More

    ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ: ಆರೋಗ್ಯ ಅಧಿಕಾರಿ ಮರ್ದಾನಬಿ ಬಳಿಗಾರ ಸಲಹೆ

    ಅಳವಂಡಿ: ಡೆಂೆ ರೋಗವು ಸೋಂಕಿತ ಸೊಳ್ಳೆ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿದರೆ ಮಾತ್ರ ಈ ರೋಗದಿಂದ ದೂರ ಇರಬಹುದು ಎಂದು ಸಮುದಾಯ ಆರೋಗ್ಯ ಅಧಿಕಾರಿ ಮರ್ದಾನಬೀ ಬಳಿಗಾರ ಹೇಳಿದರು.


    ಸಮೀಪದ ಬೇಳೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಕಾತರಕಿ-ಗುಡ್ಲಾನೂರು ಸಮುದಾಯ ಆರೋಗ್ಯ ಕೇಂದ್ರದಿಂದ ರಾಷ್ಟ್ರೀಯ ಡೆಂೆ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇದನ್ನೂ ಓದಿ: ಪರಿಸರ ಸ್ವಚ್ಛತೆ ಪರಮೋಚ್ಚ ಧರ್ಮವಾಗಲಿ…

    ಮಲಗುವಾಗ ಸೊಳ್ಳೆ ಪರದೆ ಬಳಸಬೇಕು

    ನೀರಿನ ತೊಟ್ಟಿ, ನಿಂತ ನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ಮಲಗುವಾಗ ಸೊಳ್ಳೆ ನಿರೋಧಕ ಬತ್ತಿ, ಸೊಳ್ಳೆ ಪರದೆ ಬಳಸಬೇಕು. ವಾರಕ್ಕೊಮ್ಮೆ ನೀರು ಸಂಗ್ರಹ ತೊಟ್ಟಿಗಳನ್ನು ಖಾಲಿ ಮಾಡಿ ಒಣಗಿಸಿ ತುಂಬಬೇಕು. ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗೆ ಬಂದಾಗ ಮಾಹಿತಿ ನೀಡಿ ಸಹಕರಿಸಬೇಕು ಎಂದರು. ಆಶಾ ಕಾರ್ಯಕರ್ತೆ ರೇಣುಕಾ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts