ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ಭಿನ್ನ ವಿಭಿನ್ನ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಪ್ರಾಂಶುಪಾಲ ಮಾರ್ಷ್​ ಕರಡಿಯೂ ಬುಟ್ಟಿಯ ಮುಚ್ಚಳದ ಮೂಲಕ ಪ್ರವೇಶಿಸಿ ಬೀಗ ಹಾಕಿದ ನಂತರ ಹೊರಬರಲು ಆಗದೆ ಅಲ್ಲಿಯೇ ಉಳಿದು ಬಿಟ್ಟಿದೆ. ಯಾರಿಗೂ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net