More

    ಪಶ್ಚಿಮ ಬಂಗಾಳದ ಬ್ಯಾನ್​ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ: ದಿ ಕೇರಳ ಸ್ಟೋರಿ ಚಿತ್ರತಂಡಕ್ಕೆ ಗೆಲುವು

    ನವದೆಹಲಿ: ದೇಶಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ “ದಿ ಕೇರಳ ಸ್ಟೋರಿ” ಸಿನಿಮಾ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ಹೇರಿರುವ ನಿಷೇಧಕ್ಕೆ ಸುಪ್ರೀಂಕೋರ್ಟ್​ ಇಂದು (ಮೇ 18) ತಡೆ ನೀಡಿದೆ.

    ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನವನ್ನು ಬ್ಯಾನ್​ ಮಾಡಿ ಅಲ್ಲಿನ ಸರ್ಕಾರ ಮೇ 8ರಂದು ಆದೇಶ ಹೊರಡಿಸಿತ್ತು. ಇದೀಗ ಆ ಆದೇಶಕ್ಕೆ ಸುಪ್ರೀಂಕೋರ್ಟ್​ ತಡೆ ನೀಡಿದ್ದು, ದಿ ಕೇರಳ ಸ್ಟೋರಿ ಚಿತ್ರತಂಡಕ್ಕೆ ದೊಡ್ಡ ಗೆಲುವಾಗಿದೆ.

    ಬ್ಯಾನ್​ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂಕೋರ್ಟ್​, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದೆ.

    ಇದನ್ನೂ ಓದಿ: ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ: ಆರೋಗ್ಯ ಅಧಿಕಾರಿ ಮರ್ದಾನಬಿ ಬಳಿಗಾರ ಸಲಹೆ

    ಭದ್ರತೆಗೆ ಸೂಚನೆ

    ಬಂಗಾಳದಲ್ಲಿ ಸಿನಿಮಾ ಬ್ಯಾನ್​ ಮಾಡಿರುವುದನ್ನು ಖಂಡಿಸಿ ಹಾಗೂ ತಮಿಳುನಾಡಿನಲ್ಲಿ ಬ್ಯಾನ್​ ಆಗುವ ಸೂಚನೆ ಹಿನ್ನೆಲೆಯಲ್ಲಿ ದಿ ಕೇರಳ ಸ್ಟೋರಿ ಚಿತ್ರತಂಡ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಇದೀಗ ತಮಿಳುನಾಡಿಗೂ ಸೂಚನೆ ನೀಡಿರುವ ನ್ಯಾಯಾಲಯ, ಯಾವುದೇ ಕಾರಣಕ್ಕೆ ತಮಿಳುನಾಡಿನಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನಕ್ಕೆ ಅಡ್ಡಿಪಡಿಸಬಾರದು ಮತ್ತು ಸಿನಿಮಾ ಬಿಡುಗಡೆಗೆ ಅಗತ್ಯವಾದ ಭದ್ರತೆ ಒದಗಿಸುವಂತೆ ಸೂಚನೆ ನೀಡಿದೆ.

    ಚಿತ್ರತಂಡಕ್ಕೆ ಸೂಚನೆ ಒಂದನ್ನು ನೀಡಿರುವ ಸುಪ್ರೀಂಕೋರ್ಟ್​, ಈ ಕತೆ ಕಾಲ್ಪನಿಕ ಆಧಾರಿತ ಮತ್ತು 32 ಸಾವಿರ ಯುವತಿಯರು ಕೇರಳದಿಂದ ಕಾಣೆಯಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ ಎಂಬ ಹಕ್ಕು ನಿರಾಕರಣೆ (ಡಿಸ್ಕ್ಲೇಮರ್​) ಅಳವಡಿಸುವಂತೆ ಸೂಚನೆ ನೀಡಿದೆ.

    ಮೇ 12ರಂದು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ದಿ ಕೇರಳ ಸ್ಟೋರಿಯನ್ನು ಬಂಗಾಳದಲ್ಲಿ ಏಕೆ ಬಿಡುಗಡೆ ಮಾಡಬಾರದು? ಇದು ಕಲಾತ್ಮಕ ಸ್ವಾತಂತ್ರ್ಯವಲ್ಲವೇ? ಎಂದು ಪ್ರಶ್ನಿಸಿದ್ದ ಉನ್ನತ ನ್ಯಾಯಾಲಯ, ದೇಶದ ಇತರೆ ಭಾಗಗಳಲ್ಲಿ ಸಿನಿಮಾ ಬಿಡುಗಡೆಯಾಗಿರುವುದನ್ನು ಉಲ್ಲೇಖಿಸಿ, ಪಶ್ಚಿಮ ಬಂಗಾಳ ಬೇರೆ ರಾಜ್ಯಗಳಿಗಿಂತ ಭಿನ್ನವೇನಲ್ಲ ಎಂದು ಕಿಡಿಕಾರಿತ್ತು.

    ಮೇ 8ರಂದು ಸುದ್ದಿಗೋಷ್ಠಿ ನಡೆಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದ್ವೇಷ ಮತ್ತು ಹಿಂಸಾಚಾರವನ್ನು ತಡೆಗಟ್ಟುವ ಉದ್ದೇಶದಿಂದ ವಿವಾದಾತ್ಮಕ ಸಿನಿಮಾ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಆದೇಶಿಸಿದ್ದರು.

    ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ; ಬಡವರ ಪಾಲಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಸಿಗಲಿದ್ಯಾ ಮರುಜೀವ?

    ಮೇ 5ರಂದು ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸುಸಿಪ್ಟೋ ಸೇನ್​ ನಿರ್ದೇಶನ ಮಾಡಿದ್ದಾರೆ. ಕೇರಳದ 32 ಸಾವಿರಕ್ಕೂ ಅಧಿಕ ಯುವತಿಯರನ್ನು ಮತಾಂತರಿಸಿ, ಐಸಿಸ್ ಪರ ಹೋರಾಡಲು, ಸಿರಿಯಾ, ಇರಾಕ್, ಅಫ್ಘಾನಿಸ್ತಾನ ದೇಶಗಳಿಗೆ ಸಾಗಿಸಲಾಗಿದೆ ಎಂಬ ಸಂಭಾಷಣೆ ಹಲವರ ಅಸಮಾಧಾನಕ್ಕೆ ಕಾರಣವಾಗಿದ್ದು, ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. (ಏಜೆನ್ಸೀಸ್​)

    ಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್​ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ: ನಾಲ್ವರ ಬಂಧನ

    ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ:ನಿಖಿಲ್ ಕುಮಾರಸ್ವಾಮಿ

    ಆದಾಯ ತೆರಿಗೆ ಇಲಾಖೆ ಹೆಸರಿನಲ್ಲಿ ನಕಲಿ ಆ್ಯಪ್: ಆನ್‌ಲೈನ್‌ನಲ್ಲಿ ಟ್ಯಾಕ್ಸ್ ಸ್ವೀಕರಿಸುವ ನೆಪದಲ್ಲಿ ಮೋಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts