More

    ಆಲಮೇಲ ಬಸ್ ನಿಲ್ದಾಣ ಸ್ವಚ್ಛತೆ

    ಆಲಮೇಲ: ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತದ ಅಧಿಕಾರಿ ಲಾಲಸಾಬ ದೇವರಮನಿ ನೇತೃತ್ವದಲ್ಲಿ ಪೌರ ಕಾರ್ಮಿಕರು ಕಸ ಸಾಗಣೆ ವಾಹನಗಳ ಸಮೇತ ಸೋಮವಾರ ಬಸ್ ನಿಲ್ದಾಣಕ್ಕೆ ಆಗಮಿಸಿ ಅಕ್ಕ-ಪಕ್ಕ ಎಸೆದಿದ್ದ ಘನತ್ಯಾಜ ಹಾಗೂ ಸತ್ತ ಹಂದಿಗಳನ್ನು ತೆರವುಗೊಳಿಸಿ ನಿಲ್ದಾಣ ಸುತ್ತ ಮುತ್ತ ಕ್ರಿಮಿನಾಶಕ, ಔಷಧ ಸಿಂಪಡಿಸಿದರು.

    ಪಟ್ಟಣದ ಬಸ್ ನಿಲ್ದಾಣದಲ್ಲಿ ಕೊಳಚೆ ಕುರಿತು ಸೋಮವಾರ ವಿಜಯವಾಣಿಯಲ್ಲಿ ‘ಗಬ್ಬು ವಾಸನೆಗೆ ಕಂಗೆಟ್ಟ ಪ್ರಯಾಣಿಕರು’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಸ್ವಚ್ಛತೆ ಕಾರ್ಯ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ಬಸ್ ನಿಲ್ದಾಣದಲ್ಲಿ ಗಬ್ಬು ವಾಸನೆಯಿಂದ ಬೇಸತ್ತು ತಹಸೀಲ್ದಾರ್ ಹಾಗೂ ಪಪಂ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಳದೆ ಮೌನವಾಗಿದ್ದರು. ಸೋಮವಾರ ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡ ತಕ್ಷಣ ಅಧಿಕಾರಿಗಳು ಎಚ್ಚೆತ್ತು ಬಸ್ ನಿಲ್ದಾಣ ಸ್ವಚ್ಛಗೊಳಿಸಿದರು.

    ಆಲಮೇಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ನಾಯಕ ಮಾತನಾಡಿ, ನಮ್ಮ ಪೌರ ಕಾರ್ಮಿಕರು ಈಗಾಗಲೇ ಬಸ್ ನಿಲ್ದಾಣದ ಅಕ್ಕ-ಪಕ್ಕ ಸ್ವಚ್ಛಗೊಳಿಸಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ನಿಲ್ದಾಣದ ಹತ್ತಿರ ಘನತ್ಯಾಜ ಎಸೆಯುವವರನ್ನು ಗುರುತಿಸಲಾಗುವುದು. ಚಿಕನ, ಮಟನ್ ಮಳಿಗೆ ಹಾಗೂ ಹೋಟೆಲ್‌ಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts