More

    ನೆಹರು ಮೈದಾನ ಪುನಶ್ಚೇತನಕ್ಕೆ ಪೂರಕ ಯೋಜನೆ

    ಸಾಗರ: ನಗರದ ನೆಹರು ಮೈದಾನದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆ ರೂಪಿಸಲಾಗುತ್ತದೆ. ಹಿರಿಯರಿಗೆ ವಾಕಿಂಗ್ ಜತೆಗೆ ಕ್ರೀಡೆಗಳಿಗೂ ಅನುಕೂಲವಾಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು
    ನೆಹರು ಮೈದಾನದಲ್ಲಿ ಗುರುವಾರ ನಿಸರ್ಗ ವಾಯುವಿಹಾರಿಗಳ ಸಂಘದಿಂದ ನೀಡಲಾದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ದೈನಂದಿನ ಆರೋಗ್ಯ ಕಾಪಾಡಿಕೊಳ್ಳಲು ವಾಯುವಿಹಾರ ಉತ್ತಮ ಮಾರ್ಗ. ವಾಯುವಿಹಾರಕ್ಕೆ ಬೇಕಾದ ಸೌಲಭ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.
    ಈ ಹಿಂದೆ ಶಾಸಕನಾಗಿದ್ದಾಗ ನೆಹರು ಮೈದಾನ ಅಭಿವೃದ್ಧಿಗೆ ಬೇಕಾದ ಎಲ್ಲ ಸೌಲಭ್ಯ ನೀಡಿದ್ದೇನೆ. ಈಗ ಮೈದಾನ ತನ್ನ ರೂಪ ಕಳೆದುಕೊಂಡಿದ್ದು ಪುನಶ್ಚೇತನದ ಅಗತ್ಯವಿದೆ. ಮೈದಾನದ ಅಭಿವೃದ್ಧಿಗೆ ಶೀಘ್ರ ಗಮನ ಹರಿಸಲಾಗುತ್ತದೆ. ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಇನ್ನಿತರ ಕ್ರೀಡೆಗಳನ್ನಾಡುತ್ತಿರುವ ಯುವ ಕ್ರೀಡಾಪಟುಗಳು ಹಿರಿಯರು ವಾಕಿಂಗ್ ಮಾಡುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
    ವಾಯುವಿಹಾರಿಗಳ ಸಂಘದ ಯು.ಜೆ.ಮಲ್ಲಿಕಾರ್ಜುನ್ ಮಾತನಾಡಿ, ನೆಹರು ಮೈದಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿರಿಯರು, ಕಿರಿಯರು ವಾಯುವಿಹಾರಕ್ಕೆ ಬರುತ್ತಾರೆ. ವಿಶ್ರಾಂತಿಗೆ ಇರಬೇಕಾದಷ್ಟು ಆಸನ ವ್ಯವಸ್ಥೆ ಇಲ್ಲ. ಹೆಚ್ಚಿನ ಆಸನ ವ್ಯವಸ್ಥೆ ಜತೆಗೆ ಮೈದಾನದ ಸ್ವಚ್ಛತೆ ಬಗ್ಗೆ ಗಮನಹರಿಸಲು ನಗರಸಭೆಗೆ ಸೂಚಿಸಬೇಕು. ಮೈದಾನದ ಎದುರಿನ ರಸ್ತೆ ಇಕ್ಕೆಲಗಳನ್ನು ಸರಿಪಡಿಸಿದರೆ ಅಪಘಾತಗಳು ತಪ್ಪುತ್ತದೆ. ಈ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
    ಅ.ರಾ.ಲಂಬೋದರ್, ಐ.ಎನ್.ಸುರೇಶಬಾಬು, ಕೆ.ವಿ.ಜಯರಾಮ್, ನಾರಾಯಣಪ್ಪ, ಕೆ.ವಿ.ಲಕ್ಷ್ಮಣ್, ಗಣಪತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts