ಭದ್ರತಾ ಲೋಪ; ಏಕಾಏಕಿ ಓಡೋಡಿ ಬಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಕಾಲಿಗೆ ಬಿದ್ದ ಯುವಕ| Security Lapse

Untitled design (25)
Published on

Security Lapse: ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ಪುಜಫರಪುರ್​ ಜಿಲ್ಲೆಗೆ ಭೇಟಿ ನೀಡಿದ ಸಮಯದಲ್ಲಿ ಭದ್ರತಾ ಲೋಪವಾಗಿದೆ. ಹೆಲಿಕಾಪ್ಟರ್ ಬಳಿ ನಿಂತಿದ್ದ ತೇಜಸ್ವಿ ಬಳಿ ಏಕಾಏಕಿ ಓರ್ವ ಯುವಕ ಓಡೋಡಿ ಬಂದು ಕಾಲಿಗೆ ಬಿದ್ದು ಆತಂಕ ಸೃಷ್ಟಿಸಿದ್ದಾನೆ ಎಂದು ಭಾನುವಾರ(ಸೆ. 14) ವರದಿಯಾಗಿದೆ.

ಘಟನೆಗೂ ಮುನ್ನ ತೇಜಸ್ವಿ ಯಾದವ್ ಮುಜಫರ್​​ಪುರದ ಕಾಂತಿ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ನಂತರ ಸಾರ್ವಜನಿಕ ಸಭೆ ಮುಗಿಸಿ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್ ಮೂಲಕ ಹೊರಡುವ ಸಿದ್ದರಾಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕಪ್ಪು ಶರ್ಟ್​ ಧರಿಸಿದ್ದ ಯುವಕನೊಬ್ಬ ಭದ್ರತಾ ಸಿಬ್ಬಂದಿಯನ್ನು ಭೇದಿಸಿ ತೇಜಸ್ವಿ ಕಾಲಿಗೆ ಬಿದ್ದಿದ್ದಾನೆ. ತಕ್ಷಣ ಭದ್ರತಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಯುವಕನನ್ನು ಶರೀಪುಲ್ಲಾ ಇಸ್ಲಾಂ ಎಂದು ಗುರುತಿಸಲಾಗಿದೆ.

ಏತನ್ಮಧ್ಯೆ ಯುವಕ ತೇಜಸ್ವಿ ಕಾಲಿಗೆ ಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವು ನೆಟಿಜನ್‌ಗಳು ಇದು ತೇಜಸ್ವಿ ಯಾದವ್ ಅವರ ಮೇಲಿನ ಮೆಚ್ಚುಗೆಗೆ ಸಾಕ್ಷಿ ಎಂದು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಇದನ್ನು ಗಂಭೀರ ಭದ್ರತಾ ಲೋಪ ಎಂದು ಟೀಕಿಸಿದ್ದಾರೆ. ತೇಜಸ್ವಿ ಪ್ರಕರಣದಲ್ಲಿ ಇಂತಹ ಭದ್ರತಾ ಲೋಪ ಸಂಭವಿಸಿರುವುದು ಇದೇ ಮೊದಲಲ್ಲ. ಹಿಂದೆಯೂ ಇದೇ ರೀತಿಯ ಭದ್ರತಾ ಲೋಪಗಳು ಸಂಭವಿಸಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net